ಒಂದು ರಾತ್ರಿಗೆ 2.3 ಲಕ್ಷ ರೂ.! ರಶ್ಮಿಕಾ-ವಿಜಯ್ ಸೈಲೆಂಟ್ ಆಗಿ ರಜಾ ಕಳೆದ ಥೈಲ್ಯಾಂಡ್ ವಿಲ್ಲಾ ಹೇಗಿದೆ ನೋಡಿ...Rashmika Mandanna

Rashmika Mandanna (ಚಿತ್ರ Instagram)
Rashmika Mandanna (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ಉದಯಪುರದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್​ ಜೋಡಿ
  • ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಥೈಲ್ಯಾಂಡ್​ನ ವಿಲ್ಲಾದಲ್ಲಿ ಅಮೂಲ್ಯವಾದ ಸಮಯ ಕಳೆಯುತ್ತಿದ್ದಾರೆ
  • ಆಧುನಿಕ ವಾಸ್ತುಶಿಲ್ಪ ಮತ್ತು ಪ್ರಕೃತಿಯ ಮಿಶ್ರಣವಾಗಿದ್ದು, ಒಂದೇ ಚೌಕಟ್ಟಿನಲ್ಲಿ ಇದನ್ನು ನಿರ್ಮಿಸಲಾಗಿದೆ
Rashmika Mandanna: ಇತ್ತೀಚೆಗೆ ಉದಯಪುರದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್​ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಥೈಲ್ಯಾಂಡ್​ನ ವಿಲ್ಲಾದಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ ಎಂಬುದನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. 

ವಿಜಯ್ ಮತ್ತು ರಶ್ಮಿಕಾ ಅವರ ಅದ್ದೂರಿ ಹನಿಮೂನ್ ಸ್ಪಾಟ್

ವಿಡಿಯೋದಲ್ಲಿ ರಶ್ಮಿಕಾ, ವಿಜಯ್ ಜೊತೆ ಕೆಲವೊಂದು ಸಂಭಾಷಣೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಮಂದೆ ನನ್ನ ಪತಿ ಎಂದು ಹೇಳುವ ಅಭ್ಯಾಸ ಮಾಡಿಕೊಳ್ಳುತ್ತಿದ್ದೇನೆ ಎಂದು ಒಪ್ಪಿಕೊಂಡರು. ಈ ವೇಳೆ ಇಬ್ಬರು ಒಟ್ಟಿಗೆ ಉಪಹಾರ ಸೇವಿಸುತ್ತಾರೆ. ನೃತ್ಯ ಮಾಡುತ್ತಾರೆ. ಜೊತೆಗೆ ಮುಂದಿನ ಜೀವನದ ಬಗ್ಗೆ ಮಾತನಾಡುತ್ತಾ ಆತ್ಮೀಯವಾಗಿ ಸಮಯ ಕಳೆಯುತ್ತಿದ್ದಾರೆ.
ಅವರು ತಂಗಿದ್ದ ಐಷಾರಾಮಿ ವಿಲ್ಲಾವನ್ನು ಕೊಹ್ ಕೂನ್ ಎಂದು ಕರೆಯಲಾಗುತ್ತದೆ. ಇದು ಆಧುನಿಕ ವಾಸ್ತುಶಿಲ್ಪ ಮತ್ತು ಪ್ರಕೃತಿಯ ಮಿಶ್ರಣವಾಗಿದ್ದು, ಒಂದೇ ಚೌಕಟ್ಟಿನಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ಸ್ಥಳವು ಕೊಹ್ ಸಮಯಿಯಲ್ಲಿರುವ ಚಾವೆಂಗ್​ ನೋಯ್​ ಬೆಟ್ಟಗಳಲ್ಲಿ  7+2 ಮಲಗುವ ಕೋಣೆಗಳ ಹೊಂದಿದೆ. ಐಷರಾಮಿ ಕೋಣೆಗಳು, ಅಲಂಕಾರಿಕ ಪೀಠೋಪಕರಣಗಳನ್ನು ಹೊಂದಿದೆ. 
ಆದಾಗ್ಯೂ, ವಿಲ್ಲಾದ ಪ್ರಮುಖ ವೈಶಿಷ್ಯವೆಂದರೆ, ಪ್ಯಾಟಿಯೋದಿಂದ ಕಾಣುವ ಸುಂದರ ಸಮುದ್ರ ನೋಟ, ಸೋಫಾಗಳು, ಟೇಬಲ್​ ಮತ್ತು ಸಂಜೆಯ ಸಮಯದಲ್ಲಿ ಬೆಳಕಿನ ಸ್ಪರ್ಶವನ್ನು ನೀಡುವ ದೀಪಗಳೊಂದಿಗೆ ಹೊರಾಂಗಣ ಆಸನಗಳು ಸುಂದರ ನೋಟವನ್ನು ಬೀರುತ್ತದೆ.
ಮದುವೆಯ ಸಂಭ್ರಮದ ನಂತರ, ನಾವು ಒಂದೆರಡು ದಿನಗಳವರೆಗೆ ಸ್ವಲ್ಪ ವಿರಾಮವನ್ನು ತೆಗೆದುಕೊಳ್ಳಬೇಕೆಂದು ಬಯಸಿದ್ದೆವು. ಪ್ರಶಾಂತವಾಗಿ ಶುರುವಾಗುವ ಬೆಳಿಗ್ಗೆಗಳು, ಮಧ್ಯಾಹ್ನದ ಬಿಸಿಲಿಗೆ ತಂಪೆರೆಯುವ ಈಜುಗಳು, ಇನ್ನು ಸಂಜೆಯಾದರಂತೂ ಟೇಬಲ್ ಟೆನ್ನಿಸ್ ಮತ್ತು ಪೂಲ್ ಆಟದ ಸದ್ದು! ರಾತ್ರಿ ಹೊತ್ತು ಎಲ್ಲರೂ ಒಟ್ಟಾಗಿ ಚಲನಚಿತ್ರ ನೋಡುತ್ತಾ ಹರಟೆ ಹೊಡೆಯುವಾಗ ಉಕ್ಕಿ ಬರುವ ನಗು. @Airbnb ಕೊಹ್ ಸಮುಯಿಯಲ್ಲಿ ಇದದ್ದು ನಮ್ಮದೇ ಮನೆ ಎಂಬಂತೆ ಭಾಸವಾಯಿತು. ಆ ದಿನಗಳಲ್ಲಿನ ಸ್ನೇಹಿತರೊಂದಿಗೆ ಕಳೆದ ಕೆಲವು ಕ್ಷಣಗಳು ಮತ್ತು ಮನೆ ನಗುವಿನಿಂದ ತುಂಬಿತ್ತು ಎಂದು ರಶ್ಮಿಕಾ ಬರೆದು ಪೋಸ್ಟ್ ಮಾಡಿದ್ದರು.

