ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರ ಆರಂಭಿಸಿರುವ ಚಿತ್ರತಂಡ "ಲೈಫು ಯಾಕೋ ಖಾಲಿ ಖಾಲಿ' ಎಂಬ ಹಾಡು ರಿಲೀಸ್ ಮಾಡಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ರಚಿಸಿದ್ದು, ಆಕಾಶ್ ಪರ್ವ ಸಂಗೀತ ನೀಡಿದ್ದಾರೆ. ಸಿದ್ದಾರ್ಥ ಬೆಳ್ಮಣ್ಣು ಧ್ವನಿಯಾಗಿದ್ದು, ರಘು ಆರ್.ಜೆ. ನೃತ್ಯ ನಿರ್ದೇಶನದಲ್ಲಿ ನಟ ಸಿದ್ದು ಮೂಲಿಮನಿ ಹಾಗೂ ರಘು ರಾಮನಕೊಪ್ಪ ಕುಣಿದು ಕುಪ್ಪಳಿಸಿದ್ದಾರೆ. ನಿರ್ದೇಶಕ ಚೇತನ್, "ವ್ಲಾಗರ್ ಕುರಿತು ಎಲ್ಲವೂ ಕಥೆಯಾಗಿ ಹೇಳುವುದಕ್ಕೆ ಆಗುವುದಿಲ್ಲ. ಹಾಗಾಗಿ, ಅದನ್ನು ಹಾಡಿನ ಮೂಲಕ ಇಲ್ಲಿ ನಿರೂಪಿಸಿದ್ದೇವೆ. ಸದ್ಯದಲ್ಲೇ ಟ್ರೇಲರ್ ರಿಲೀಸ್ ಮಾಡಿ, ಸಿನಿಮಾ ಬಿಡುಗಡೆ ದಿನಾಂಕ ಅನೌನ್ಸ್ ಮಾಡಲಿದ್ದೇವೆ' ಎಂದು ಮಾಹಿತಿ ಹಂಚಿಕೊಂಡರು.