ರಕ್ತಸಿಕ್ತ ದೃಶ್ಯಗಳು, ಡಬಲ್​ ಡ್ಯಾಡಿ​​! ರಾಕಿಂಗ್​ ಸ್ಟಾರ್​ ಯಶ್​ 'ಟಾಕ್ಸಿಕ್'​ ಟೀಸರ್​ನಲ್ಲಿ ಎಲ್ಲ ಓಕೆ ಅದೊಂದು... | Toxic The Movie

ಯಶ್​ ಅಭಿನಯದ 'ಟಾಕ್ಸಿಕ್​'
ಯಶ್​ ಅಭಿನಯದ 'ಟಾಕ್ಸಿಕ್​'
Published on

ಪ್ರಮುಖ ಮುಖ್ಯಾಂಶಗಳು

  • ಮಾ.19ಕ್ಕೆ ಯಶ್​ 'ಟಾಕ್ಸಿಕ್'​ ತೆರೆಗೆ ಬರಲು ಸಿದ್ಧ
  • ಈಗಾಗಲೇ ಮೊದಲ ಟೀಸರ್​ ಭಾರೀ ವಿವಾದ, ಟೀಕೆಗಳಿಗೆ ಗುರಿ
  • ರಕ್ತಸಿಕ್ತ ದೃಶ್ಯಗಳು, ರಾಕಿಂಗ್ ಸ್ಟಾರ್ ಯಶ್​ ದ್ವಿಪಾತ್ರ!
  • ಟೀಸರ್​ನಲ್ಲಿ ಎಲ್ಲಾ ಓಕೆ ಆದರೆ ಅದೊಂದು ಮಾತ್ರ ಬೇಡವಾಗಿತ್ತು
ಬೆಂಗಳೂರು: ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್,​ ನಟ ಯಶ್ ಅಭಿನಯದ ಹಾಗೂ ಮಾಲಿವುಡ್​ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' (Toxic) ಚಿತ್ರದ ಹವಾ ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಸಖತ್​ ಜೋರಾಗಿದೆ. ಈಗಾಗಲೇ ಚಿತ್ರದ ಮೊದಲ ಟೀಸರ್​ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಆದ ವಿವಾದಗಳು ಒಂದೆರೆಡಲ್ಲ. ಈಗ ಎರಡನೇ ಟೀಸರ್​ ಹೊರಬಿದ್ದಿದ್ದು, ಚಿತ್ರದ​ ಮೇಲಿನ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ.
ಕೆಜಿಎಫ್​ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದಿರುವ ನಟ ರಾಕಿಂಗ್​ ಸ್ಟಾರ್​ ಯಶ್ 40ನೇ ವಸಂತಕ್ಕೆ ಬಹುನಿರೀಕ್ಷಿತ 'ಟಾಕ್ಸಿಕ್​' ಚಿತ್ರದ ಮೊದಲ ಟೀಸರ್​ ರಿಲೀಸ್ ಆಗಿತ್ತು. ಟೀಸರ್​ನ ಆರಂಭದಲ್ಲಿ ಮೂಡಿಬಂದ ಹಸಿಬಿಸಿ ದೃಶ್ಯವಂತು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ, ಹಲವು ಕಾನೂನು ದೂರುಗಳಿಗೂ ಕಾರಣವಾಯಿತು. ಸಿನಿಮಾದ ನಿರ್ದೇಶಕಿ ವಿರುದ್ಧ ತೀವ್ರ ಟೀಕೆಗಳು ಹರಿದುಬಂದಿತು. ಈಗ ಎರಡನೇ ಟೀಸರ್​ ಯಶ್​ ಪಾತ್ರದ ಮೇಲೆ ಭಾರೀ ಕುತೂಹಲವನ್ನು ಕೆರಳಿಸಿದೆ. ಕಾರಣ, ಇದರಲ್ಲಿ ತೋರಿಸಲಾದ ಸ್ಟಾರ್​ ನಟನ ದ್ವಿಪಾತ್ರ.

ಹಾಲಿವುಡ್​ ರೇಂಜ್​!

ಟೀಸರ್​ನ ಆರಂಭದಲ್ಲೇ ರಕ್ತಸಿಕ್ತ ದೃಶ್ಯಗಳು ಮತ್ತು ಯಶ್​ ಅವರ ರಗಡ್​ ಲುಕ್​ ಅನ್ನು ರಿವೀಲ್​ ಮಾಡಿದೆ. ಇದರೊಟ್ಟಿಗೆ ದೊಡ್ಡ ಸಾಮ್ರಾಜ್ಯವನ್ನೇ ಆಳುವ ಕಿಲಾಡಿಯ ಪಾತ್ರದಲ್ಲಿ 'ರಾಯ' ಮಿಂಚಿದ್ದಾರೆ ಅನ್ನೋದು ಸ್ಪಷ್ಟ. ಹೆಚ್ಚಿನ ಆ್ಯಕ್ಷನ್​ ದೃಶ್ಯಗಳನ್ನು ಒಳಗೊಂಡಿರುವ ಟೀಸರ್​ ನೋಡಿದರೆ, ಇದು ಹಾಲಿವುಡ್​ಗಿಂತ ನಾವೇನು ಕಮ್ಮಿ ಇಲ್ಲ ಎಂಬುದನ್ನು ಒತ್ತಿ ಹೇಳುವಂತಿದೆ.

ಇದು ಬೇಕಿತ್ತೇ?

ಹಸಿಬಿಸಿ ದೃಶ್ಯಗಳ ಜತೆಗೆ ಯಶ್ ಗಡ್ಡವಿಲ್ಲದೆ ಕಾಣಿಸಿಕೊಂಡಿರುವ ಪಾತ್ರ, ಸಿನಿಮಾದಲ್ಲಿ ರಾಕಿಂಗ್ ಸ್ಟಾರ್​ ಅವರದ್ದು ದ್ವಿಪಾತ್ರ ಎಂಬ ಸಂಗತಿಯನ್ನು ಖಚಿತ ಪಡಿಸಿದೆ. ಇದೆಲ್ಲ ಓಕೆ ಆದರೆ, ಟೀಸರ್​ನ ಕೊನೆಯಲ್ಲಿ ಬರುವ ****** ಮ್ಯಾನರ್ಸ್​ ಎಂಬ ಅಶ್ಲೀಲ ಪದ ನಿಜಕ್ಕೂ ಬೇಕಿತ್ತೇ? ಇದು ಅವಶ್ಯಕತೆಯೇ? ಅನ್ನೋ ಪ್ರಶ್ನೆ ಸದ್ಯ ನೋಡುಗರಲ್ಲಿ ಕಾಡತೊಡಗಿದೆ. ಇದು ಸಿನಿಮಾದಲ್ಲಿ ಹಲವೆಡೆ ಬಳಸಿದ್ದೇ ಆದರೆ, ಖಂಡಿತ ಚಿತ್ರಪ್ರೇಮಿಗಳು ಬೇಸರಕ್ಕೆ ಒಳಗಾಗೋದು ಖಚಿತ.

ಮಾ.19 ಡ್ಯಾಡಿ ಕಮ್ಸ್​ ಹೋಮ್​

2026ರ ಮಾರ್ಚ್ 19ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ಗೆ ಸಜ್ಜಾಗಿರುವ 'ಟಾಕ್ಸಿಕ್'​ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಆ್ಯಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ ಯಶ್​, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಥೋವಿನೋ ಥಾಮಸ್​, ಅಕ್ಷಯ್​ ಓಬ್​ರಾಯ್​ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net