ನಯನತಾರ, ರುಕ್ಕು, ಕಿಯಾರಾ​.... 'ಟಾಕ್ಸಿಕ್'​ ಬ್ಯೂಟಿಗಳ ಸಂಭಾವನೆ ಕೇಳಿದ್ರೆ ಹುಬ್ಬೇರೋದು ಖಚಿತ | Toxic Beauties

ಟಾಕ್ಸಿಕ್​ ಚಿತ್ರದ ನಟಿಮಣಿಯರು
ಟಾಕ್ಸಿಕ್​ ಚಿತ್ರದ ನಟಿಮಣಿಯರು
Published on

ಪ್ರಮುಖ ಮುಖ್ಯಾಂಶಗಳು

  • ರಾಕಿಂಗ್ ಸ್ಟಾರ್ ಯಶ್​ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್​'
  • ಟಾಕ್ಸಿಕ್​ ಸಿನಿಮಾದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಐವರು ಸ್ಟಾರ್​ ಹೀರೋಯಿನ್​ಗಳು
  • ಯಾರಿಗೆ ಎಷ್ಟು ಸಂಭಾವನೆ? ಇಲ್ಲಿದೆ ನೋಡಿ ಪೂರ್ಣ ವಿವರ
ಬೆಂಗಳೂರು: ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್,​ ನಟ ಯಶ್ ಅಭಿನಯದ ಹಾಗೂ ಮಾಲಿವುಡ್​ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ಹವಾ ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಜೋರಾಗಿದೆ. ಈಗಾಗಲೇ ಸಿನಿಮಾದ ಟೀಸರ್​ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಒಂದಷ್ಟು ಹಸಿಬಿಸಿ ದೃಶ್ಯಗಳಿಂದ ವ್ಯಾಪಕ ಟೀಕೆ, ಅಸಮಾಧಾನಕ್ಕೆ ಗುರಿಯಾಗಿದೆ.
2026ರ ಮಾರ್ಚ್ 19ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿರುವ 'ಟಾಕ್ಸಿಕ್'​ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಆ್ಯಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ ಟಾಪ್​ ನಟಿಯರಾದ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​ ಚಿತ್ರರಂಗದ ನಟಿಮಣಿಯರ ತಾರಾಗಣಕ್ಕೆ ಎಷ್ಟು ಸಂಭಾವನೆ ದೊರೆತಿರಬಹುದು ಎಂಬ ಕುತೂಹಲ ಸದ್ಯ ಸಿನಿರಸಿಕರಲ್ಲಿ ಕಾಡುತ್ತಿದೆ. ಅಸಲಿಗೆ, ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಎಂಬುದರ ವಿವರ ಹೀಗಿದೆ ನೋಡಿ

ಯಶ್

'ಟಾಕ್ಸಿಕ್'​ನ ರೂವಾರಿ ಆಗಿರುವ ಯಶ್​, 'ರಾಯ' ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಈಗಾಗಲೇ ಪೋಸ್ಟರ್​, ಟೀಸರ್​ನಲ್ಲಿ ಕಪ್ಪು ಬಣ್ಣದ ಉಡುಗೆ ಮತ್ತು ರಗಡ್​ ಲುಕ್​ನಲ್ಲಿ ಮಿಂಚಿರುವ ಯಶ್​, ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದಾರೆ. ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 50 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ನಯನತಾರಾ

ಬಹುನಿರೀಕ್ಷಿತ ಚಿತ್ರದಲ್ಲಿ 'ಗಂಗಾ' ಪಾತ್ರವನ್ನು ನಿರ್ವಹಿಸಲಿರುವ ಬಹುಭಾಷಾ ನಟಿ ನಯನತಾರ, ಮೊದಲ ಲುಕ್​ನಲ್ಲೇ ಸಿನಿಪ್ರಿಯರ ಹುಬ್ಬೇರಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಲು ಅವರು 12ರಿಂದ 18 ಕೋಟಿ ರೂ. ಸಂಭಾವನೆ ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ, ಇತರೆ ನಟಿಯರಿಗೆ ಹೋಲಿಸಿದರೆ ನಯನತಾರ ಅವರ ಪೇಮೆಂಟ್​ ಎಲ್ಲರಿಗಿಂತ ಹೆಚ್ಚಿದೆ.

ಹುಮಾ ಖುರೇಷಿ

ನೆಟ್‌ಫ್ಲಿಕ್ಸ್‌ ವೀಕ್ಷಕರಿಂದ ಮೆಚ್ಚುಗೆ ಪಡೆದ 'ಡೆಲ್ಲಿ ಕ್ರೈಮ್ ಸೀಸನ್ 3'ರಲ್ಲಿ ವಿಲನ್​ ಪಾತ್ರದಲ್ಲಿ ಮಿಂಚಿರುವ ನಟಿ ಹುಮಾ ಖುರೇಷಿ, ಟಾಕ್ಸಿಕ್​ನಲ್ಲಿ 'ಎಲಿಜಬೆತ್' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಯ ಪ್ರಕಾರ, ಖುರೇಷಿ 2ರಿಂದ 3 ಕೋಟಿ ರೂ. ಅಂದಾಜು ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ರುಕ್ಮಿಣಿ ವಸಂತ್

ಕನ್ನಡದ ಬ್ಯೂಟಿ ರುಕ್ಮಿಣಿ ವಸಂತ್, ನಟ ಯಶ್ ಅವರ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ 'ಮೆಲ್ಲಿಸಾ' ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸಖತ್​ ಸ್ಟೈಲಿಶ್ ಆಗಿರುವ ನಟಿ, ಬಹುಮುಖ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ ಎಂಬುದು ಪೋಸ್ಟರ್​ ಮೂಲಕ ಸ್ಪಷ್ಟವಾಗಿದೆ. ವರದಿಗಳ ಪ್ರಕಾರ, ರುಕ್ಮಿಣಿ ಅವರ ಸಂಭಾವನೆ 3 ಕೋಟಿಯಿಂದ 5 ಕೋಟಿ ರೂ. ಇದೆ.

ಕಿಯಾರಾ ಅಡ್ವಾಣಿ

ಬಾಲಿವುಡ್​ ಚೆಲುವೆ ಕಿಯಾರಾ ಅಡ್ವಾಣಿ 'ಟಾಕ್ಸಿಕ್'​ನಲ್ಲಿ ನಾಡಿಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಐವರು ನಟಿಮಣಿಯರ ಪೈಕಿ ಕಿಯಾರಾ ಅವರ ಲುಕ್​ ಮಾತ್ರ ಸಿನಿಪ್ರಿಯರ ಕುತೂಹಲ ದುಪ್ಪಟ್ಟಾಗಿಸಿದೆ. ತಮ್ಮ ಪಾತ್ರಕ್ಕಾಗಿ ನಟಿ ಸುಮಾರು 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

ತಾರಾ ಸುತಾರಿಯಾ

ಚಿತ್ರದಲ್ಲಿ 'ರೆಬೆಕಾ' ಪಾತ್ರದಲ್ಲಿ ಮಿಂಚಲಿರುವ ತಾರಾ ಸುತಾರಿಯಾ, 2 ಕೋಟಿ-3 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net