ನಾಲ್ಕು ದಶಕಗಳ ಸುದೀರ್ಘ ಸಿನಿಜೀವನದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ ಬಹುಭಾಷೆಗಳಲ್ಲಿ 700ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಸ ನಿರ್ದೇಶಿಸಿರುವ ಹೆಗ್ಗಳಿಕೆ ಡಾ. ರವಿ ವರ್ಮಾಗೆ ಸಲ್ಲುತ್ತದೆ. ವಿಶೇಷ ಅಂದರೆ, ಅವರು ಆಮಿರ್ ಖಾನ್, ಸಲ್ಮಾನ್ ಖಾನ್, ಸನ್ನಿ ಡಿಯೋಲ್ ಸೇರಿ ಹಲವು ಬಾಲಿವುಡ್ ಸ್ಟಾರ್ಗಳ ನೆಚ್ಚಿನ ಆ್ಯಕ್ಷನ್ ಡೈರೆಕ್ಟರ್. ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿ ಯಶಸ್ವಿಯಾದ "ರಕ್ಕಸಪುರದೋಳ್' ಮೂಲಕ ನಿರ್ಮಾಣಕ್ಕೆ ಕೈ ಹಾಕಿರುವ ಅವರು, ಬಾಲಿವುಡ್ನಲ್ಲಿ ಸಾಹಸ ನಿರ್ದೇಶನದ ಜತೆಜತೆಗೆ ನವಾಜುದ್ದಿನ್ ಸಿದ್ದಿಕಿ ನಾಯಕನಾಗಿರುವ "ಬ್ಲೈಂಡ್ ಬಾಬು'ಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹೀಗೆ ಸಾಹಸ, ನಿರ್ದೇಶನ, ನಿರ್ಮಾಣಗಳಲ್ಲಿ ಬಿಜಿಯಾಗಿರುವ ರವಿ ವರ್ಮಾ, ಇತ್ತೀಚೆಗಷ್ಟೆ ವಿಜಯವಾಣಿಗೆ ಮಾತಿಗೆ ಸಿಕ್ಕಿದ್ದರು. ""ರಕ್ಕಸಪುರದೋಳ್'ಗೆ ಹಾಕಿದ್ದ ಬಜೆಟ್ ವಾಪಸ್ಸು ಬಂತು. ಅದರ ನಡುವೆಯೇ ಮೂರು ಕಥೆಗಳನ್ನು ಓಕೆ ಮಾಡಿದ್ದೇನೆ. ಇದೇ ವರ್ಷದಂತ್ಯಕ್ಕೆ ಒಂದು ಸಿನಿಮಾ ಪ್ರಾರಂಭಿಸಲಿದ್ದೇನೆ. ನಾನು ಯಾವ ಚಿತ್ರರಂಗದಲ್ಲಿ ಕೆಲಸ ಮಾಡಿದರೂ, ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮುಂದುವರಿಸುತ್ತೇನೆ. ಜತೆಗೆ ನಾನು ನಿರ್ದೇಶಿಸುತ್ತಿರುವ ಬಾಲಿವುಡ್ನ "ಬ್ಲೆ$ಂಡ್ ಬಾಬು' ಶೂಟಿಂಗ್, ಪೋಸ್ಟ್ & ಪ್ರೊಡಕ್ಷನ್ ಮುಗಿದಿದೆ. ಇದೇ ವರ್ಷದಂತ್ಯಕ್ಕೆ ರಿಲೀಸ್ ಪ್ಲಾ$್ಯನ್ ಮಾಡುತ್ತಿದ್ದೇವೆ. ತೆಲುಗಿನಲ್ಲಿ ಬಾಲಯ್ಯ 111ನೇ ಚಿತ್ರ, ಕನ್ನಡದ "ಪರಾಕ್', "ಬಟ್ವಾರಾ 1947' ಸೇರಿ ಇನ್ನೂ ಕೆಲ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದೇನೆ' ಎನ್ನುತ್ತಾರೆ.