ರಾಷ್ಟ್ರಪ್ರಶಸ್ತಿ ವಿಜೇತ ಸುಮಂತ್​ ಭಟ್​ ನಿರ್ದೇಶನದ ಹಾರರ್​ ಕಾಮಿಡಿಯಲ್ಲಿ ಶೈನ್​ ಶೆಟ್ಟಿ- Shankarabharana

"ಮಿಥ್ಯ' ಚಿತ್ರದ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್​ ಭಟ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ ಸಿನಿಮಾ "ಶಂಕರಾಭರಣ'. ಮೊದಲ ಬಾರಿಗೆ ಔಟ್​ ಆ್ಯಂಟ್​ ಔಟ್​ ಕಮರ್ಷಿಯಲ್​ ಸಿನಿಮಾ ನಿರ್ದೇಶಿಸಿರುವ ಕಾರಣ ಈ ಚಿತ್ರದ ಬಗ್ಗೆ ಮೊದಲಿನಿಂದಲೂ ಕುತೂಹಲವಿತ್ತು. ಹಾಗೇ ಇದೊಂದು ಹಾರರ್​ ಕಾಮಿಡಿ ಚಿತ್ರವಾಗಿದ್ದು, ನಾಯಕ ನಟ ಶೈನ್​ ಶೆಟ್ಟಿ ಬಸ್​ ಚಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶಂಕರಾಭರಣ ಪೋಸ್ಟರ್
ಶಂಕರಾಭರಣ ಪೋಸ್ಟರ್
Published on: 

ಬೆಂಗಳೂರು:

"ಮಿಥ್ಯ' ಚಿತ್ರದ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್​ ಭಟ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ ಸಿನಿಮಾ "ಶಂಕರಾಭರಣ'. ಮೊದಲ ಬಾರಿಗೆ ಔಟ್​ ಆ್ಯಂಟ್​ ಔಟ್​ ಕಮರ್ಷಿಯಲ್​ ಸಿನಿಮಾ ನಿರ್ದೇಶಿಸಿರುವ ಕಾರಣ ಈ ಚಿತ್ರದ ಬಗ್ಗೆ ಮೊದಲಿನಿಂದಲೂ ಕುತೂಹಲವಿತ್ತು. ಹಾಗೇ ಇದೊಂದು ಹಾರರ್​ ಕಾಮಿಡಿ ಚಿತ್ರವಾಗಿದ್ದು, ನಾಯಕ ನಟ ಶೈನ್​ ಶೆಟ್ಟಿ ಬಸ್​ ಚಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಸುಮಂತ್​ ಭಟ್​ ಅವರ "ಏಕಂ' ಎಂಬ ವೆಬ್​ಸರಣಿಯಲ್ಲಿ ನಟಿಸಿದ್ದೆ. ಅದರಲ್ಲಿ ಬಸ್​ನ ಒಂದು ಸೀಕ್ವೆನ್ಸ್​ ಇದೆ. ಆಗ ಬಸ್​ ಸುತ್ತ ಸಿನಿಮಾ ಮಾಡುವ ಐಡಿಯಾ ಬಂತು. ಹಾಗೇ "ಡಕೋಟಾ ಎಕ್ಸ್​ಪ್ರೆಸ್​' ಬಳಿಕ ಬಸ್​ನಲ್ಲಿ ನಡೆಯುವ ಕಥೆ ಬಂದಿಲ್ಲ. ಜತೆಗೆ ನಮ್ಮೂರುಗಳಿಗೆ ಬರುತ್ತಿದ್ದ ಬಸ್​ಗಳ ಡೆವರ್​, ಕಂಡಕ್ಟರ್​ಗಳೇ ಸ್ಟೆ$ಲಿಶ್​ ಆಗಿರುತ್ತಿದ್ದರೆ. ಅವರೇ ನಮಗೆ ಹೀರೋಗಳಂತೆ ಕಾಣುತ್ತಿದ್ದರು. ಅಂತಹ ಒಬ್ಬ ಚಾಲಕನ ಪಾತ್ರ ನನ್ನದು' ಎಂದು ಹೇಳಿಕೊಳ್ಳುತ್ತಾರೆ ಶೈನ್​ ಶೆಟ್ಟಿ. ಚಿತ್ರದ ಕಥೆ ಹಾಗೂ ನಿರ್ಮಾಣದ ಜವಾಬ್ದಾರಿಯನ್ನೂ ಖುದ್ದು ಶೈನ್​ ಹೊತ್ತಿದ್ದಾರೆ. ಇತ್ತೀಚೆಗಷ್ಟೆ ಟ್ರೇಲರ್​ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ. ಚಿತ್ರದಲ್ಲಿ ಪಾತ್ರಗಳಷ್ಟೇ ಬಸ್​ಗೂ ಪ್ರಾಮುಖ್ಯ ನೀಡಿರುವುದು ವಿಶೇಷ. ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಖಾಸಗಿ ಬಸ್​ಗಳೇ ಈಗಲೂ ಸಂಪರ್ಕ ಸೇತುವೆಗಳಾಗಿವೆ. ಸಾಲ ಸೋಲ ಮಾಡಿ ಬಸ್​ ಖರೀದಿಸುವ ಚಾಲಕ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ? ಹಾಗೂ ಕೆಲ ರಸ್ತೆಗಳಿಗೆ ಬೆಸೆದುಕೊಂಡಿರುವ ದೆವ್ವದ ಕಥೆಗಳ ಸುತ್ತ ಸಿನಿಮಾ ಸಾಗುತ್ತದೆ. "ಅಂಬಿಲಿ', "2018' ಸೇರಿ ಹಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಬೆಂಗಳೂರಿನ ಹುಡುಗಿ ತನ್ವಿ ರಾಮ್​, "ಶಂಕರಾಭರಣ' ಹತ್ತಿ ಶೈನ್​ಗೆ ಜೋಡಿಯಾಗಿ, ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಬಹುಭಾಷಾ ನಟ ಸಂಪತ್​ ಕುಮಾರ್​ ವಿಲನ್​ ಆಗಿದ್ದು, ಕೃತಿ ಶೆಟ್ಟಿ, ಅನಿಲ್​ ಕುಮಾರ್​, ದೀಪಕ್​ ರೈ ಪಾಣಾಜೆ, ಮೈಮ್​ ರಾಮದಾಸ್​ ತಾರಾಗಣದಲ್ಲಿದ್ದಾರೆ. ಸಿನಿಮಾ ಇದೇ 20ರಂದು ರಿಲೀಸ್​ ಆಗಲಿದೆ.

