‘ಅಜ್ಞಾತವಾಸಿ’, ‘ಲವ್ ಯು ಮುದ್ದು’ ಚಿತ್ರಗಳಿಗೆ ಸಿಕ್ಕ ಉತ್ತಮ ಪ್ರತಿಕ್ರಿಯೆ ಬಳಿಕ ಸಿದ್ದು ಮೂಲಿಮನಿ ಅವಕಾಶ ಹೆಚ್ಚುತ್ತಿವೆ. ಹಾಗೆಯೇ ಅವರ ನಟನೆಯ ಕನ್ನಡದ ‘ಗೊಂಬೆ ರಾಮ’, ‘ಉಗ್ರಾಣ’, ‘ಊರಬ್ಬ’ ಸೇರಿ ತಮಿಳಿನ ಡೆಬ್ಯೂ ಚಿತ್ರ ‘ಕೋಲ್ಡ್ ಕಾಲ್’ ರಿಲೀಸ್‌ಗೆ ಸಿದ್ಧವಾಗಿವೆ. ಜತೆಗೆ ಎರಡು ಪ್ರಾಜೆಕ್ಟ್‌ಗಳಿಗೆ ಸಿದ್ದು ಮೂಲಿಮನಿ ಸಹಿ ಮಾಡಿದ್ದು, ಒಂದು ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭಿಸಿದ್ದಾರೆ.