

ಹುಬ್ಬಳ್ಳಿ: ಮೈಸೂರಿನಲ್ಲಿ ಇತ್ತೀಚೆಗೆ ಜರುಗಿದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಶ್ರೀ ಪರಪ್ಪ ಮುಶಪ್ಪ ರೂಗಿ ನ್ಯೂ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿನಿ ಸಂಜನಾ ನಾಗರಹಳ್ಳಿ ಭಾಗವಹಿಸಿ ಗೆದ್ದಿದ್ದಾರೆ.
ಬೆಳಗಾವಿ ಭಾಗ ಮಟ್ಟದ ತಂಡವು ಪ್ರಥಮ ಸ್ಥಾನ ಪಡೆದಿದ್ದು, ಸಂಜನಾ ಈ ತಂಡದಲ್ಲಿದ್ದರು. ಈಕೆ ಈಗ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ತರಬೇತುದಾರ ರಾಘವೇಂದ್ರ ಪೈ, ಸಂಸ್ಥೆಯ ಅಧ್ಯಕ್ಷ ಎಂ.ಎಸ್. ದ್ಯಾವನಗೌಡ್ರ, ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.