

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ವತಿಯಿಂದ ಜ.26ರಂದು ಸಾಯಂಕಾಲ 6ಕ್ಕೆ ಸುರತ್ಕಲ್ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಅನಿವಾಸಿ ಭಾರತೀಯ ಪ್ರದ್ಯುಮ್ನ ಭಟ್ ಇವರಿಂದ ಸಂಗೀತ ಕಛೇರಿ ನಡೆಯಲಿದೆ. ತನ್ಮಯೀ ಉಪ್ಪಂಗಳ ವಯಲಿನ್‌ನಲ್ಲಿ ಮತ್ತು ಕೃಷ್ಣ ಪವನ್‌ಕುಮಾರ್ ಮೃದಂಗದಲ್ಲಿ ಸಹಕರಿಸಲಿರುವರು. ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿರುವುದಾಗಿ ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.