'ಟಾಕ್ಸಿಕ್' ಹೊಸ ಟೀಸರ್ ಔಟ್: ಲೇಡಿ ಸೂಪರ್ ಸ್ಟಾರ್ಸ್ ಪವರ್​ಫುಲ್​ ಪರಿಚಯ; ರಗಡ್​ ಲುಕ್​ನಲ್ಲಿ ಮಿಂಚಿದ ರಾಕಿಂಗ್​ ಸ್ಟಾರ್​ ರಾಯಾ! Toxic New Teaser

'ಟಾಕ್ಸಿಕ್' ಸಿನಿಮಾದ ಹೊಸ ಟೀಸರ್ ಬಿಡುಗಡೆ!
'ಟಾಕ್ಸಿಕ್' ಸಿನಿಮಾದ ಹೊಸ ಟೀಸರ್ ಬಿಡುಗಡೆ!
Published on

ಪ್ರಮುಖ ಮುಖ್ಯಾಂಶಗಳು

  • 'ಟಾಕ್ಸಿಕ್' ಸಿನಿಮಾದ ಹೊಸ ಟೀಸರ್ ಬಿಡುಗಡೆ!
  • ಸಿನಿಮಾದ ಮಹಿಳಾ ಪಾತ್ರಧಾರಿಗಳ ಪರಿಚಯ
  • ನಯನತಾರಾ, ಕಿಯಾರಾ, ಹುಮಾ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಖಡಕ್​ ಎಂಟ್ರಿ
  • ರಗಡ್​ ಲುಕ್​ನಲ್ಲಿ ರಾಕಿಂಗ್​​ ಸ್ಟಾರ್​ ರಾಯ
ಟಾಕ್ಸಿಕ್​: ಸದ್ಯ ಸಿನಿ ಪ್ರೇಕ್ಷಕರು ದೇಶದಾದ್ಯಂತ ಬಹಳ ಕಾತುರದಿಂದ ಕಾಯುತ್ತಿರುವ ಸಿನಿಮಾ ಯಾವುದೆಂದರೆ ಅದು ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಟಾಕ್ಸಿಕ್​: ಎ ಫೇರಿ ಟೇಲ್​ ಫಾರ್​ ಗ್ರೋನ್​ಅಪ್ಸ್​ ಎಂದರೆ ತಪ್ಪಾಗದು. ಬುಧವಾರ (ಜು.1) ಈ ಸಿನಿಮಾದ ಇನ್ನೊಂದು ಟೀಸರ್​ (Toxic New Teaser) ಬಿಡುಗಡೆಯಾಗಿದ್ದು, ಇದರಲ್ಲಿ ಚಿತ್ರದಲ್ಲಿರುವ ಮಹಿಳಾ ಪಾತ್ರಧಾರಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸಲಾಗಿದೆ.

ದೊಡ್ಡ ತಾರಾಗಣ!

