ಕನ್ನಡ ಸಿನಿಪ್ರಿಯರಿಗೆ ಡಬಲ್​ ಮನರಂಜನೆ; ಹಿಂದಿ, ತೆಲುಗು ಚಿತ್ರಗಳ ಮಧ್ಯೆ ಕನ್ನಡದ 2 ಬ್ಯೂಟಿಫುಲ್​ ಸಿನಿಮಾಗಳು ತೆರೆಗೆ

'ಲವ್​ ಮಾಕ್ಟೇಲ್​ 3' ಮತ್ತು 'ಆಕಾಶ್'​
'ಲವ್​ ಮಾಕ್ಟೇಲ್​ 3' ಮತ್ತು 'ಆಕಾಶ್'​
Published on

ಪ್ರಮುಖ ಮುಖ್ಯಾಂಶಗಳು

  • ಮಾ.13ಕ್ಕೆ ಪುನೀತ್ ರಾಜ್​ಕುಮಾರ್​ ಅಭಿನಯದ 'ಆಕಾಶ್​' ರೀ-ರಿಲೀಸ್​
  • ಅದೇ ಮುಂದಿನ ವಾರಕ್ಕೆ ಬಹುನಿರೀಕ್ಷಿತ ಲವ್ ಮಾಕ್ಟೇಲ್​ 3 ರಿಲೀಸ್​
  • ಕನ್ನಡ ಸಿನಿಪ್ರಿಯರಿಗೆ ಡಬಲ್ ಮನರಂಜನೆ ಖಚಿತ
ಬೆಂಗಳೂರು: ಮಾ.19 ಮತ್ತು ಅದರ ಹಿಂದಿನ ವಾರದಲ್ಲಿ ಹಿಂದಿ, ತೆಲುಗು ಮತ್ತು ತಮಿಳಿನ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಇದು ಆಯಾ ಭಾಷೆಯ ಚಿತ್ರಪ್ರೇಮಿಗಳಿಗೆ ಕುತೂಹಲ ಕೆರಳಿಸಿದರೆ, ಕನ್ನಡ ಸಿನಿಪ್ರಿಯರಿಗೆ ಮಾತ್ರ ಡಬಲ್ ಮನರಂಜನೆ ಸಿದ್ಧವಾಗಿದೆ. ಅದು ಎರಡು ನೆಚ್ಚಿನ ಸಿನಿಮಾಗಳೇ ರಿಲೀಸ್​ ಆಗುತ್ತಿರುವುದು ಖುಷಿ ತಂದಿದೆ.
ಕನ್ನಡ ಚಿತ್ರರಂಗದ ನೆಚ್ಚಿನ 'ಪವರ್​ಸ್ಟಾರ್'​, ಅಭಿಮಾನಿಗಳ ಪ್ರೀತಿಯ 'ಅಪ್ಪು', ಡಾ. ಪುನೀತ್ ರಾಜ್​ಕುಮಾರ್​ ಅಭಿನಯದ 2005ರಲ್ಲಿ ತೆರೆಕಂಡ ಬ್ಲಾಕ್​ಬಸ್ಟರ್​ ಹಿಟ್​ 'ಆಕಾಶ್'​ ಸಿನಿಮಾ ಇದೀಗ ರೀ-ರಿಲೀಸ್​ಗೆ ಎದುರುನೋಡುತ್ತಿದೆ. ಇದು ಪುನೀತ್​ ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ. ಮತ್ತೊಂದೆಡೆ, ನಟ ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ 'ಲವ್​ ಮಾಕ್ಟೇಲ್​ 3' ಚಿತ್ರ ಇದೇ ಮಾ.19ರಂದು ರಾಜ್ಯಾದ್ಯಂತ ರಿಲೀಸ್​ ಆಗುತ್ತಿದೆ.
ಕರುನಾಡಿನಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಪುನೀತ್ ರಾಜ್​ಕುಮಾರ್​ ಅವರ ಜನ್ಮದಿನವನ್ನು ಈ ಬಾರಿ ಇನ್ನೂ ವಿಶೇಷವಾಗಿ ಸಂಭ್ರಮಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ ಹಾಗೂ ಸಾಕಷ್ಟು ತಯಾರಿಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ, ಪುನೀತ್ ಅವರ ಪತ್ನಿ, ನಿಮಾರ್ಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು, ಅಪ್ಪು ಹುಟ್ಟುಹಬ್ಬಕ್ಕೆ ಅವರ ಫ್ಯಾನ್ಸ್​ಗಳಿಗೆ 'ಆಕಾಶ್'​ ಸಿನಿಮಾವನ್ನು ಮರುಬಿಡುಗಡೆ ಮಾಡುವ ಮೂಲಕ ಸಂಭ್ರಮವನ್ನು ಹೆಚ್ಚಿಸಿದ್ದಾರೆ.
ಕಳೆದ ವರ್ಷಗಳಲ್ಲಿ ಪುನೀತ್ ಅವರ ಹುಟ್ಟುಹಬ್ಬಕ್ಕೆ 'ಜಾಕಿ' ಮತ್ತು 'ಅಪ್ಪು' ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗಿತ್ತು. ಈ ಚಿತ್ರಗಳನ್ನು ಸಿನಿಪ್ರಿಯರು ಮತ್ತು ಅಭಿಮಾನಿಗಳು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆ ಹೊಡೆದು, ಕುಣಿದು ಸಂಭ್ರಮಿಸಿದ್ದು ವಿಶೇಷ. ಈಗ, ಆಕಾಶ್​ ಸರದಿಯಾಗಿದ್ದು, 4ಕೆ ರೀ-ಮಾಸ್ಟರಿಂಗ್​ ಸೇರಿ ಆಧುನಿಕ ಟೆಕ್ನಾಲಜಿ ಬಳಸಿಕೊಂಡು ಮತ್ತೆ ತೆರೆಗೆ ತರಲಾಗುತ್ತಿದೆ.
ಇನ್ನು ಇತ್ತೀಚೆಗಷ್ಟೇ 'ಲವ್ ಮಾಕ್ಟೇಲ್​ 3' ಟ್ರೇಲರ್ ಬಿಡುಗಡೆಗೊಳಿಸಿರುವ ನಟ ಕೃಷ್ಣ, ತಮ್ಮ ಸಿನಿಮಾ ಇದೇ ಮಾ.19ಕ್ಕೆ ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗುತ್ತಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಲವ್​ ಮಾಕ್ಟೇಲ್​ ಭಾಗ 1 ಮತ್ತು 2 ಭರ್ಜರಿ ಯಶಸ್ಸು ಕಂಡ ಹಿನ್ನೆಲೆ ಇದೀಗ ಪಾರ್ಟ್​ 3 ರಿಲೀಸ್​ಗೆ ಕೃಷ್ಣ-ಮಿಲನ ಜೋಡಿ ಸಜ್ಜಾಗಿದೆ. ಇದೇ ಕೊನೆಯ ಅಧ್ಯಾಯ ಎಂದು ಟ್ರೇಲರ್​ನಲ್ಲಿ ಹೇಳಲಾಗಿದೆ. ಅಲ್ಲಿಗೆ 'ಲವ್​ ಮಾಕ್ಟೇಲ್​ 4' ಬರೋದಿಲ್ಲ ಎಂದರ್ಥ. ಹಾಸ್ಯ, ಲವ್ ಜಾನರ್​ನಲ್ಲಿ ಮೂಡಿಬಂದಿರುವ ಈ ಚಿತ್ರ ಬಾಕ್ಸ್ಆಫೀಸ್​ನಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net