"ಅಪಾಯವಿದೆ ಎಚ್ಚರಿಕೆ' ಚಿತ್ರದ ನಿರ್ದೇಶಕ ಮೂಲತಃ ಮಲೆನಾಡಿನವರೇ ಆದ ಅಭಿಜಿತ್ ತೀರ್ಥಹಳ್ಳಿ, "ಮಲೆನಾಡಿನಲ್ಲಿ ಇಂರ್ಟನೆಟ್ ಇರಲಿ, ಸರಿಯಾದ ನೆಟ್ವರ್ಕ್ ಕೂಡ ಇಲ್ಲ. ಅಜ್ಜಿ ಹೇಳುವ ಕಥೆಗಳೇ ಇಂರ್ಟನೆಟ್. ಕಾಡಿನ ಕಥೆಗಳನ್ನು ಕೇಳುತ್ತಾ ಬೆಳೆಯುತ್ತೇವೆ. ಹೀಗಾಗಿ ಊರಿನಲ್ಲಿ ಕೇಳಿದ, ನೋಡಿದ, ನಮ್ಮ ಸುತ್ತಮುತ್ತಲಿನ ಪರಿಸರದ ಕಥೆಗಳನ್ನೇ ಹೇಳುವ ಪ್ರಯತ್ನ ಮಾಡುತ್ತೇವೆ' ಎನ್ನುತ್ತಾರೆ. ಹಾಗೇ, "ನಾನು ಹುಟ್ಟಿ, ಬೆಳೆದ ಮನೆಯಲ್ಲಿ ಇವತ್ತೂ ನೆಟ್ವರ್ಕ್ ಸಿಗುವುದಿಲ್ಲ. ಕೊನೆಯ ಬಾರಿ ಊರಿಗೆ ಹೋಗಿದ್ದಾಗ ಮನೆಯ ಬಳಿ ಕಾಳಿಂಗ ಸರ್ಪಗಳು ಬಂದುಬಿಟ್ಟಿದ್ದವು. ನಾವು ಬೆಳೆದ ಪರಿಸರದ ಕುರಿತ ಕಥೆ ಹೇಳುವುದು ಸರಳವೆನ್ನಿಸುತ್ತದೆ. ಪ್ರಶಾಂತ್ ನೀಲ್ ಶ್ರೀಮಂತ ಕುಟುಂಬದಿಂದ ಬಂದವರು, ಸ್ಟೈಲಿಶ್ ಕಥೆ ಹೇಳುತ್ತಾರೆ. ದುನಿಯಾ ಸೂರಿ ರಾ, ರಗ್ಗಡ್ ಜನರ ನಡುವೆ ಬೆಳೆದವರು, ರಾ ಸ್ಟೋರಿ ಹೇಳುತ್ತಾನೆ. "ಅಪಾಯವಿದೆ ಎಚ್ಚರಿಕೆ' ಬಳಿಕ ನನ್ನ ಮುಂದಿನ ಕಥೆಯೂ ಮಲೆನಾಡಿನ ಕಥೆಯೇ ಆಗಿರಲಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.