ಅಕ್ಕಿಗಾಗಿ ಮತಾಂತರ ಆದವರ ಮಾತಿನಿಂದ ಸನಾತನ ಹಿಂದೂ ಧರ್ಮ ನಿರ್ಮೂಲನೆ ಅಗುತ್ತೇನ್ರಿ ? ಹಾರಿಕಾ ಖಾರದ ಪ್ರಶ್ನೆ

ಸನಾತನ ಧರ್ಮದ ಮೂಲಸತ್ವವಿರುವುದು ಸೂರ್ಯನ ತೇಜದ ಪ್ರಖರತೆಯಲ್ಲಿ, ಇಂತಹ  ಸನಾತನ ಧರ್ಮದ ನಿರ್ಮೂಲನೆ ಯಾರಿಂದಲೂ ಸಾಧ್ಯವಿಲ್ಲ. ಇಡೀ ವಿಶ್ವವೇ ಹಿಂದೂ ಧರ್ಮದ ಆಚಾರ-ವಿಚಾರ,ಸಂಸ್ಕೃತಿ ಸ್ವೀಕಾರ ಮಾಡುತ್ತಿವೆ.ಭಾರತದ ಮೇಲೆ ಎಷ್ಟೋ ದಾಳಿಗಳು ನಡೆದರೂ, ಸನಾತನ ಧರ್ಮ ನಾಶಪಡಿಸಲು ಆಗಲಿಲ್ಲ
IMG-20230928-WA0010
Published on


ಸನಾತನ ಹಿಂದು ಧರ್ಮ ನಿರ್ಮೂಲನೆ ಯಾರಿಂದಲೂ ಸಾಧ್ಯವಿಲ್ಲ ಎಂದ ಹಾರಿಕಾ ಮಂಜುನಾಥ ! ಕಲಬುರಗಿಯಲ್ಲಿ ಹಿಂದು ಮಹಾಗಣಪತಿ ಉತ್ಸವ ಉಪನ್ಯಾಸ
ವಿಜಯವಾಣಿ ಸುದ್ದಿಜಾಲ ಕಲಬುರಗಿ
 ಕ್ಷಾತ್ರ ಪರಂಪರೆ ಹೊಂದಿರುವAತಹ ಸನಾತನ ಹಿಂದು ಧರ್ಮದ ಉಳಿವಿಗಾಗಿ ಪ್ರತಿಯೊಬ್ಬ ಸಂಘಟಿತರಾಗುವ ಅವಶ್ಯಕತೆಯಿದೆ. ಆಗ ಮಾತ್ರ ಸನಾತನ ಧರ್ಮದ ಉಳಿವು ಸಾಧ್ಯವಿದೆ ಎಂದು ಖ್ಯಾತ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.
ಬುಧವಾರ ರಾತ್ರಿ ನಗರದ ಕೋಟೆಯ ಮುಂಭಾಗದಲ್ಲಿ ಹಿಂದು ಜಾಗರಣ ವೇದಿಕೆಯಿಂದ ಪ್ರತಿಷ್ಠಾಪಿಸಿರುವ  ಹಿಂದು ಮಹಾಗಣಪತಿಯ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನಾತನ ಧರ್ಮದ ಕುರಿತು ವಿಶೇಷ ಉಪನ್ಯಾಸ ನೀಡಿ, ಸನಾತನ ಧರ್ಮದ ನಿರ್ಮೂಲನೆ ಮಾಡಬೇಕು ಎಂದು ಮತಾಂತರಗೊAಡ ಕೆಲವು ಅವಿವೇಕಿಗಳು ಮಾತನಾಡುತ್ತಿz್ದÁರೆ. ಆದರೆ, ಎಲ್ಲಿಯವರೆಗೆ ಸೂರ್ಯನ ಕಿರಣಗಳು ಭೂಮಿಯನ್ನು ಸ್ಪರ್ಶಿಸುತ್ತದೆಯೋ ಮತ್ತು ಎಲ್ಲಿಯವರೆಗೂ ಪ್ರಕೃತಿ ಜೀವಂತವಾಗಿ ಇರಲಿದೆಯೋ,ಅಲ್ಲಿಯವರೆಗೆ ಸನಾತನ ಹಿಂದೂ ಧರ್ಮ ಶಾಶ್ವತವಾಗಿ ಉಳಿಯಲಿದೆ ಎಂದರು.
ಸನಾತನ ಧರ್ಮವು  ಶಾಶ್ವತವಾಗಿ ಉಳಿಯಲಿದೆ ಎಂದು ಶ್ರೀಕೃಷ್ಣ ಹೇಳಿರುವಾಗ, ಎರಡು ಕೆಜಿ ಅಕ್ಕಿಗೆ ಮತಾಂತರಗೊAಡAತ ತಮಿಳುನಾಡಿನ ರಾಜಕೀಯ ಮುಖಂಡರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಸನಾತನ ಧರ್ಮ,ಹಿಂದೂ ಸಂಸ್ಕೃತಿ ಯಾರಿಂದಲೂ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.
ಸನಾತನ ಧರ್ಮದ ಮೂಲಸತ್ವವಿರುವುದು ಸೂರ್ಯನ ತೇಜದ ಪ್ರಖರತೆಯಲ್ಲಿ, ಇಂತಹ  ಸನಾತನ ಧರ್ಮದ ನಿರ್ಮೂಲನೆ
ಯಾರಿಂದಲೂ ಸಾಧ್ಯವಿಲ್ಲ. ಇಡೀ ವಿಶ್ವವೇ ಹಿಂದೂ ಧರ್ಮದ ಆಚಾರ-ವಿಚಾರ,ಸಂಸ್ಕೃತಿ ಸ್ವೀಕಾರ ಮಾಡುತ್ತಿವೆ.ಭಾರತದ ಮೇಲೆ ಎಷ್ಟೋ ದಾಳಿಗಳು ನಡೆದರೂ, ಸನಾತನ ಧರ್ಮ ನಾಶಪಡಿಸಲು ಆಗಲಿಲ್ಲ. ಹೀಗಾಗಿ ಸನಾತನ ಧರ್ಮದ ನಿರ್ಮೂಲನೆ ಮಾಡಬೇಕೆಂಬ ವ್ಯಕ್ತಿಗಳಿಗೆಅವರದ್ದೇ ದಾಟಿಯಲ್ಲಿ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಕರೆ ನೀಡಿದರು.
ಹಿಂದೂ ಜಾಗರಣ ವೇದಿಕೆ ಅದ್ಯಕ್ಷ ನಾಗೇಂದ್ರ ಕಬಾಡೆ ಪ್ರಾಸ್ತಾವಿಕವಾಗಿ ಮಾತನಾಡಿ,ಕಳೆದ ನಾಲ್ಕು ದಶಕಗಳಿಂದ ಹಿಂದು ಜಾಗರಣ ವೇದಿಕೆ ಹಿಂದೂ ಸಮಾಜವನ್ನು ಒಗ್ಗೂಡಿಸಿವಂತಹ ಕಾರ್ಯದಲ್ಲಿ ತೊಡಗಿದೆ.ಕಳೆದ ಎರಡು ವರ್ಷಗಳಿಂದ ವೇದಿಕೆ ಅಡಿಯಲ್ಲಿ ಗಣಪತಿ ಪ್ರತಿಷ್ಠಾಪನೆ ಕೆಲಸ ನಡೆದಿದ್ದು,ನಿರಂತರವಾಗಿ ನಡೆಯಲಿದೆ ಎಂದರು.
ರಾಷ್ಟಿçÃಯ ಸ್ವಯಂ ಸೇವಕ ಸಂಘದಿAದ ಘೋಷ ವಾದ್ಯಗಳೊಂದಿಗೆ  ಗಣೇಶ ವಂದನಾ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ರಾಘವೇಂದ್ರ ಚೌಧ್ರಿ, ಮಂಜುನಾಥ ಪವಾರ, ರುದಪ್ಪö್ಪ ಗಂಜಿ, ಡಾ.ಸುಧಾ ಹಾಲಕಾಯಿ,  ಸಂಜಯ ಗುಪ್ತಾ, ಸುರೇಶ ಟೆಂಗಳಿ, ರವಿ ಮುತ್ತಿನ, ಮಹೇಶ ರಂಗದಾಳ ಮೊದಲಾದವರಿದ್ದರು. ಉಪನ್ಯಾಸದಲ್ಲಿ ನಗರದ ವಿವಿಧ ಕಡೆಗಳಿಂದ ಆಗಮಿಸಿದ್ದ ಸಹಸ್ರಾರು ಜನರು ಭಾಗಿಯಾಗಿದ್ದರು.

ಯಾಯಾರಿಂದಲೂ ಆಗಿಲ್ಲ

ಸನಾತನ ಧರ್ಮದ ಮೂಲಸತ್ವವಿರುವುದು ಸೂರ್ಯನ ತೇಜದ ಪ್ರಖರತೆಯಲ್ಲಿ, ಇಂತಹ  ಸನಾತನ ಧರ್ಮದ ನಿರ್ಮೂಲನೆ
ಯಾರಿಂದಲೂ ಸಾಧ್ಯವಿಲ್ಲ. ಇಡೀ ವಿಶ್ವವೇ ಹಿಂದೂ ಧರ್ಮದ ಆಚಾರ-ವಿಚಾರ,ಸಂಸ್ಕೃತಿ ಸ್ವೀಕಾರ ಮಾಡುತ್ತಿವೆ.ಭಾರತದ ಮೇಲೆ ಎಷ್ಟೋ ದಾಳಿಗಳು ನಡೆದರೂ, ಸನಾತನ ಧರ್ಮ ನಾಶಪಡಿಸಲು ಆಗಲಿಲ್ಲ.

ಡಾ.ಸುಧಾ ಹಾಲಕಾಯಿ ಬಿಜೆಪಿ ರಾಜ್ಯ ಪ್ರಕೋಷ್ಠಗಳ ವಕ್ತಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net