

ವಿಜಯವಾಣಿ ಸುದ್ದಿಜಾಲ ಕೋಟ
ಮೊಗವೀರ ಸಂದ ವಾರ್ಗದರ್ಶಕ ನಾಡೋಜ ಡಾ.ಜಿ ಶಂಕರ್ ಅವರ 70ನೇ ವರ್ಷದ ಜನ್ಮದಿನಾಚರಣೆ ಪ್ರಯುಕ್ತ ಮೊಗವೀರ ಯುವ ಸಂಟನೆ ಮತ್ತು ಮಹಿಳಾ ಸಂಟನೆಯ ಕೋಟೇಶ್ವರ ಟಕದಿಂದ ಮನೆಮನೆಗೂ ಹಸಿರು ಕಾರ್ಯಕ್ರಮದಡಿ ಮನೆಗೊಂದು ಸಸಿ ವಿತರಣೆ ಕಾರ್ಯಕ್ರಮ ಭಾನುವಾರ ಆಯೋಜನೆಗೊಂಡಿತು.
ಸಂಟನೆಯ ಕಾರ್ಯಕರ್ತ ಜಗದೀಶ್ ಮೇಸ್ತ್ರಿ ಅವರ ಮನೆಯಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿವಿಧ ತಂಡಗಳಾಗಿ ಹಲವು ಮನೆಗಳಿಗೆ ಭೇಟಿ ನೀಡಿ ಗಿಡ ನೆಡಲಾಯಿತು. ಜತೆಗೆ ಅಶಕ್ತರಿಗೆ, ಅನಾರೋಗ್ಯಕ್ಕೆ ತುತ್ತಾದವರನ್ನು ಸಂತೈಸಲಾಯಿತು.
ಮೊಗವೀರ ಯುವ ಸಂಟನೆ ಕೋಟೇಶ್ವರ ಟಕದ ಅಧ್ಯಕ್ಷ ರಾವೇಂದ್ರ ಹರಪ್ಪನಕೆರೆ ಅಧ್ಯಕ್ಷತೆ ವಹಿಸಿದ್ದರು. ಸಂದ ಕೋಟೇಶ್ವರ ಟಕದ ಸ್ಥಾಪಕ ಅಧ್ಯಕ್ಷ ಸತೀಶ್ ಎಂ.ನಾಯಕ್, ಗೌರವ ಸಲಹೆಗಾರ ಜಗದೀಶ ಮೊಗವೀರ ವಾರ್ಕೊಡು, ಗೌರವಾಧ್ಯಕ್ಷ ಆನಂದ್ ಕುಂದರ್, ವಾಜಿ ಅಧ್ಯಕ್ಷ ಸುರೇಶ್ ಚಾತ್ರಬೆಟ್ಟು, ವಾಜಿ ಗೌರವಾಧ್ಯಕ್ಷ ಸುರೇಶ್ ಮೊಗವೀರ ಶಾನಾಡಿ, ಮಹಿಳಾ ಅಧ್ಯಕ್ಷ ಗಾಯತ್ರಿ ವಿಕ್ರಂ ತೆಕ್ಕಟ್ಟೆ, ಮಹಿಳಾ ಕಾರ್ಯದರ್ಶಿ ರಾಜೇಶ್ವರಿ ವಾರ್ಕೋಡು, ವಾಜಿ ಅಧ್ಯಕ್ಷೆ ಉಷಾ ವಾರ್ಕೊಡು, ಶಾರದಾ ಮೂಡುಗೋಪಾಡಿ, ಪದಾಧಿಕಾರಿಗಳು ಹಾಗೂ ಊರ ಗುರಿಕಾರರು ಉಪಸ್ಥಿತರಿದ್ದರು. ಕಾರ್ಯದರ್ಶಿಯಾದ ನಾಗರಾಜ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.