ಸ್ಯಾಂಡಲ್‌ವುಡ್ ದೀಪಿಕೆಯರ ದೀಪೋತ್ಸವ : ಬೆಳಕಿನ ಹಬ್ಬದ ಸಂಭ್ರಮದಲ್ಲಿ ಚಂದನವನದ ಚೆಲುವೆಯರು

ದೀಪಾವಳಿ ಹಬ್ಬವು ಬೆಳಕಿನ ಮೂಲಕ ಭರವಸೆ ಮೂಡಿಸುತ್ತದೆ. ಹೊಸ ಯೋಚನೆ, ಯೋಜನೆಗಳನ್ನು ಆರಂಭಿಸಲು ಇದು ಶುಭ ಘಳಿಗೆ. ಕಳೆದ ಎರಡು ದಿನಗಳಿಂದ ಎಲ್ಲೆಡೆ ಹಬ್ಬವನ್ನು ಸಂಭ್ರಮಿಸಲಾಗುತ್ತಿದೆ. ಇನ್ನು ಇಂದು ಬಲಿ ಪಾಡ್ಯಮಿ. ಹಬ್ಬ ಇನ್ನಷ್ಟು ಜೋರು. ನಟಿಯರಾದ ಸಾರಿಕಾ, ಸಾತ್ವಿಕಾ ಮತ್ತು ತನ್ವಿ ರಾವ್ ಹಬ್ಬದ ಆಚರಣೆ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ದೀಪಿಕೆಯರ ದೀಪೋತ್ಸವ : ಬೆಳಕಿನ ಹಬ್ಬದ ಸಂಭ್ರಮದಲ್ಲಿ ಚಂದನವನದ ಚೆಲುವೆಯರು
Published on: 
ದೀಪಾವಳಿ ಹಬ್ಬವು ಬೆಳಕಿನ ಮೂಲಕ ಭರವಸೆ ಮೂಡಿಸುತ್ತದೆ. ಹೊಸ ಯೋಚನೆ, ಯೋಜನೆಗಳನ್ನು ಆರಂಭಿಸಲು ಇದು ಶುಭ ಘಳಿಗೆ. ಕಳೆದ ಎರಡು ದಿನಗಳಿಂದ ಎಲ್ಲೆಡೆ ಹಬ್ಬವನ್ನು ಸಂಭ್ರಮಿಸಲಾಗುತ್ತಿದೆ. ಇನ್ನು ಇಂದು ಬಲಿ ಪಾಡ್ಯಮಿ. ಹಬ್ಬ ಇನ್ನಷ್ಟು ಜೋರು. ನಟಿಯರಾದ ಸಾರಿಕಾ, ಸಾತ್ವಿಕಾ ಮತ್ತು ತನ್ವಿ ರಾವ್ ಹಬ್ಬದ ಆಚರಣೆ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.

ಅರ್ಥಪೂರ್ಣ ಆಚರಣೆ

ಈ ಬಾರಿ ಮೈಸೂರಿನಲ್ಲಿ ಹಬ್ಬ ಆಚರಿಸುತ್ತಿದ್ದೇವೆ. ನಾವು ಮೂಲತಃ ಉಡುಪಿಯವರಾದ ಕಾರಣ ಕರಾವಳಿ ಸಂಪ್ರದಾಯದಂತೆ ದೀಪಾವಳಿ ಆಚರಿಸುತ್ತೇವೆ. ಮನೆಯಲ್ಲಿ ಸರಳವಾಗಿ ಲಕ್ಷ್ಮೀ ಪೂಜೆ ಮಾಡಿ, ದೀಪ ಇಟ್ಟು ಅದರ ಪಂಚಕಜ್ಜಾಯವನ್ನು ನೈವೇದ್ಯವಾಗಿ ಅರ್ಪಿಸುತ್ತೇವೆ. ಈ ಸಮಯದಲ್ಲಿ ಎಲೆ ಹೆಚ್ಚು ಸಿಗುವುದರಿಂದ ಪತ್ರೊಡೆ ಜತೆಗೆ ಅರಿಶಿಣ ದೋಸೆ ಹೆಚ್ಚು ತಯಾರಿಸುತ್ತೇವೆ. ದೀಪಾವಳಿ ಹಬ್ಬ ಬೆಳಕಿನ ಸಂಕೇತ. ಆಚರಣೆ ಶಾಂತಿಯಾಗಿದ್ದರೆ ಅದಕ್ಕೆ ಅರ್ಥ ಹೆಚ್ಚು. ಪ್ರಾಣಿಗಳನ್ನು ಗಮನದಲ್ಲಿಟ್ಟುಕೊಂಡು ಪಟಾಕಿ ಸಿಡಿಸೋಣ. ಪಟಾಕಿ ಸದ್ದಿಗೆ ಬೀದಿ ಪ್ರಾಣಿಗಳು ಬೆದರುವುದು ಹೆಚ್ಚು. ಅದಕ್ಕಾಗಿ ನಮ್ಮ ಮನೆಯಲ್ಲಿ ಬೀದಿ ಪ್ರಾಣಿಗಳ ವಾಸಕ್ಕೆ ಅವಕಾಶ ಮಾಡಿಕೊಡುತ್ತೇವೆ. ಸ್ವೀಟ್ಸ್ ಆರ್ಡರ್ ಮಾಡಿ, ಅದನ್ನು ತರುವ ಡೆಲಿವರಿ ಬಾಯ್‌ಗಳಿಗೆ ಹಬ್ಬದ ಉಡುಗೊರೆ ನೀಡುವ ಸಂಪ್ರದಾಯ ಇಟ್ಟುಕೊಂಡಿದ್ದೇನೆ. ಈ ಬಾರಿ ಅದೇ ರೀತಿ ಮಾಡಿದೆ. ಕನ್ನಡದ ‘ಐರಾ’, ‘ಬರ್ಮಾ’ ಮತ್ತು ತೆಲುಗಿನ ‘ದ ಟ್ರೇನ್’ ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಅದರ ಜತೆಗೆ ಮತ್ತೊಂದು ಸಿನಿಮಾದ ಮಾತುಕತೆ ನಡೆಯುತ್ತಿದೆ.

