ಸೂಪರ್‌ಕಾಪ್ ವಸಿಷ್ಠ ಸಿಂಹ : ‘ಭೀಮ್ ಆ್ಯಂಡ್ ರಾವ್’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾದ ಚಿಟ್ಟೆ

ಸ್ಯಾಂಡಲ್‌ವುಡ್ ನಟ ವಸಿಷ್ಠ ಸಿಂಹ ಭಾನುವಾರಕ್ಕೆ (ಅ. 18) ಅವರು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರು ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ನಟನ ಬರ್ತ್‌ಡೇಗೆ ಹೊಸ ಚಿತ್ರ ಘೋಷಣೆಯಾಗಿದ್ದು, ಚಿತ್ರಕ್ಕೆ ‘ಭೀಮ್​ ಆ್ಯಂಡ್ ರಾವ್’ ಎಂದು ಹೆಸರಿಡಲಾಗಿದೆ.
bheem and rao poster
ಭೀಮ್ ಆ್ಯಂಡ್ ರಾವ್ ಪೋಸ್ಟರ್​
Published on: 

ಬೆಂಗಳೂರು: ಸ್ಯಾಂಡಲ್‌ವುಡ್ ನಟ ವಸಿಷ್ಠ ಸಿಂಹ ಭಾನುವಾರಕ್ಕೆ (ಅ. 18) ಅವರು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರು ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ನಟನ ಬರ್ತ್‌ಡೇಗೆ ಹೊಸ ಚಿತ್ರ ಘೋಷಣೆಯಾಗಿದ್ದು, ಚಿತ್ರಕ್ಕೆ ‘ಭೀಮ್​ ಆ್ಯಂಡ್ ರಾವ್’ ಎಂದು ಹೆಸರಿಡಲಾಗಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ ಹಾಗೂ ಆಶಯಗಳಿಂದ ಪ್ರೇರಿತಗೊಂಡು ಈ ಚಿತ್ರವನ್ನು ರೂಪಿಸಲಾಗುತ್ತಿದೆ. ಇಲ್ಲಿ ವಸಿಷ್ಠ ಸಿಂಹ ಖಡಕ್ ಐಪಿಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಅನ್ನ’ ಖ್ಯಾತಿಯ ಇಸ್ಲಾವುದ್ದೀನ್ ಎನ್.ಎಸ್. ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘ಸದ್ಯ ಸಿನಿಮಾದ ಸ್ಕ್ರಿಪ್ಟ್ ಕಾರ್ಯಗಳು ನಡೆಯುತ್ತಿವೆ. ಸಿನಿಮಾ ಘೋಷಿಸುವ ಮೂಲಕ ವಸಿಷ್ಠ ಸಿಂಹರ ಬರ್ತ್‌ಡೇಗೆ ಉಡುಗೊರೆ ನೀಡಿದ್ದೇವೆ. ಎರಡು-ಮೂರು ತಿಂಗಳಲ್ಲಿ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಮುಗಿಯಲಿದ್ದು, ಬಳಿಕ ಶೂಟಿಂಗ್‌ಗೆ ತೆರಳಲಿದ್ದೇವೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಯ ಮೇಲೆ ಸಿನಿಮಾ ಮೂಡಿಬರಲಿದ್ದು, ಒಗ್ಗಟ್ಟು ಮತ್ತು ವಿವಿಧೆತೆಯಲ್ಲಿ ಏಕತೆ ಕುರಿತು ಚರ್ಚಿಸಲಿದೆ. ಪ್ರಜಾಪ್ರಭುತ್ವ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರೀಯ ಮೌಲ್ಯಗಳ ಅಂಶಗಳು ಈ ಕಥೆಯ ಕೇಂದ್ರಬಿಂದುವಾಗಿರಲಿವೆ. ದೇಶಭಕ್ತಿ, ಸಾಮಾಜಿಕ ಹೊಣೆಗಾರಿಕೆ ಜತೆಗೆ ಪಕ್ಕಾ ಮಾಸ್, ಕಮರ್ಷಿಯಲ್ ಆಗಿ ನಿರೂಪಣೆಯಾಗಲಿದೆ. ವಸಿಷ್ಠ ಸಿಂಹ ತುಂಬಾ ವರ್ಷಗಳಿಂದ ಪರಿಚಿತ ಗೆಳೆಯ. ಈ ಕಥೆ ಪೂರಕವಾದ ಮ್ಯಾನರಿಸಂ, ನಟನಾ ಕೌಶಲ ಇರುವ ಕಾರಣಕ್ಕಾಗಿ ಅವರನ್ನೇ ಆಯ್ಕೆ ಮಾಡಿಕೊಂಡೆವು. ಉಳಿದ ಪಾತ್ರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಕಮರ್ಷಿಯಲ್‌ಗಿಂತ ಕಂಟೆಂಟ್ ವಿಚಾರಕ್ಕಾಗಿ ‘ಭೀಮ್​ ಆ್ಯಂಡ್ ರಾವ್’ ಚಿತ್ರವನ್ನು ರಾಷ್ಟ್ರೀಯ ಸಿನಿಮಾವಾಗಿ ತೆರೆ ಮೇಲೆ ತರಲು ಮುಂದಾಗಿದ್ದೇವೆ’ ಎಂದು ನಿರ್ದೇಶಕರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net