

ಬೆಂಗಳೂರು: ಕನ್ನಡದ "ಲಕ್ಷ್ಮೀ ಬಾರಮ್ಮ', "ಆಕೃತಿ' ಜತೆಗೆ ತಮಿಳಿನ "ರಾಧೇಶ್ಯಾಮ' ಸೇರಿ ಕೆಲ ಧಾರಾವಾಹಿಗಳಲ್ಲಿ ಹಾಗೂ ಬಾಲಿವುಡ್ನ "ಗುಲಾಬ್ ಗ್ಯಾಂಗ್', "ಗುಲ್ಮೊಹರ್', "ಗನ್ಸ್ ಆ್ ಬನಾರಸ್' ಚಿತ್ರಗಳಲ್ಲಿ ಮಿಂಚಿರುವ ಹೆಗ್ಗಳಿಕೆ ನಟಿ ತನ್ವಿ ರಾವ್ಗೆ ಸಲ್ಲುತ್ತದೆ. ಎಲ್ಲರೂ ಕನ್ನಡದಲ್ಲಿ ಎಂಟ್ರಿ ಕೊಟ್ಟು ನಂತರ ಬಾಲಿವುಡ್ಗೆ ಹಾರಿದರೆ. ತನ್ವಿ ಶಾಲಾ ದಿನಗಳಲ್ಲೇ ಬಾಲಿವುಡ್ನಲ್ಲಿ ಪದಾರ್ಪಣೆ ಮಾಡಿ ಬಳಿಕ ಕನ್ನಡ ಚಿತ್ರರಂಗದಲ್ಲಿ ಬಿಜಿಯಾದವರು. ಇದಲ್ಲದೇ ದೇಶ-ವಿದೇಶಗಳಲ್ಲಿ ಭರತನಾಟ್ಯಂ ಪ್ರದರ್ಶನ ನೀಡಿರುವ ತನ್ವಿ, ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದೇ ರೋಚಕ ಕಥೆ. "ನನಗೆ ಬಾಲ್ಯದಿಂದಲೂ ಮಾಧುರಿ ದೀಕ್ಷಿತ್ ಅಂದರೆ ತುಂಬ ಇಷ್ಟ. ನಾನೂ ಅವರಂತೆ ಆಗಬೇಕು ಅಂತ ತುಂಬ ಸಣ್ಣ ವಯಸ್ಸಿನಲ್ಲೇ ಡಾನ್ಸ್ ಕ್ಲಾಸ್ ಸೇರಿದೆ. ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಮುಂಬೈನಲ್ಲಿ ಕಾರ್ಯಕ್ರಮ ನೀಡಲು ತೆರಳಿದ್ದೆ. ಅದೇ ಸಮಯದಲ್ಲಿ ಮಾಧುರಿ ದೀತ್ ಅವರ ಕಮ್ಬ್ಯಾಕ್ ಸಿನಿಮಾ "ಗುಲಾಬ್ ಗ್ಯಾಂಗ್' ಚಿತ್ರಕ್ಕಾಗಿ ಆಡಿಷನ್ ನಡೆಯುತ್ತಿರುವುದು ತಿಳಿದು, ನಾನೂ ಭಾಗವಹಿಸಿದೆ. ಅವರು ನನ್ನ ವಯಸ್ಸಿನ ಪಾತ್ರ ಹುಡುಕುತ್ತಿದ್ದ ಕಾರಣ, ಆಯ್ಕೆಯಾದೆ' ಎಂದು ಮಾಹಿತಿ ನೀಡುತ್ತಾರೆ. ನಂತರವೂ ಕೆಲ ಹಿಂದಿ ಚಿತ್ರಗಳಲ್ಲಿ ನಟಿಸಿದ ಅವರು, ಕ್ರಮೇಣ ಕನ್ನಡ ಧಾರಾವಾಹಿಗಳಲ್ಲಿ ಬಿಜಿಯಾದರು. "ತಾತ ವೃತ್ತಿಯಲ್ಲಿ ಪೋಸ್ಟ್ ಮಾಸ್ಟರ್ ಆದರೂ ನಾಟಕ ಮಾಡುತ್ತಿದ್ದರು, ಕವನ ಬರೆಯುತ್ತಿದ್ದರು. ಅಪ್ಪ&ಅಮ್ಮ ಇಬ್ಬರಿಗೂ ಸಿಂಗಿಂಗ್ ಇಷ್ಟ. ಆದರೆ, ಅವರು ಯಾರೂ ಕಲೆಯನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಲಿಲ್ಲ. ನನಗೆ ಬಾಲ್ಯದಿಂದಲೂ ವೇದಿಕೆ ಮೇಲೆ ಅಥವಾ ಕ್ಯಾಮರಾ ಮುಂದೆ ಪಾರ್ಮ್ರ್ ಮಾಡುವುದು ಅಂದರೆ ತುಂಬ ಇಷ್ಟ. ಹೀಗಾಗಿ ನಾನು ಚಿತ್ರರಂಗವನ್ನೇ ವೃತ್ತಿಯನ್ನಾಗಿ ತೆಗೆದುಕೊಂಡೆ' ಎಂದು ಹೇಳಿಕೊಳ್ಳುತ್ತಾರೆ ತನ್ವಿ.
ನಟ, ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ "ಭಾವಾಂತರ' ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ. ಈ ಚಿತ್ರದ ಮೂಲಕ ತನ್ವಿ ರಾವ್ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದು, ""ಭಾವಾಂತರ' ನನ್ನ ಮೊದಲ ಸಿನಿಮಾ. ಕಾರ್ತಿಕ್ "ಲಕ್ಷ್ಮೀ ಬಾರಮ್ಮ' ಸೀರಿಯಲ್ ನೋಡಿದ್ದರು. ಅವರಿಗೆ ನನ್ನ ಬಗ್ಗೆ ಗೊತ್ತಿತ್ತು. ನನ್ನನ್ನು ಸಂಪರ್ಕಿಸಿ ಕಥೆ ಹೇಳಿದರು. ಆ ರೀತಿಯ ಕಥೆ ನಾನು ಯಾವುತ್ತೂ ನೋಡಿಲ್ಲ, ಕೇಳಿಲ್ಲ. ಹೀಗಾಗಿ ಇಷ್ಟವಾಯಿತು. ಸ್ವಲ್ಪ ಸಮಯ ತೆಗೆದುಕೊಂಡು ಇಬ್ಬರೂ ಕಥೆ, ಪಾತ್ರದ ಬಗ್ಗೆ ಚರ್ಚಿಸಿದೆವು. ನನ್ನ ಪಾತ್ರದ ಹೆಸರು "ರಾಧಾ'. ಆಕೆ ಮಹಾತ್ವಾಕಾಂಕ್ಷೆಯಿರುವ, ಎಲ್ಲದರಲ್ಲೂ ಪೆರ್ಕ್ಷನ್ ಬಯಸುವ ಪ್ಯಾಷನೇಟ್ ಸಿನಿಮಾ ನಿರ್ದೇಶಕಿ. ಆಕೆಯ ಜೀವನದಲ್ಲಿ ಏನೋ ನಡೆದಿರುತ್ತದೆ. ಅದರ ಹಿಂದಿನ, ಮುಂದೆ ನಡೆಯುವ ವಿಷಯಗಳ ಸುತ್ತ "ಭಾವಾಂತರ' ಸಾಗುತ್ತದೆ. ಇದಲ್ಲದೇ ಕನ್ನಡದಲ್ಲಿ ಇನ್ನೂ ಕೆಲ ಕಥೆಗಳನ್ನು ಕೇಳಿದ್ದೇನೆ' ಎನ್ನುವ ತನ್ವಿ ಅವುಗಳ ಬಗ್ಗೆ ಅಧಿಕೃತ ಘೋಷಣೆಗೆ ಎದುರು ನೋಡುತ್ತಿದ್ದಾರೆ.