ಯಶ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್.. ಜೂನ್ 4ಕ್ಕೆ ಚಿತ್ರಮಂದಿರಕ್ಕೆ ಬರ್ತಿಲ್ಲ 'ಟಾಕ್ಸಿಕ್'; ರಿಲೀಸ್ ಡೇಟ್ ಮತ್ತೆ ಪೋಸ್ಟ್‌ಪೋನ್! Toxic

Toxic ಚಿತ್ರ Instagram
Toxic ಚಿತ್ರ Instagram
Published on
Toxic: ಕನ್ನಡದ ರಾಕಿಂಗ್ ಸ್ಟಾರ್​ ಯಶ್ ಅವರ ಮುಂಬರುವ ಚಿತ್ರ​ ಟಾಕ್ಸಿಕ್​ ಚಿತ್ರವನ್ನು ಮತ್ತೊಮ್ಮೆ ಮುಂದೂಡಲಾಗಿದ್ದು, ಜೂನ್ 4, 2026 ರಂದು ಬಿಡುಗಡೆಯಾಗುವುದಿಲ್ಲ ಎಂದು ಚಿತ್ರತಂಡ ಪೋಸ್ಟರ್​ ಹಂಚಿಕೊಳ್ಳುವ ಅಧೀಕೃತವಾಗಿ ಘೋಷಿಸಿದೆ.

ಪೋಸ್ಟ್​ನಲ್ಲೇನಿದೆ?

ನಾವು ಬರಿ ಸಿನಿಮಾಗಳನ್ನು ಮಾಡುವುದಿಲ್ಲ, ಬದಲಿಗೆ ನಮಗೆ ಸಿನಿಮಾಗಳ ಮೇಲೆ ಪ್ರೀತಿ ಹುಟ್ಟುವಂತೆ ಮಾಡುವ ಕೆಲವು ವಿಶೇಷ ಚಿತ್ರಗಳಿರುತ್ತವೆ. 'ಟಾಕ್ಸಿಕ್' ಕೂಡಾ ಅದರಲ್ಲಿ ಒಂದು. ವಿದೇಶದ ಸಿನಿಮಾಕಾನ್‌ನಲ್ಲಿ ನಮ್ಮ ಚಿತ್ರಕ್ಕೆ ಸಿಕ್ಕ ಭರ್ಜರಿ ರೆಸ್ಪಾನ್ಸ್ ನೋಡಿ ನಮಗೆ ಒಂದು ವಿಷಯ ಖಚಿತವಾಯಿತು. ಈ ಸಿನಿಮಾ ಕೇವಲ ನಮಗಷ್ಟೇ ಅಲ್ಲ, ಇಡೀ ಜಗತ್ತಿಗೆ ತಲುಪುವಂತಹ ಸಾಮರ್ಥ್ಯ ಹೊಂದಿದೆ.
ಟಾಕ್ಸಿಕ್' ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದೆ. ಪ್ರಸ್ತುತ ನಾವು ಜಾಗತಿಕ ಮಟ್ಟದ ವಿತರಣೆ ಮತ್ತು ಸಹಭಾಗಿತ್ವದ ಕೆಲಸಗಳಲ್ಲಿ ತೊಡಗಿದ್ದೇವೆ. ಈ ಹಿನ್ನೆಲೆಯಲ್ಲಿ, ಸಿನಿಮಾದ ಬಿಡುಗಡೆಯ ಸಮಯವನ್ನು ಮರುಹೊಂದಿಸಲು ನಿರ್ಧರಿಸಿದ್ದೇವೆ. ಆದಾಗ್ಯೂ, ಈ ಹಿಂದೆ ತಿಳಿಸಿದ ದಿನಾಂಕ ಜೂನ್ 4 ರಂದು ಸಿನಿಮಾ ಬಿಡುಗಡೆಯಾಗುತ್ತಿಲ್ಲ, ಬದಲಾಗಿ ಜಾಗತಿಕ ಮಾರುಕಟ್ಟೆಗೆ ಪೂರಕವಾಗುವಂತೆ ಮುಂದಿನ ದಿನಗಳಲ್ಲಿ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು. 'ಟಾಕ್ಸಿಕ್' ಶೀಘ್ರದಲ್ಲೇ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಭಾರತೀಯ ಸಿನಿಮಾಗಳು ಇಂದು ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ. ಇಂತಹ ಸಮಯದಲ್ಲಿ ಸಿನಿಮಾದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿ. ಒಬ್ಬ ನಟ ಮತ್ತು ನಿರ್ಮಾಪಕನಾಗಿ, ಈ ಸಿನಿಮಾವನ್ನು ಜಗತ್ತಿನಾದ್ಯಂತ ಅದ್ದೂರಿಯಾಗಿ ತೋರಿಸಲು ಇದು ಸರಿಯಾದ ಸಮಯ ಎಂದು ನನಗೆ ಅನ್ನಿಸುತ್ತಿದೆ. ನಮ್ಮ ಸಿನಿಮಾ ಇಡೀ ಜಗತ್ತಿನ ಮೇಲೆ ದೊಡ್ಡ ಪ್ರಭಾವ ಬೀರಬೇಕೆಂಬ ಗುರಿ ನಮ್ಮದಾಗಿದೆ. ಅದಕ್ಕಾಗಿ ಬೇಕಾದ ತಯಾರಿಯನ್ನು ಅಚ್ಚುಕಟ್ಟಾಗಿ ಮಾಡಲು ನಾನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೇನೆ.
ಆದಾಗ್ಯೂ, ನನ್ನ ಪ್ರತಿಯೊಂದು ಹೆಜ್ಜೆಯಲ್ಲಿ ಮತ್ತು ಎಲ್ಲಾ ಬದಲಾವಣೆಗಳಲ್ಲೂ ನಿಮ್ಮ ಬೆಂಬಲ ನನ್ನೊಂದಿಗಿದೆ, ಇದನ್ನು ನಾನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಕೆಲವು ಕಥೆಗಳು ತಾಳ್ಮೆಯನ್ನು ಬಯಸುತ್ತವೆ, ಕೆಲವು ಪಯಣಗಳಿಗೆ ಅದು ಅನಿವಾರ್ಯವೂ ಆಗಿರುತ್ತದೆ. ನೀವು ಆನಂದಿಸುವ ಮತ್ತು ಸಂಭ್ರಮಿಸುವ ಸಿನಿಮಾವನ್ನು ನೀಡುವುದಾಗಿ ನಾವು ಭರವಸೆ ನೀಡುತ್ತೇವೆ ಎಂದು ಯಶ್​ ಅವರು ತಮ್ಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಟಾಕಿಕ್ಸ್​ ಚಿತ್ರವನ್ನು ಮಾರ್ಚ್​ 19 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಘಟನೆಗಳು ಮತ್ತು ಭದ್ರತಾ ಕಾರಣಗಳಿಂದಾಗಿ ಮಾರ್ಚ್​ 19 ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾವನ್ನು ಜೂನ್​ 4 ರಂದು ತೆರೆಮೇಲೆ ಬಿಡಲು ನಿರ್ಧರಿಸಿದ್ದರು. ಆದರೆ, ಈ ಬಾರಿಯೂ ಮುಂದೂಡಿದ್ದರಿಂದ ಚಿತ್ರತಂಡದ ಈ ನಿರ್ಧಾರ ಯಶ್​ ಅಭಿಮಾನಿಗಳಿಗೆ ಇನ್ನಷ್ಟು ನಿರಾಸೆಯಾಗಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net