ವಡ್ಡು ಗ್ರಾಮ ಪಂಚಾಯಿತಿಗೆ ನಿಂಗಮ್ಮ ಪ್ರೆಸಿಡೆಂಟ್

Sandur Susheelanagara Gp
ಸುಶೀಲಾನಗರ ಗ್ರಾಪಂ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾದ ಈಡಿಗರ ಸುಜಾತಮ್ಮ ಮನೋಹರ್ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ ಗೌಡ, ಎಲ್.ಅಂಬರೀಷ ನಾಯ್ಕ, ಕುರುಬರ ಸತ್ಯಪ್ಪ, ಬಸವರಾಜ ಇತರರಿದ್ದರು.
Published on

ಸಂಡೂರು: ತೋರಣಗಲ್ ಹೋಬಳಿ ವಡ್ಡು ಗ್ರಾಪಂ ಅಧ್ಯಕ್ಷೆ-ಉಪಾಧ್ಯಕ್ಷರಾಗಿ ಕೆ.ಎಂ.ನಿಂಗಮ್ಮ ಹಾಗೂ ಪಾರ್ವತಿ ಶುಕ್ರವಾರ ಆಯ್ಕೆಯಾದರು.

ಒಟ್ಟು 37 ಸದಸ್ಯ ಬಲದ ಗ್ರಾಪಂ ಅಧ್ಯಕ್ಷ ಸ್ಥಾನ್ಕಕೆ ಕೆ.ಎಂ.ನಿಂಗಮ್ಮ, ಜೆ.ಎಂ.ಅನ್ನಪೂರ್ಣಮ್ಮ ಸ್ಪರ್ಧಿಸಿದ್ದರು. 16 ಮತ ಪಡೆದು ಅನ್ನಪೂರ್ಣಮ್ಮ ಪರಾಭವಗೊಂಡರೆ, 18 ಮತ ಗಳಿಸಿದ ನಿಂಗಮ್ಮ ಅಧ್ಯಕ್ಷೆಯಾದರು.

ಒಂದು ಮತ ಅಸಿಂಧುಗೊಂಡಿತು. ಉಪಾಧ್ಯಕ್ಷರಾಗಿ ಪಾರ್ವತಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಡಿಎಚ್ ಹನುಮಂತನಾಯಕ ಘೋಷಿಸಿದರು. ಲೆಕ್ಕ ಸಹಾಯಕ ಜುಬೇರ್ ಅಹ್ಮದ್ ಇತರರಿದ್ದರು.

ಸುಶೀಲಾನಗರ: ಇಲ್ಲಿನ ಗ್ರಾಪಂ ಉಪಾಧ್ಯಕ್ಷೆಯಾಗಿ ಈಡಿಗರ ಸುಜಾತಮ್ಮ ಮನೋಹರ್ ಅವಿರೋಧ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಪಶುಸಂಗೋಪನಾ ಇಲಾಖೆ ಎಡಿ ಡಾ.ವಲಿಬಾಷಾ ಕಾರ್ಯನಿರ್ವಹಿಸಿದರು.

ಪಿಡಿಒ ಸಿದ್ದಲಿಂಗಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ ಗೌಡ, ಎಲ್.ಅಂಬರೀಷ ನಾಯ್ಕ, ಕುರುಬರ ಸತ್ಯಪ್ಪ, ಜೆಬಿಟಿ.ಬಸವರಾಜ, ಚಂದ್ರಾನಾಯ್ಕ, ನರಸಿಂಗನಾಯ್ಕ, ಹನುಮನಾಯ್ಕ, ಆರ್.ಪಕ್ಕೀರಪ್ಪ, ನಾಗರಾಜ, ಪುರಸಭೆ ಸದಸ್ಯ ಬ್ರಹ್ಮಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net