ಸಿನಿಮಾಗಳಲ್ಲಿ ಸಾಮಾನ್ಯವಾಗಿ ನಾಯಕ, ನಾಯಕಿ, ಖಳನಾಯಕ, ಒಂದು ಪೋಷಕ ಅಥವಾ ಹಾಸ್ಯಪಾತ್ರಕ್ಕೆ ಪ್ರಾಮುಖ್ಯ ನೀಡಲಾಗುತ್ತದೆ. ಹಾಗೇ ಮೊದರ್ಲಧದಲ್ಲಿ ಪಾತ್ರಗಳನ್ನು ಪರಿಚಯಿಸಿ ಮೂರ್ನಾಲ್ಕು ಪ್ರಶ್ನೆಗಳನ್ನು ಸೃಷ್ಟಿಸಿ, ದ್ವೀತಿಯಾರ್ಧದಲ್ಲಿ ಉತ್ತರ ನೀಡುವುದು ಸಹ ಕಾಮನ್. ಆದರೆ, ಈ ವಿಷಯಗಳಲ್ಲಿ ಸುಕೇಶ್ ಶೆಟ್ಟಿ ಹಲವು ಹೆಜ್ಜೆ ಮುಂದೆ ಹೋಗಿದ್ದಾರೆ. ಏಕೆಂದರೆ ಈ ಚಿತ್ರಕ್ಕೆ "ಪೀಟರ್' ಅಂತ ಮಾತ್ರವಲ್ಲ "ಜೆಸ್ಸಿ', "ಡೇವಿಡ್', "ಜೋಸ್ೆ', "ಮೇರಿ', "ಶಂಭು', "ಮೀರಾ', "ರಾಧಾ'... ಹೀಗೆ ಯಾವ ಪಾತ್ರದ ಹೆಸರನ್ನು ಬೇಕಾದರೂ ಇಡುವಷ್ಟರ ಮಟ್ಟಿಗೆ ಎಲ್ಲ ಪಾತ್ರಗಳೂ ಕಥೆಯನ್ನು ಹೊತ್ತು ಸಾಗುತ್ತವೆ. ಮೊದರ್ಲಧ "ಪೀಟರ್' ಕಡಿಮೆ ಎಂದರೂ ಹತ್ತು ಪ್ರಶ್ನೆಗಳನ್ನು ಹುಟ್ಟಿಹಾಕುತ್ತಾನೆ. ಮಗನಾಗಿ, ಪ್ರೇಮಿಯಾಗಿ, ತಮ್ಮನಾಗಿ, ಗೆಳೆಯನಾಗಿ ಎಲ್ಲ ಸಂಬಂಧಗಳಲ್ಲೂ ಸಿಲುಕಿ ನಲುಗುವ ಪೀಟರ್ ಆಗಿ ರಾಜೇಶ್ ಧ್ರುವ ಗಮನ ಸೆಳೆಯುತ್ತಾರೆ. ಪ್ರತಿಮಾ, ದೀನಾ, ರಾಮ್, ರವೀಾ, ಜಾನ್ವಿ ಪಾತ್ರಗಳು ಸಹ ಅವರಿಗೆ ಸಮನಾಗಿ ನಿಲ್ಲುತ್ತವೆ. ರಿತ್ವಿಕ್ ಮುರಳೀಧರ್ ಸಂಗೀತದಲ್ಲಿ "ಸುಂದರಿ ಸುಂದರಿ' ಸಾಂಗ್ ಸಾಗುವ ಸಾಲಿನಷ್ಟೇ ಸುಂದರವಾಗಿದೆ. ಗುರುಪ್ರಸಾದ್ ಸೆರೆಹಿಡಿದಿರುವ ಮಲೆನಾಡ ಹಸಿರ ಸೊಬಗು, ಅದನ್ನು ಕೌತುಕ ಕಥೆಯಲ್ಲಿ ನಿರೂಪಿಸಿರುವ ಸುಕೇಶ್ ಶೆಟ್ಟಿ ಬುದ್ಧಿವಂತಿಕೆ, ಅದೆರಡಕ್ಕೂ ತಕ್ಕ ಹಿನ್ನೆಲೆ ಸಂಗೀತ "ಪೀಟರ್'ಅನ್ನು ಮತ್ತೊಂದು ಹಂತಕ್ಕೇರಿಸಿವೆ.