ಐಎನ್‌ಎ ಮುಖಂಡ 102 ವರ್ಷದ ಮಾಧವನ್, ನೇತಾಜಿ ಮರಿಮೊಮ್ಮಗಳು ರಾಜಶ್ರೀ ಚೌಧರಿ, ಹರಿಯಾಣ, ಛತ್ತೀಸ್‌ಗಡ ಸೇರಿ ದೇಶದ ವಿವಿಧ ಮೂಲೆಗಳಿಂದ ಇಂಡಿಯನ್ ನ್ಯಾಷನಲ್ ಆರ್ಮಿ ಮುಖಂಡರು ಬರುತ್ತಿದ್ದಾರೆ. ಜತೆಗೆ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ಸಂಸದರಾದ ಡಾ.ಸಿ.ಎನ್. ಮಂಜುನಾಥ್, ಬಿ.ವೈ.ರಾಘವೇಂದ್ರ, ತೇಜಸ್ವಿ ಸೂರ್ಯ ಸೇರಿ ಹಲವರು ಸಿನಿಮಾ ವೀಕ್ಷಿಸಲಿದ್ದಾರೆ. ಕೇಂದ್ರ ಮಾಜಿ ಸಚಿವೆ ಮೀನಾಕ್ಷಿ ಲೇಖಿ ಸಿನಿಮಾ ಬಗ್ಗೆ ಆಸಕ್ತಿ ವಹಿಸಿದ್ದು, ಅವರು ಸಿಂಗಾಪುರ, ಥಾಯ್ಲೆಂಡ್‌ನಲ್ಲಿ ರಿಲೀಸ್ ಮಾಡಲು ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ರೂಪಾ ಅಯ್ಯರ್ ಮಾಹಿತಿ ನೀಡಿದರು.