ಡ್ರಗ್ಸ್ ಜಾಲದಲ್ಲಿ ತೊಡಗಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಎಬಿವಿಪಿ ಸಹಿ ಸಂಗ್ರಹ ಅಭಿಯಾನ

110920 Sanduru Signature Collection Campaign
ಸಂಡೂರಿನಲ್ಲಿ ಎಬಿವಿಪಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಯಿತು.
Published on

ಸಂಡೂರು: ಡ್ರಗ್ಸ್ ಜಾಲದಲ್ಲಿ ತೊಡಗಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಪಟ್ಟಣದಲ್ಲಿ ಎಬಿವಿಪಿಯಿಂದ ಶುಕ್ರವಾರ ಸಹಿ ಸಂಗ್ರಹ ಅಭಿಯಾನ ನಡೆಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಡ್ರಗ್ಸ್ ಮಾಫಿಯಾವನ್ನು ಬುಡ ಸಮೇತ ಕಿತ್ತು ಹಾಕಬೇಕು. ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು. ರಾಜ್ಯದ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗಿದೆ. ಕೋಡ್ ವರ್ಡ್‌ಗಳ ಮೂಲಕ ದಂಧೆ ನಡೆಸುತ್ತಿದ್ದು, ಅಂತಹವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮುಖಂಡರು ಒತ್ತಾಯಿಸಿದರು. ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಿ.ಪವನಕುಮಾರ್, ತಾಲೂಕು ಸಂಚಾಲಕ ಬಂಡ್ರಿ ಶಿವಣ್ಣ, ನಗರ ಕಾರ್ಯದರ್ಶಿ ಸಂತೋಷ ರಾವ್, ಬಿ.ಜಿ.ಪ್ರಶಾಂತ, ಅವಿನಾಶ್, ಕಿರಣ್, ಚೇತನ್, ಲಕ್ಷ್ಮೀನಾರಾಯಣ, ಸಂತೋಷ್, ಎಸ್.ಶ್ರೇಯಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net