ಕನ್ನಡದ "ಶಾಂತಿ ಕ್ರಾಂತಿ'ಯಲ್ಲಿ ಬಾಲನಟಿಯಾಗಿ, ನಂತರ ನಾಯಕಿಯಾಗಿ "ಯಾರೇ ನೀನು ಚೆಲುವೆ', ಸೇರಿ 60ಕ್ಕೂ ಅಧಿಕ ತಮಿಳು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಖ್ಯಾತಿಯ ನಟಿ ಸಂಗೀತಾಗೆ ಸಲ್ಲುತ್ತದೆ. ಇಂತಹ ಸಂಗೀತಾ 2000ರಲ್ಲಿ ಬಿಡುಗಡೆಯಾದ "ಯಾರೇ ನೀ ಅಭಿಮಾನಿ' ಬಳಿಕ ಮತ್ತೆ ಕನ್ನಡದಲ್ಲಿ ನಟಿಸಿರಲಿಲ್ಲ. ಅದೇ ವರ್ಷ ಛಾಯಾಗ್ರಾಹಕ ಎಸ್. ಸರವಣನ್ ಜತೆ ಸಪ್ತಪದಿ ಇಟ್ಟ ಅವರು ಚಿತ್ರರಂಗಕ್ಕೆ ಗುಡ್ಬೈ ಹೇಳಿದ್ದರು. 2002ರಲ್ಲಿ ಪುತ್ರಿ ಸಾಯಿ ತೇಜಸ್ವತಿ ಜನಿಸಿದ ಬಳಿಕ ಸಿನಿಮಾಗಳಿಂದ ಮತ್ತಷ್ಟು ಅಂತರ ಕಾದುಕೊಂಡಿದ್ದರು. 2014ರಲ್ಲಿ 14 ವರ್ಷಗಳ ನಂತರ ಸಂಗೀತಾ ಮಲಯಾಳಂನ "ನಗರ ವಾರಿದಿ ನಡುವಿಲ್ ಎನ್ಜಾನ್' ಮೂಲಕ ಕಮ್ಬ್ಯಾಕ್ ಮಾಡಿದರು. ಇನ್ನೇನು ಚಿತ್ರರಂಗದಲ್ಲಿ ಮತ್ತೆ ಬಿಜಿಯಾಗುತ್ತಾರೆ ಎಂದುಕೊಳ್ಳುತ್ತಿರುವಾಗಲೇ, ಸೆಕೆಂಡ್ ಇನ್ನಿಂಗ್ಸ್ನಲ್ಲಿ ಒಂದೇ ಚಿತ್ರದಲ್ಲಿ ನಟಿಸಿದ ಸಂಗೀತಾ ಮತ್ತೆ ಚಿತ್ರರಂಗದಿಂದ ದೂರ ನಡೆದುಬಿಟ್ಟರು. ಅದಾಗಿ 9 ವರ್ಷಗಳ ಬಳಿಕ 2023ರಲ್ಲಿ ಇನ್ನೊಮ್ಮೆ ಕಮ್ಬ್ಯಾಕ್ ಮಾಡಿದ ಅವರು ಮೂರನೇ ಇನ್ನಿಂಗ್ಸ್ನಲ್ಲೂ ಮಲಯಾಳಂನಲ್ಲೇ ಬಿಜಿಯಾಗಿದ್ದಾರೆ. "ಚಾವರ್', "ಪರಾಕ್ರಮಂ', "ಆನಂದ ಶ್ರೀಬಾಲ' ಸೇರಿ ಕಳೆದ ವರ್ಷ ತೆರೆಕಂಡ "ಯುನೈಟೆಡ್ ಕಿಂಗ್ಡಮ್ ಆ್ ಕೇರಳ', "ಹೃದಯಪೂರ್ವಂ', "ಹಾಲ್' ಚಿತ್ರಗಳಲ್ಲಿ ನಟಿಸಿದ್ದಾರೆ. ಅದರ ನಡುವೆಯೇ ಇತ್ತೀಚೆಗಷ್ಟೆ ಕನ್ನಡ ಚಿತ್ರವೊಂದನ್ನು ಒಪ್ಪಿರುವ ಅವರು, ಬರೋಬ್ಬರಿ 25 ವರ್ಷಗಳ ಬಳಿಕ ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಮಾಡಲು ಸಿದ್ಧತೆ ನಡೆಸಿದ್ದಾರೆ.