ಕ್ರಾಂತಿಕಾರಿ ಹೋರಾಟಗಾರ ಭಗತ್‌ಸಿಂಗ್

Sirigeri Bhagath
ಸಿರಿಗೇರಿ ಗ್ರಾಮದಲ್ಲಿ ಭಗತ್ ಸಿಂಗ್ ಯುವಕ ಸಮಿತಿಯಿಂದ ಶನಿವಾರ ಭಗತ್ ಸಿಂಗ್ ಜನ್ಮದಿನ ಆಚರಿಸಲಾಯಿತು. ಪದಾಧಿಕಾರಿಗಳಾದ ಈರಣ್ಣ, ಹಳ್ಳಿ ಮರದ ಹುಲಿರಾಜ, ಕೆ.ಎನ್.ಅಶೋಕ್, ಎಚ್.ಶಾಂತೇಶ, ಹಳ್ಳಿ ಮರದ ಹೊನ್ನೂರ, ಶ್ರೀಕಾಂತ್, ತಾಯಪ್ಪ, ಮಲ್ಲಿಕಾರ್ಜುನ, ಸುಂಕಯ್ಯ, ಅಶೋಕ್, ರಾಘವೇಂದ್ರ ಇತರರಿದ್ದರು.
Published on

ಸಂಡೂರು: ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಮಹಾನಾಯಕ ಭಗತ್‌ಸಿಂಗ್ ಎಂದು ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ್ ಎಸ್.ನಾನಾವಟೆ ಹೇಳಿದರು.

ಪಟ್ಟಣದ ಲಕ್ಷ್ಮೀ ಎಸ್.ನಾನಾವಟೆ ಶಿಕ್ಷಣ ಮಹಾವಿದ್ಯಾಲಯ ಹಾಗೂ ಭಾರತೀಯ ಸುರಾಜ್ಯ ಸಂಸ್ಥೆ ಸಹಯೋಗದೊಂದಿಗೆ ಶನಿವಾರ ಹೊಸೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಭಗತ್‌ಸಿಂಗ್ 117ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್‌ಸಿಂಗ್ ಕುಟುಂಬಸ್ಥರು ರಾಜಕೀಯ ವಲಯದಲ್ಲಿ ಸಕ್ರಿಯರಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಆರ್ಯ ಸಮಾಜದ ತತ್ವಗಳು ಭಗತ್‌ಸಿಂಗ್ ಜೀವನದ ಮೇಲೆ ಪರಿಣಾಮ ಬೀರಿದವು. 14ನೇ ವಯಸ್ಸಿನಲ್ಲಿ ಹೋರಾಟಕ್ಕೆ ಇಳಿದರು. ಅವರ ಹೋರಾಟದ ಜೀವನ ಯುವಜನತೆಗೆ ಆದರ್ಶವಾಗಿದೆ ಎಂದರು.

ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಯು.ದೇವರಾಜ್, 1931ರಲ್ಲಿ ಭಗತ್‌ಸಿಂಗ್, ಸ್ನೇಹಿತರಾದ ರಾಜ್‌ಗುರು, ಸುಖದೇವ್ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದರು ಎಂದರು. ಸಂಡೂರು ತಾಲೂಕಿನ ಹೊಸೂರು ಗ್ರಾಮವನ್ನು ದತ್ತು ಪಡೆಯಲಾಯಿತು. ವಿದ್ಯಾರ್ಥಿಗಳು ಸ್ವಚ್ಛತೆ ನೈರ್ಮಲ್ಯ, ಆರೋಗ್ಯ, ಶಿಕ್ಷಣ, ಬಾಲ್ಯ ವಿವಾಹ ಮುಂತಾದ ವಿಷಯಗಳ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು. ಪ್ರಮುಖರಾದ ಮೇಗಳಗೇರಿ ಕೊಟ್ರೇಶಿ, ಅಶೋಕ, ಗುಡ್ಡಪ್ಪ, ಅಂಬುಜಾ, ಎನ್.ಟಿ.ಸೌಜನ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net