ಬಂಗಾರದ ಹಬ್ಬ ‘ಅಕ್ಷಯ ತೃತೀಯಾ’ಗೆ ಕ್ಷಣಗಣನೆ ಆರಂಭವಾಗಿದೆ. ಒಡವೆ ಖರೀದಿಸಲು ಈ ದಿನ ಶುಭ. ಹೀಗಾಗಿಯೇ ಅಕ್ಷಯ ತೃತೀಯಾ ಸೀಯರಿಗೆ ಸಂಭ್ರಮದ ಹಬ್ಬ. ಅಂದು ಒಂದು ಗ್ರಾಂ ಚಿನ್ನವನ್ನಾದರೂ ಖರೀದಿಸಬೇಕು ಎಂಬುದು ಹಂಬಲ. ಇನ್ನು, ಕೆಲಸದ ಒತ್ತಡದ ನಡುವೆಯೂ ಸ್ಯಾಂಡಲ್‌ವುಡ್ ನಟಿಯರಾದ ಚೈತ್ರಾ ಹಳ್ಳಿಕೇರಿ, ಭಾವನಾ ರೆಡ್ಡಿ, ಐಶ್ವರ್ಯಾ ಪಿಸ್ಸೆ ಅಕ್ಷಯ ತೃತೀಯಾ ಹಬ್ಬದ ಉತ್ಸಾಹದಲ್ಲಿದ್ದು, ಆಚರಣೆಯ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.