Airbnb ಬಗ್ಗೆ ವಿವರಗಳು

ವಿಲ್ಲಾದಲ್ಲಿ, ನೀಡಲಾಗುವ ಸೇವೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಅತಿಥಿಗಳ ಇಚ್ಛೆಯಂತೆ ಕಾಂಟಿನೆಂಟಲ್ ಅಥವಾ ಏಷ್ಯನ್ ಉಪಹಾರ ಲಭ್ಯವಿರುತ್ತದೆ. ನಿಮ್ಮ ಅಗತ್ಯಗಳನ್ನು ಪೂರೈಸುವ ಸಲುವಾಗಿ ವಿಲ್ಲಾ ಮ್ಯಾನೇಜರ್​ ಮನೆ ಕೆಲಸದವರನ್ನು ನೇಮಿಸಿರುತ್ತಾರೆ. ಅತಿಥಿಗಳ ಅನುಕೂಲಕ್ಕಾಗಿ ಒಂದು ರೌಂಡ್-ಟ್ರಿಪ್ ವಿಮಾನ ನಿಲ್ದಾಣ ವರ್ಗಾವಣೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿರುತ್ತದೆ. ವಿಲ್ಲಾದಲ್ಲಿ ಮೂರು ರಾತ್ರಿಗಳಿಗೆ ಸುಮಾರು 7.8 ಲಕ್ಷ ವೆಚ್ಚವಾಗುತ್ತದೆ.

ವಿಜಯ್ ಮತ್ತು ರಶ್ಮಿಕಾ ಬಗ್ಗೆ

ಆಪ್ತ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದ ಆತ್ಮೀಯ ಸಮಾರಂಭದಲ್ಲಿ ವಿಜಯ್ ಮತ್ತು ರಶ್ಮಿಕಾ ವಿವಾಹವಾದರು. ವಿವಾಹವು ಎರಡೂ ಕುಟುಂಬಗಳ ಸಾಂಪ್ರದಾಯಗಳನ್ನು ಒಳಗೊಂಡಿತ್ತು. ಉದ್ಯಮದ ಸ್ನೇಹಿತರಿಗಾಗಿ ಮಾರ್ಚ್​ 4 ರಂದು ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net