ರಕ್ತ ರೋಗಿಗಳ ಜೀವ ಉಳಿಸುವ ಸಂಜೀವಿನಿ

sid
Published on

ಶಂಕರನಾರಾಯಣ: ರಕ್ತದಾನದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ದಾನಿಗಳು ನೀಡಿದ ರಕ್ತ ರೋಗಿಗಳ ಜೀವ ಉಳಿಸಲು ಸಂಜೀವಿನಿಯಂತೆ ಕೆಲಸ ವಾಡುತ್ತದೆ ಎಂದು ಲಯನ್ಸ್ ಇಂಟರ್‌ನ್ಯಾಷನಲ್ 317 ಸಿ ಜಿಲ್ಲಾ ವೈಸ್ ಗವರ್ನರ್ ರಾಜೀವ್ ಕೋಟ್ಯಾನ್ ಹೇಳಿದರು.

ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಹಾಗೂ ಲಿಯೋ ಕ್ಲಬ್, ವಿವಿಧ ಸಂ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಬುಧವಾರ ಹಮ್ಮಿಕೊಂಡ ರಕ್ತದಾನ ಶಿಬಿರ ಉದ್ಘಾಟಿಸಿ ವಾತನಾಡಿದರು.

ಕುಂದಾಪುರ ರೆಡ್‌ಕ್ರಾಸ್ ಟಕ ಅಧ್ಯಕ್ಷ ಜಯಕರ ಶೆಟ್ಟಿ ಮಾತನಾಡಿದರು. ಪ್ರಾಂಶುಪಾಲ ಡಾ.ವೆಂಕಟರಾಮ ಭಟ್ ಅಧ್ಯಕ್ಷತೆ ವಹಿಸಿದರು.

ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಸ್ಥಾಪಾಕಾಧ್ಯಕ್ಷ ಬಿ.ರಾಜೇಂದ್ರ ಕಿಣಿ ಬೆಳ್ವೆ, ಕುಂದಾಪುರ ರೆಡ್‌ಕ್ರಾಸ್ ಟಕ ಅಧ್ಯಕ್ಷ ಜಯಕರ ಶೆಟ್ಟಿ, ಶಂಕರನಾರಾಯಣ ರೋಟರಿ, ಯುವಕ ಮಂಡಲ, ರಿಕ್ಷಾ ಮಾಲೀಕ ಚಾಲಕರ ಸಂ ಸೇರಿದಂತೆ ವಿವಿಧ ಸಂಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ವಸಂತ ಜೆ ಸ್ವಾಗತಿಸಿದರು. ವಿದ್ಯಾರ್ಥಿನಿ ಅಮೃತಾ ಮತ್ತು ತಂಡ ಪ್ರಾರ್ಥಿಸಿತು. ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ ಪ್ರಜ್ಞಾ ನಿರೂಪಿಸಿದರು. ಸಂಚಾಲಕ ರಮೇಶ್ ಎನ್.ಎಸ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net