ಶಂಕರಾಭರಣ ಪೋಸ್ಟರ್
ಶಂಕರಾಭರಣ ಪೋಸ್ಟರ್

ಖಾಸಗಿ ಬಸ್​ಗಳು ಮಲೆನಾಡು, ಕರಾವಳಿಯ ಪ್ರದೇಶಗಳ ಜನರ ಜೀವನದ ಭಾಗವಾಗಿವೆ. ಹೀಗಾಗಿಯೇ ಬಸ್​ಗಳನ್ನೂ ಅವುಗಳ ಹೆಸರಿನಲ್ಲಿ ವ್ಯಕ್ತಿಗಳಂತೆಯೇ ಕರೆಯುತ್ತಾರೆ. ಅಂತಹ "ಶಂಕರಾಭರಣ' ಎಂಬ ಬಸ್​ ಮತ್ತದರ ಚಾಲಕನ ಸುತ್ತ ಸಾಗುವ ಕಥೆಯಿದು. 62 ದಿನ, ಬಹುತೇಕ ರಾತ್ರಿ ಸಮಯದಲ್ಲಿ ಚಿತ್ರೀಕರಣ ಮಾಡಿದ್ದೇವೆ. ನಮ್ಮ ಕಥೆಗಳನ್ನು ನಮಗೆ ಹೇಗೆ ಅನ್ನಿಸುತ್ತದೋ ಹಾಗೇ ಹೇಳಬೇಕು ಅಂತ "ರಂಗಸ್ಥಳ ಸ್ಟುಡಿಯೋಸ್​' ಬ್ಯಾನರ್​ನಲ್ಲಿ ಈ ಕಥೆಯನ್ನು ನಿರ್ಮಿಸಿದ್ದೇನೆ.

- ಶೈನ್​ ಶೆಟ್ಟಿ, ನಾಯಕ

ನಾಯಕ ಶೈನ್ ಶೆಟ್ಟಿ
ನಾಯಕ ಶೈನ್ ಶೆಟ್ಟಿ