More

    ಹುಡುಗನ ಜೊತೆಯಿರುವ ರುಕ್ಮಿಣಿ ಫೋಟೋಗಳು ವೈರಲ್​​​​, ಈ ಬಗ್ಗೆ ಸ್ಪಷ್ಟನೆ ನೀಡಿ ವದಂತಿಗಳಿಗೆ ತೆರೆ ಎಳೆದ ನಟಿ

    ಚಾರ್ಲಿ ಸಿನಿಮಾದ ನಂತರ ರಕ್ಷಿತ್‌ ಶೆಟ್ಟಿ ಅವರ ಬಹು ನಿರೀಕ್ಷಿತ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ಮೊನ್ನೆ (ಸೆ. 1) ರಿಲೀಸ್‌ ಆಗಿದೆ. ಚಿತ್ರಕ್ಕೆ ಅಭಿಮಾನಿಗಳಿಂದ ಸಖತ್‌ ರೆಸ್ಪಾನ್ಸ್‌ ಸಿಕ್ಕಿತ್ತು. ಈ ಸಿನಿಮಾ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹೆಚ್ಚಿಸಿತ್ತು. ಅದೇ ರೀತಿ ನಟಿ ರುಕ್ಮಿಣಿ ವಸಂತ್​​​ ಚೆನ್ನಾಗಿಯೇ ನಟನೆ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಡ್ಯುಯೇಟ್ ಹಾಡಿದ ಮೇಲೆ ರುಕ್ಮಿಣಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ನಟನೆ, ಮುದ್ದಾದ ನಗುವಿಗೆ ಫ್ಯಾನ್ಸ್ ಮನಸೋತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಯ್‌ಫ್ರೆಂಡ್ ಬಗ್ಗೆ ರುಕ್ಮಿಣಿ ವಸಂತ್‌ಗೆ ಪ್ರಶ್ನೆ ಕೇಳಲಾಗಿದೆ.


    ಹುಡುಗನ ಜೊತೆಯಿರುವ ರುಕ್ಮಿಣಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇಬ್ಬರ ಸಂಭಾಷಣೆ‌ ಜೊತೆ ಫೋಟೋ ಸೇರಿಸಿ ಟ್ರೋಲ್ ಮಾಡಲಾಗಿತ್ತು. ಹಾಗಾಗಿ ರುಕ್ಮಿಣಿ ವಸಂತ್ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ನಿಜನಾ ಎಂಬ ಪ್ರಶ್ನೆಗೆ ರುಕ್ಮಿಣಿ ಉತ್ತರಿಸಿದ್ದಾರೆ.


    ಫೋಟೋದಲ್ಲಿರುವುದು ನನ್ನ ಗೆಳೆಯ, ನಾನು ಇನ್ನೂ ಸಿಂಗಲ್ ಎಂದು ಸ್ಪಷ್ಟನೆ ನೀಡಿದ್ದಾರೆ. ಚಿತ್ರರಂಗಕ್ಕೆ ಹೊಸಬಳಾಗಿದ್ದರೂ ನನ್ನ ಸಿನಿಮಾಗಳ ಬಗ್ಗೆ, ನನ್ನ ಖಾಸಗಿ ಜೀವನಗಳ ಬಗ್ಗೆ ಜನ ಕೇರ್ ಮಾಡುತ್ತಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ.


    ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರುಕ್ಮಿಣಿ ಅಭಿನಯಕ್ಕೆ ಅಭಿಮಾನಿಗಳು ಫುಲ್​​ ಖುಷ್​​ ಆಗಿದ್ದಾರೆ.


    ಸಪ್ತ ಸಾಗರದಾಚೆ ಎಲ್ಲೋ ಚಿತ್ರ ರಿಲೀಸ್‌ ಆಗಿದೆ. ಕನ್ನಡದಲ್ಲಿ ಮೊದಲು ರಿಲೀಸ್ ಆಗಿದ್ದ ಈ ಚಿತ್ರ ಪರ ಭಾಷೆಗೂ ಕಾಲಿಡುತ್ತಿದೆ. ದಕ್ಷಿಣದ ಎಲ್ಲ ಭಾಷೆಯಲ್ಲೂ ಚಿತ್ರವನ್ನ ರಿಲೀಸ್ ಮಾಡೋ ಪ್ಲಾನ್ ಇದ್ದೇ ಇದೆ. ಆದರೆ ಸದ್ಯಕ್ಕೆ ತೆಲುಗು ಮತ್ತು ಮಲೆಯಾಳಂ ಭಾಷೆಯ ಸಿನಿಮಾ ರಿಲೀಸ್ ಇದೀಗ ಫಿಕ್ಸ್ ಆಗಿದೆ.
    ಸಪ್ತ ಸಾಗರದಾಚೆ ಎಲ್ಲೋ ಮಲೆಯಾಳಂ ಚಿತ್ರವನ್ನ ಇದೇ ತಿಂಗಳ 28 ರಂದು ರಿಲೀಸ್ ಮಾಡಲಾಗುತ್ತಿದೆ. ರಕ್ಷಿತ್ ಶೆಟ್ಟಿ ಅಧಿಕೃತವಾಗಿಯೇ ಈ ಒಂದು ವಿಷಯವನ್ನ ಹೇಳಿಕೊಂಡಿದ್ದಾರೆ.


    ಕನ್ನಡಿಗರನ್ನ ರಂಜಿಸಿರೋ ಈ ಚಿತ್ರ ಇದೀಗ ಪರ ಭಾಷೆಯ ಪ್ರೇಕ್ಷಕರನ್ನ ರಂಜಿಸೋಕೆ ಹೊರಟಿದೆ. ಆಯಾ ಭಾಷೆಯಲ್ಲಿಯೇ ಅಲ್ಲಿಯ ಜನ ಈ ಚಿತ್ರವನ್ನ ನೋಡಬಹುದಾಗಿದೆ. ತೆಲುಗು ಮತ್ತು ಮಲೆಯಾಳಂ ಭಾಷೆಯಲ್ಲಿ ಸದ್ಯ ಈ ಚಿತ್ರ ರಿಲೀಸ್ ಆಗುತ್ತಿದೆ. ಆದರೆ ಹಿಂದಿ ಮತ್ತು ತಮಿಳು ರಿಲೀಸ್ ವಿಷಯ ಇನ್ನು ರಿವೀಲ್ ಆಗಿಲ್ಲ ಅಂತಲೇ ಹೇಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts