ಹೇರಂಜಾಲು ಶಾಲೆಯಲ್ಲಿ ಸಂಸ್ಕೃತಂ ಸರಣಿ

samkritha
ಹೇರಂಜಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಸ್ಮಾಕಂ ಸಂಸ್ಕೃತಂ ಸರಣಿ ಕಾರ್ಯಕ್ರಮ ಉದ್ಘಾಟನೆಗೊಂಡಿತು
Published on

ಬೈಂದೂರು: ಹೇರಂಜಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತೋತ್ಸವ ಅಂಗವಾಗಿ ಬಹುಳಾಪುರದ ಶ್ರೀ ಮಹಾಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಆಶ್ರಯದಲ್ಲಿ ಅಸ್ಮಾಕಂ ಸಂಸ್ಕೃತಂ ಸರಣಿ ಕಾರ್ಯಕ್ರಮವನ್ನು ಪ್ರಶಾಂತ್ ಅರೆಶಿರೂರು ಉದ್ಘಾಟಿಸಿದರು.

ಎಸ್‌ಡಿಎಂಸಿ ಉಪಾಧ್ಯಕ್ಷ ಉದಯ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಂಬದಕೋಣೆ ಗ್ರಾಪಂ ಉಪಾಧ್ಯಕ್ಷ ಗಣೇಶ ದೇವಾಡಿಗ, ಸದಸ್ಯೆ ಜಲಜಾಕ್ಷಿ ಗಾಣಿಗ, ಗಂಗೊಳ್ಳಿ ಎಸ್‌ವಿಎಸ್ ಫ್ರೌಡಶಾಲಾ ಅಧ್ಯಾಪಕ ಶ್ರೀಧರ ಗಾಣಿಗ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಅಚ್ಚುತ ಬಿಲ್ಲವ, ಕಂಚಿಕಾನ್ ಶ್ರೀ ದುರ್ಗಾ ಮಿತ್ರ ಮಂಡಳಿ ಅಧ್ಯಕ್ಷ ಸಂದೀಪ್ ದೇವಾಡಿಗ, ಬಹುಳಾಪುರ ಶ್ರೀ ಮಹಾಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕ ತಿರುಮಲೇಶ್ವರ ಭಟ್, ಹೇರಂಜಾಲು ಶಾಲಾ ಮುಖ್ಯ ಶಿಕ್ಷಕ ಜಯಾನಂದ ಪಟಗಾರ, ಸಹಶಿಕ್ಷಕ ಚಂದ್ರ ದೇವಾಡಿಗ, ಶಿಕ್ಷಕಿಯರಾದ ಭಾರತಿ, ಸೌಮ್ಯಾ, ಅನುಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net