ಕೆವಿಎನ್​ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಮಹಿಳಾ ಪಾತ್ರಧಾರಿಗಳ ದಂಡೆ ಇದೆ ಎಂದರು ಸುಳ್ಳಾಗದು. ಸಿನಿಮಾ ತಂಡ ಬಿಡುಗಡೆ ಮಾಡಿರುವ ಟೀಸರ್​ನಲ್ಲಿ ಲೇಡಿ ಸೂಪರ್​ ಸ್ಟಾರ್​ ಖ್ಯಾತಿಯ ನಯನತಾರಾ, ಬಾಲಿವುಡ್​ನ ಕಿಯಾರಾ ಅಡ್ವಾನಿ, ಹುಮಾ ಖುರೇಶಿ ಮತ್ತು ತಾರಾ ಸುತಾರಿಯಾ ಹಾಗೂ ಕಾಂತಾರ ಖ್ಯಾತಿಯ ಕನ್ನಡತಿ ರುಕ್ಮಿಣಿ ವಸಂತ್​ ಖಡಕ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಗಡ್​ ಲುಕ್​ನಲ್ಲಿ ರಾಯಾ!
ಈ ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​ ಯಶ್​, ರಾಯಾ ಮತ್ತು ಟಿಕೆಟ್​ ಎಂಬ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗ ಬಿಡುಗಡೆಯಾಗಿರುವ ಟೀಸರ್​ನಲ್ಲಿ ರಗಡ್​ ಲುಕ್​ನಲ್ಲಿ ಯಶ್​ ಮಿಂಚಿದ್ದಾರೆ. ಆದರೆ ಟೀಸರ್​ನಲ್ಲಿ ನೋಡಿರುವು ರಾಯನ ಪಾತ್ರವೋ? ಅಥವಾ ಟಿಕೆಟ್​ ಪಾತ್ರವೋ? ಎನ್ನುವುದು ಸಿನಿಮಾ ಮಂದಿರದಲ್ಲಿಯೇ ತಿಳಿಯ ಬೇಕಾಗಿದೆ.

ಪ್ರೇಕ್ಷಕರ ಗಮನ ಸೆಳೆದ ಡಿಸ್ಕ್ಲೈಮರ್​!

ಟೀಸರ್​ಗೂ ಮುನ್ನ ತೋರಿಸಿರುವ ಡಿಸ್ಕ್ಲೈಮರ್​ನಲ್ಲಿ ಮಕ್ಕಳು ಇದರಿಂದ ದೂರವಿರಿ, ಪಾಲಕರು ತಮ್ಮ ಮಕ್ಕಳುನ್ನು ದೂರವಿರುವಂತೆ ನೋಡಿಕೊಳ್ಳಿ. ತಾತಂದಿರೂ ನಿಮ್ಮ ಮಕ್ಕಳು ಹಾಗೂ ಅವರ ಮಕ್ಕಳು ದೂರವಿರುವಂತೆ ನೋಡಿಕೊಳ್ಳಿ. ಅಂತೆಯೇ ಮುತ್ತಾತಗಳು ನಮ್ಮ ಸ್ವಂತ ಅಪಾಯದಲ್ಲಿ ಇದನ್ನು ವೀಕ್ಷಿಸಿ ಎಂದು ಬರೆಯಲಾಗಿದೆ.

ನೆಟ್ಟಿಗರಿಂದ ಭರಪೂರ ಮೆಚ್ಚುಗೆ

ಈ ಟೀಸರ್​ ಬಿಡುಗಡೆ ಕಾಣುತ್ತಿದ್ದಂತೆ ನೆಟ್ಟಿಗರಲ್ಲಿ ಸಂಭ್ರಮ ಮನೆಮಾಡಿದೆ. ಅಂತೂ ಸಿನಿಮಾದ ಇನ್ನೊಂದು ಟೀಸರ್​ ಹೊರಬಂದಿದೆ. ನಾಯಕ ನಟಿಯರನ್ನು ಕೇವಲ ಶೋ ಪೀಸ್​ ರೀತಿ ತೋರಿಸುವ ಬದಲು ಪ್ರತಿ ಪಾತ್ರಕ್ಕೂ ಅದರದೇ ಆದ ಮಹತ್ವವಿದ್ದಂತೆ ಕಾಣುತ್ತಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಸಿನಿಮಾವನ್ನು ಗೀತು ಮೋಹನ್​ದಾಸ್​ ನಿರ್ದೇಶಿಸಿದ್ದು, ಟಾಕ್ಸಿಕ್​ ಸಿನಿಮಾ ಇದೇ ವರ್ಷ ಆಗಸ್ಟ್​​ 26 ರಂದು ಕನ್ನಡ, ಹಿಂದಿ ತೆಲುಗು, ತಮಿಳು, ಮಳಿಯಾಳಂ ಮತ್ತು ಇಂಗ್ಲೀಷ್​ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net