ಕಿಚ್ಚ ಹೇಳಿದ ಫೇಕ್ ಪಡೆಯ ಅಸಲಿಯತ್ತು ಇಲ್ಲಿದೆ ನೋಡಿ...ಮಾರ್ಕ್​ ಬಿಡುಗಡೆ ಬೆನ್ನಲ್ಲೇ ಶುರುವಾಯ್ತು ಅಪಪ್ರಚಾರ! Kichcha Sudeepa

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್
Published on

ಪ್ರಮುಖ ಮುಖ್ಯಾಂಶಗಳು

  • ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ "ಮಾರ್ಕ್​" ಸಿನಿಮಾ ಇಂದು ದೇಶಾದ್ಯಂತ ತೆರೆಗೆ
  • ಸುದೀಪ್​ ಅವರನ್ನು ಮತ್ತೊಮ್ಮೆ ಮಾಸ್​ ಅವತಾರದಲ್ಲಿ​ ಕಂಡ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ
  • ಮಾರ್ಕ್​ ಸಿನಿಮಾಗೆ ರಾಜ್ಯಾದ್ಯಂತ ಒಳ್ಳೆಯ ರೆಸ್ಪಾನ್ಸ್​ ಹರಿದುಬರುತ್ತಿದೆ
  • ಉತ್ತಮ ಪ್ರತಿಕ್ರಿಯೆ ನಡುವೆ ಮಾರ್ಕ್​ ಸಿನಿಮಾ ಹಾಗೂ ಸುದೀಪ್​ ವಿರುದ್ಧ ನೆಗೆಟಿವ್​ ಟ್ರೆಂಡ್​ ನಡೆಯುತ್ತಿದೆ
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ( Kichcha Sudeepa ) ಅಭಿನಯದ ಬಹುನಿರೀಕ್ಷಿತ "ಮಾರ್ಕ್​" ಸಿನಿಮಾ ಇಂದು ದೇಶಾದ್ಯಂತ ತೆರೆಗೆ ಅಪ್ಪಳಿಸಿದೆ. ಮೊದಲ ಶೋ ಬೆಳಗ್ಗೆ 6 ಗಂಟೆಗೆ ಆರಂಭವಾಗಿದ್ದು, ಸುದೀಪ್​ ಅವರನ್ನು ಮತ್ತೊಮ್ಮೆ ಮಾಸ್​ ಅವತಾರದಲ್ಲಿ​ ಕಂಡ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್​ ಬರುತ್ತಿದೆ. ಇದರ ನಡುವೆ ಎಕ್ಸ್​ನಲ್ಲಿ ಮಾರ್ಕ್​ ಸಿನಿಮಾ ಹಾಗೂ ಸುದೀಪ್​ ವಿರುದ್ಧ ನೆಗೆಟಿವ್​ ಟ್ರೆಂಡ್​ ನಡೆಯುತ್ತಿದೆ. 
#SaveProducersFromSudeep ಎಂಬ ಹ್ಯಾಶ್​ಟ್ಯಾಗ್​ ಅಡಿಯಲ್ಲಿ ಮಾರ್ಕ್​ ಸಿನಿಮಾದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಖಾಲಿ ಥಿಯೇಟರ್​ಗಳನ್ನು ಎಡಿಟ್​ ಮಾಡಿ ಮಾರ್ಕ್​ ಸಿನಿಮಾಗೆ ಜನರು ಯಾರೂ ಬರುತ್ತಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಅಲ್ಲದೆ, ಬೇರೆ ಸಿನಿಮಾಗಳಿಗೆ ಜನರು ನೀಡಿದ ರಿವ್ಯೂಗಳನ್ನು ಮಾರ್ಕ್​ ಸಿನಿಮಾಗೆ ನೀಡಿದ್ದಾರೆ ಎನ್ನುವಂತೆ ಎಡಿಟ್​ ಮಾಡಿ #SaveProducersFromSudeep ಹ್ಯಾಶ್​ಟ್ಯಾಗ್​ ಅಡಿಯಲ್ಲಿ ಹರಿಬಿಡುತ್ತಿದ್ದಾರೆ.
ಇನ್ನು ಕೆಲವರು ನ್ಯೂಸ್​ ಚಾನೆಲ್​ಗಳ ಲೋಗೋವನ್ನು ದುರ್ಬಳಕೆ ಮಾಡಿಕೊಂಡು ಬೇರೆ ಸಿನಿಮಾಗಳಿಗೆ ನೀಡಿದ ಕೆಟ್ಟ ರಿವ್ಯೂಗಳನ್ನು ಹರಿಬಿಡುತ್ತಿದ್ದಾರೆ. ಸುದೀಪ್​ ಅವರ ನಿರ್ಮಾಪಕ ಹಿಮಾಲಯಕ್ಕೆ ಹೋಗುವುದು ಗ್ಯಾರಂಟಿ, ಸುದೀಪ್​ ಅವರಿಂದ ನಿರ್ಮಾಪಕರನ್ನು ಕಾಪಾಡಿ ಎಂದೆಲ್ಲ ಕಾಮೆಂಟ್​ಗಳನ್ನು ಮಾಡುವ ಮೂಲಕ ಮಾರ್ಕ್​ ಸಿನಿಮಾ ವಿರುದ್ಧ ನೆಗೆಟಿವ್​ ಟ್ರೆಂಡ್​ ಮಾಡುತ್ತಿದ್ದಾರೆ. 
ಸದ್ಯ ಎಕ್ಸ್​ನಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದರೆ ಸುದೀಪ್​ ಅವರು ಹುಬ್ಬಳ್ಳಿಯಲ್ಲಿ ನಡೆದ ಪ್ರೀರಿಲೀಸ್​ ಈವೆಂಟ್​ ವೇಳೆ ಹೇಳಿದ ಮಾತುಗಳು ನೆನೆಪಿಗೆ ಬರುತ್ತಿದೆ. ಡಿ.25ಕ್ಕೆ ಒಂದು ಸಿನಿಮಾ (ಮಾರ್ಕ್​) ಬಿಡುಗಡೆಯಾಗುತ್ತದೆ. ಅದೇ ಸಮಯದಲ್ಲಿ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ ಎಂದಿದ್ದರು. ಬಹುಶಃ ಮಾರ್ಕ್​ ಸಿನಿಮಾ ವಿರುದ್ಧ ನೆಗೆಟಿವ್​ ಟ್ರೆಂಡ್​ ಮಾಡಲೆಂದೇ ಒಂದು ಪಡೆ ಕಾರ್ಯನಿರತವಾಗಿದೆ ಅನ್ನೋದು ಈ ಬೆಳವಣಿಗೆಯಿಂದ ಗೊತ್ತಾಗುತ್ತಿದೆ.
ಆದರೆ, ಮಾರ್ಕ್​ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡಿದವರು ಟ್ವಿಟರ್​ನಲ್ಲಿ ತಮ್ಮ ವಿಮರ್ಶೆಗಳನ್ನು ಬರೆದುಕೊಂಡಿದ್ದು, ಉತ್ತಮ ಮನರಂಜನಾ ಸಿನಿಮಾ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಕೂಡ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇದರ ನಡುವೆ ಕೆಲವರು ನೆಗೆಟಿವ್​ ಟ್ರೆಂಡ್​ ಶುರು ಮಾಡಿರುವುದನ್ನು ನೋಡಿದರೆ, ಕಾಣದ ಕೈಗಳ ಕೈವಾಡ ಇದರಲ್ಲಿದೆ ಎಂಬ ಅನುಮಾನ ಹೊಗೆಯಾಡತೊಡಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net