ನಟನೆಗೆ ಗುಡ್‌ಬೈ ಹೇಳ್ತಾರಾ ಶ್ರೀಲೀಲಾ? ಟ್ರೋಲ್‌ಗಳ ಕಾಟಕ್ಕೆ ಬೇಸತ್ತ ಪೆಪ್ಪಿ ಬೆಡಗಿ! Sreeleela

ಚಿತ್ರ Instagram
ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಸಿನೆಮಾ ತಾರೆಯರ ಬದುಕು ಹೊರಗಿನಿಂದ ಎಷ್ಟು ಸುಂದರವಾಗಿ ಕಾಣಿಸುತ್ತದೆಯೋ
  • ಒಳಗಿನಿಂದ ಅಷ್ಟೇ ಮಾನಸಿಕ ಒತ್ತಡದಿಂದ ಕೂಡಿರುತ್ತದೆ ಎಂಬುದಕ್ಕೆ ಇವರೇ ಸಾಕ್ಷಿ
  • ಟ್ರೋಲಿಂಗ್​ಗಳಿಂದಾಗಿ ನಾನು ತುಂಬಾ ಕಷ್ಟವನ್ನು ಅನುಭವಿಸಿ ನಟನೆಯನ್ನೇ ಬಿಡಬೇಕೆಂದು ಯೋಚಿಸಿದ್ದೆ
  • ಪ್ರತಿಯೊಂದು ಸಣ್ಣ ವಿಷಯಕ್ಕೂ ಜನ ಟೀಕಿಸುವುದು ನೋಡಿದಾಗ ಬೇಸರವಾಗುತ್ತದೆ
ಹೈದರಾಬಾದ್: ಸಿನೆಮಾ ತಾರೆಯರ ಬದುಕು ಹೊರಗಿನಿಂದ ಎಷ್ಟು ಸುಂದರವಾಗಿ ಕಾಣಿಸುತ್ತದೆಯೋ, (Sreeleela) ಒಳಗಿನಿಂದ ಅಷ್ಟೇ ಮಾನಸಿಕ ಒತ್ತಡದಿಂದ ಕೂಡಿರುತ್ತದೆ ಎಂಬುದಕ್ಕೆ ಇತ್ತೀಚಿನ ಒಂದು ಘಟನೆ ಸಾಕ್ಷಿಯಾಗಿದೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ 'ಉಸ್ತಾದ್ ಭಗತ್ ಸಿಂಗ್' ಚಿತ್ರದ ಪ್ರಚಾರದ ಭಾಗವಾಗಿ ನಟಿಯರಾದ ಶ್ರೀಲೀಲಾ ಮತ್ತು ರಾಶಿ ಖನ್ನಾ ನಿರೂಪಕಿ ಸುಮಾ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಸೋಶಿಯಲ್​ ಮೀಡಿಯಾ ಟ್ರೋಲಿಂಗ್​ ಬಗ್ಗೆ ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಟ್ರೋಲಿಂಗ್‌ನಿಂದ ನಟನೆಗೆ ಬ್ರೇಕ್?

ಸಂದರ್ಶನದ ವೇಳೆ ನಿರೂಪಕಿ ಸುಮಾ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಟ್ರೋಲಿಂಗ್ ನಿಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಶ್ರೀಲೀಲಾ ಟ್ರೋಲಿಂಗ್​ಗಳಿಂದಾಗಿ ನಾನು ತುಂಬಾ ಕಷ್ಟವನ್ನು ಅನುಭವಿಸಿದ್ದೇನೆ. ಇದರಿಂದ ನಾನು ನಟನೆಯನ್ನೇ ನಿಲ್ಲಿಸಬೇಕೆಂಬ ನಿರ್ಧಾರಕ್ಕೆ ಬಂದು ನನ್ನ ತಾಯಿಯೊಂದಿಗೆ ಈ ವಿಚಾರ ಹಂಚಿಕೊಂಡಿದ್ದೆ. ಪ್ರತಿಯೊಂದು ಸಣ್ಣ ವಿಷಯಕ್ಕೂ ಜನ ಟೀಕಿಸುವುದು ನೋಡಿದಾಗ ಬೇಸರವಾಗುತ್ತದೆ ಎಂದು ಹೇಳಿದರು.
ಈ ವೇಳೆ ರಾಶಿ ಮಾತನಾಡಿ, ಆರಂಭದಲ್ಲಿ ಟ್ರೋಲಿಂಗ್​ಗಳು ಕೇವಲ ತಮಾಷೆಯಾಗಿರುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಅದು ವಿಕೃತ ರೂಪ ಕಳೆದುಕೊಂಡಿವೆ. ಜನರು ಸತ್ಯವನ್ನು ತಿಳಿಯದೇ ಕಾಮೆಂಟ್​ ಮಾಡುತ್ತಾರೆ. ಇದು ಒಬ್ಬ ವ್ಯಕ್ತಿಯ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀಲೀಲಾ ಮತ್ತು ರಾಶಿ ಖನ್ನಾ ಬಗ್ಗೆ

2019 ರ ಕನ್ನಡ ಚಿತ್ರ ಕಿಸ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀಲೀಲಾ ನಟನೆಯನ್ನು ತ್ಯಜಿಸದೇ ಎಂಬಿಬಿಎಸ್​ ಪದವಿಯನ್ನು ಪೂರ್ಣಗೊಳಿಸಿದರು. ಭಗವಂತ ಕೇಸರಿ ಮತ್ತು ಗುಂಟೂರು ಕಾರಮ್‌ನಂತಹ ತೆಲುಗು ಚಿತ್ರಗಳಲ್ಲಿ ನಟಿಸುತ್ತಿರುವಾಗಲೇ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ನಟಿ ಕೊನೆಯದಾಗಿ ಉಸ್ತಾದ್ ಭಗತ್ ಸಿಂಗ್‌ನಲ್ಲಿ ಕಾಣಿಸಿಕೊಂಡರು ಮತ್ತು ಶೀಘ್ರದಲ್ಲೇ ಧನುಷ್ ಅವರ ಮುಂದಿನ ತಮಿಳು ಚಿತ್ರದಲ್ಲಿ ನಟಿಸಲಿದ್ದಾರೆ.
2013 ರಲ್ಲಿ ಹಿಂದಿ ಚಿತ್ರ ಮದ್ರಾಸ್ ಕೆಫೆ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಶಿ ತೆಲುಗು ಚಿತ್ರರಂಗದಲ್ಲಿ ಊಹಲು ಗುಸಗುಸಲಾಡೆ, ಸುಪ್ರೀಂ ಮತ್ತು ಹೈಪರ್ ನಂತಹ ಚಿತ್ರಗಳ ಮೂಲಕ ಹೆಸರನ್ನು ಮಾಡಿದರು. ಉಸ್ತಾದ್ ಭಗತ್ ಸಿಂಗ್ ನಂತರ, ರಾಜ್ & ಡಿಕೆ ಪ್ರೈಮ್ ವಿಡಿಯೋ ಸರಣಿಯ ಎರಡನೇ ಸೀಸನ್ ಫರ್ಜಿಯಲ್ಲಿ ನಟಿಸಿದ್ದಾರೆ. ತಲಾಖೋನ್ ಮೇ ಏಕ್​, ಬ್ರಿಡ್ಜ್​ ಜೊತೆಗೆ ತಮಿಳಿನಲ್ಲಿ ರೌಡಿ ಅಂಡ್ ಕೋ ಚಿತ್ರದಲ್ಲಿ ನಟಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net