‘ಬಿಗ್‌ಬಾಸ್ ಕನ್ನಡ ಸೀಸನ್ 4’ ರ ವಿಜೇತ, ನಟ ಪ್ರಥಮ್ ಅಭಿನಯಿಸಿರುವ ಚಿತ್ರ ‘ಫಸ್ಟ್ ನೈಟ್ ವಿತ್ ದೆವ್ವ’. ಇದೊಂದು ಹಾರರ್, ಕಾಮಿಡಿ, ಥ್ರಿಲ್ಲರ್ ಕಥೆಯಾಗಿದ್ದು, ಪಿವಿಆರ್ ಸ್ವಾಮಿ ಗೋಗರೆದೊಡ್ಡಿ ನಿರ್ದೇಶಿಸುತ್ತಿದ್ದಾರೆ. ಇಲ್ಲಿ ಪ್ರಥಮ್‌ಗೆ ನಿಖಿತಾ ಸ್ವಾಮಿ ಜೋಡಿಯಾಗಿದ್ದು, ಸುಶ್ಮಿತಾ ಮಲ್ನಾಡ್, ಜೀವಿತಾ ವಸಿಷ್ಠ, ಶ್ರೀನಿವಾಸ ಮೂರ್ತಿ, ರಮೇಶ್ ಭಟ್ ಕಲಾ ಬಳಗದಲ್ಲಿದ್ದಾರೆ. ನಾಳೆ ಸಿನಿಮಾ ರಿಲೀಸ್ ಆಗಲಿದ್ದು, ಈ ಮೂಲಕ ಪ್ರಥಮ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.