ಅಭಿಮಾನಿಗಳ ಜತೆ ಕುಳಿತು ಮಾರ್ಕ್ ಸಿನಿಮಾ ನೋಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಟ ಸುದೀಪ್, ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಕುಳಿತು ನೋಡುವುದೇ ಒಂದು ರೀತಿಯ ಮಜಾ ಎಂದರು. ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಗಳನ್ನು ಕೇಳಿಸಿಕೊಳ್ಳುವುದು ಸಖತ್ ಖುಷಿ ಕೊಡುತ್ತೆ ಎಂದರು. ಅಲ್ಲದೆ, ಮುಂದಿನ ಕರ್ನಾಟಕ ಪ್ರವಾಸ ಮಾಡಲಿದ್ದೇವೆ. ಈ ಪ್ರವಾಸ ವಿಜಯ ಯಾತ್ರೆಯಲ್ಲ, ಪೈರಸಿಗೆ ವಿರುದ್ಧವಾಗಿ ನಮ್ಮ ಅಭಿಮಾನಿಗಳು ನಿಂತುಕೊಂಡಿದ್ದಕ್ಕೆ, ಅವರಿಗೆ ಕೃತಜ್ಞತೆ ಸಲ್ಲಿಸಲು ಕರ್ನಾಟಕ ಪ್ರವಾಸ ಮಾಡುತ್ತೇವೆ ಎಂದು ಸುದೀಪ್ ಹೇಳಿದರು.