ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 12ಕ್ಕೆ ಸಂಪೂರ್ಣವಾಗಿ ತೆರೆ ಬಿದ್ದಿದ್ದು, ಗಿಲ್ಲಿ ನಟ ಟ್ರೋಫಿ ಎತ್ತಿಹಿಡಿದದ್ದು ಇದೀಗ ಬಿಗ್ ಬಾಸ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ ಹಾಗೂ ದಾಖಲೆಗೆ ಸಾಕ್ಷಿಯಾಗಿದೆ. ಬರೋಬ್ಬರಿ 37ಕ್ಕೂ ಅಧಿಕ ಕೋಟಿ ಮತಗಳನ್ನು ಪಡೆದ ಗಿಲ್ಲಿ, ಇಡೀ ಕರುನಾಡನ್ನು ರಂಜಿಸಿ, ಅಭಿಮಾನದ ಸಾಗರದಲ್ಲಿ ತೇಲಾಡಿದ್ದು ಮತ್ತೊಂದು ರೋಚಕ. ಇನ್ನು ರನ್ನರ್ಅಪ್ ಸ್ಥಾನವನ್ನು ರಕ್ಷಿತಾ ಪಡೆದರೆ, ಮೊದಲ ರನ್ನರ್ಅಪ್ ಆಗಿ ಅಶ್ವಿನಿ ಹೊರಹೊಮ್ಮಿದರು.