

ನವದೆಹಲಿ: ಶೋಯೆಬ್ ಮಲಿಕ್‌ನಿಂದ ತಲಾಖ್ ಪಡೆದ ಸಾನಿಯಾ ಮಿರ್ಜಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಪತಿಯಿಂದ ದೂರವಾದ ಮಗಳ ಕುರಿತಾಗಿ ಸಾನಿಯಾ ತಾಯಿ ಕಳವಳ ವ್ಯಕ್ತ ಪಡಿಸಿದ್ದಾರೆ.
ಸಾನಿಯಾ ಮಿರ್ಜಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇತ್ತೀಚೆಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾನಿಯಾ ಮಿರ್ಜಾ ಹಂಚಿಕೊಂಡ ಕೆಲವು ಫೋಟೋಗಳು ಅವರ ಫ್ಯಾನ್ಸ್ ಮೆಚ್ಚುಗೆಗೆ ಪಾತ್ರವಾಗಿದೆ. ಈ ಫೋಟೋಗೆ ಸಾನಿಯಾ ಮಿರ್ಜಾ ತಾಯಿ ನಸೀಮಾ ಮಿರ್ಜಾ ಮಾಡಿದ ಕಾಮೆಂಟ್ ಇದೀಗ ಸಾಕಷ್ಟು ವೈರಲ್ ಆಗಿದೆ.
ನಸೀಮಾ ಮಿರ್ಜಾ ತಮ್ಮ ಮಗಳನ್ನು ಉದ್ದೇಶಿಸಿ, "ಅಲ್ಲಾ ನನ್ನ ಪ್ರೀತಿಯ ಮಗಳನ್ನು ಕೆಟ್ಟ ದೃಷ್ಠಿ(ಕಣ್ಣುಗಳಿಂದ)ಯಿಂದ ಕಾಪಾಡಲಿ" ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಕಾಮೆಂಟ್ ಸಾಕಷ್ಟು ವೈರಲ್ ಆಗಿದೆ.
ಶೋಯೆಬ್ ಮಲಿಕ್‌ನಿಂದ ತಲಾಖ್ ಪಡೆದ ಬಳಿಕ ಇಜಾನ್ ಮಿರ್ಜಾ ಮಲಿಕ್ ತಮ್ಮ ತಾಯಿ ಸಾನಿಯಾ ಮಿರ್ಜಾ ಜತೆಗಿದ್ದಾರೆ. ಸಾನಿಯಾ ಮಿರ್ಜಾ ಭವಿಷ್ಯದಲ್ಲಿ ಮದುವೆಯಾಗುತ್ತಾರೋ ಅಥವಾ ಒಂಟಿಯಾಗಿಯೇ ಜೀವನ ಸಾಗಿಸುತ್ತಾರೋ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ.
ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರಿಂದ ದೂರವಾಗಿ ಜನವರಿ 20 ರಂದು ಮೂರನೇ ಮದುವೆಯ ಫೋಟೋಗಳನ್ನು ಪೋಸ್ಟ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದು ಗೊತ್ತೇ ಇದೆ. ಅವರು ಪ್ರಸಿದ್ಧ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ವಿಚ್ಚೇದನ ಪಡೆದು ಪತಿಯಿಂದ ಸೂರವಾದ ಸಾನಿಯಾ ಅವರು ಇದೀಗ ಮಗನ ಜತೆ ವಾಸವಾಗಿದ್ದಾರೆ.