

ಹೆಬ್ರಿ: ಗ್ರಾಮೀಣ ಭಾಗದಲ್ಲಿ ಶಾಂತಿನಿಕೇತನ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆದು ಸಾಮಾಜಿಕ ಕೆಲಸ ಮಾಡುತ್ತಾ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಕುಚ್ಚೂರು ಹೆರ್ಗ ವಿಠಲ ಶೆಟ್ಟಿ ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ಹರ್ಷ ಶೆಟ್ಟಿ ಬೇಳಂಜೆ ಹೇಳಿದರು.
ಶಾಂತಿನಿಕೇತನ ಸಂಸ್ಥಾಪನ ದಿನದ ಅಂಗವಾಗಿ ಸಂಸ್ಥೆಯವರು ಶಾಲೆಗೆ ನೀಡಿದ ಕುರ್ಚಿಗಳನ್ನು ಸ್ವೀಕರಿಸಿ ಮಾತನಾಡಿದರು.
ಶಾಂತಿನಿಕೇತನ ಸಂಸ್ಥಾಪಕ ರಾಜೇಶ್ ಮಾತನಾಡಿ, ಮಕ್ಕಳಿಗೆ ಕಲಿಕೆಗೆ ಪೂರಕವಾಗುವ ವಾತಾವರಣ ಸೃಷ್ಟಿ ಮಾಡುವ ಹಿನ್ನೆಲೆಯಲ್ಲಿ ಸಂಘ ಸದಸ್ಯರೆಲ್ಲ ಸೇರಿ ಕುರ್ಚಿಗಳನ್ನು ನೀಡಿದ್ದೇವೆೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಯೋಜನೆ ರೂಪಿಸಿಕೊಂಡು ಶಾಲೆಗೆ ಕೊಡುಗೆ ನೀಡುವ ಅಭಿಲಾಷೆ ಹೊಂದಿದ್ದೇವೆ ಎಂದರು.
ಮುಖ್ಯ ಶಿಕ್ಷಕಿ ಪ್ರಭಾವತಿ ಅಧ್ಯಕ್ಷತೆ ವಹಿಸಿದ್ದರು. ಶಾಂತಿನಿಕೇತನ ಪ್ರಧಾನ ಪೋಷಕರಾದ ಡಾ.ಭಾರ್ಗವಿ ಆರ್.ಐತಾಳ್, ಕಿರಣ್ ತೋಳಾರ್, ಹೆಬ್ರಿ ತುಳಸಿ ಗ್ರೂಪ್ನ ಬೇಳಂಜೆ ಹರೀಶ ಪೂಜಾರಿ, ಶಾಂತಿನಿಕೇತನ ಅಧ್ಯಕ್ಷ ದೀಕ್ಷಿತ್ ನಾಯಕ್, ಆಡಳಿತ ಮಂಡಳಿ ಸದಸ್ಯರಾದ ಮಹೇಶ್, ರಾಜೇಶ್ರೀ, ನಿತಿನ್, ನರೇಂದ್ರ, ವಿದ್ಯಾರ್ಥಿ ಘಟಕದ ಸದಸ್ಯರು ಇದ್ದರು.