| ಸಾರಿಕಾ, ನಟಿ

ಹಬ್ಬದ ಖುಷಿ, ಡಬಲ್ ಧಮಾಕಾ

ನಮ್ಮದು ಮಂಗಳೂರು. ಊರಿನಲ್ಲಿ ಹಬ್ಬದ ಆಚರಣೆ ಜೋರಾಗಿರುತ್ತದೆ. ಆದರೆ, ನಾನೀಗ ಬೆಂಗಳೂರಿನಲ್ಲಿಯೇ ಇರುವುದರಿಂದ ಮಹಾನಗರದಲ್ಲಿಯೇ ಹಬ್ಬ ಆಚರಿಸುತ್ತೇನೆ. ಬೆಳಗ್ಗೆ ಎಣ್ಣೆ ಸ್ನಾನ ಮಾಡಿ, ದೇವರ ಮುಂದೆ ದೀಪ ಹಚ್ಚುತ್ತೇನೆ. ಸದ್ಯ ‘ಭಾವಾಂತರ’ ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿದ್ದೇನೆ. ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ತಿಂಗಳು ನನ್ನ ಇನ್ನೊಂದು ಸಿನಿಮಾ ‘ಶಂಕರಾಭರಣ’ ರಿಲೀಸ್ ಆಗುತ್ತಿದೆ. ಹೀಗಾಗಿ, ದೀಪಾವಳಿ ಹಬ್ಬ ನನಗೆ ಡಬಲ್ ಧಮಾಕಾ. ಜೀವನದಲ್ಲಿ ಬರುವ ಎಲ್ಲ ಕಷ್ಟಗಳನ್ನು ಮರೆತು ಹೊಸದಾಗಿ ಆರಂಭಿಸಲು ಈ ಹಬ್ಬ ಸಹಕಾರಿ.

| ತನ್ವಿ ರಾವ್, ನಟಿ

ನೆಚ್ಚಿನ ಹಬ್ಬ ದೀಪಾವಳಿ

ಹಬ್ಬಗಳಲ್ಲಿ ನನಗೆ ಫೇವರಿಟ್ ದೀಪಾವಳಿ. ಮೂರು ದಿನಾನೂ ಹೊಸ ಬಟ್ಟೆ ಧರಿಸಿ ದೇವರಿಗೆ ಪೂಜೆ ಮಾಡಿ, ಪಟಾಕಿ ಸಿಡಿಸುತ್ತೇವೆ. ಈ ಹಬ್ಬ ನಮಗೆ ಒಂದು ರೀತಿಯಲ್ಲಿ ಹೊಸ ವರ್ಷದಂತೆ. ಇಡೀ ಮನೆಗೆ ಪೇಂಟಿಂಗ್ ಮಾಡಿ, ತಳಿರು-ತೋರಣಗಳಿಂದ ಶೃಂಗರಿಸುತ್ತೇವೆ. ಹಬ್ಬದ ಸಮಯದಲ್ಲಿ ಗೆಳೆಯರಿಂದ ಉಡುಗೊರೆ ವಿನಿಮಯ ಮಾಡಿಕೊಳ್ಳುತ್ತೇವೆ. ಈ ಬಾರಿ ನನಗೆ ಅನೇಕ ವಿಶೇಷ ಗ್‌ಟಿಗಳು ಬಂದಿವೆ. ಸದ್ಯ ನನ್ನ ಕೈಯಲ್ಲಿ ಎರಡು ಚಿತ್ರಗಳಿದ್ದು, ಟೈಟಲ್ ರಿವೀಲ್ ಮಾಡಿಲ್ಲ. ಒಂದು ಚಿತ್ರದ ಶೂಟಿಂಗ್ ಈಗಾಗಲೇ ಅರ್ಧ ಮುಗಿದಿದ್ದು, ಇನ್ನೊಂದರ ಚಿತ್ರೀಕರಣ ಆರಂಭವಾಗಬೇಕಿದೆ. ದೀಪಾವಳಿ ಎಂದರೆ ಬೆಳಕಿನ ಹಬ್ಬ. ಜೀವನದಲ್ಲಿ ಬೆಳಕು ಹುಡುಕುವುದಾಗಿದೆ. ಒಳ್ಳೆಯದಕ್ಕೆ ಜಯ ಇದೆ ಎಂಬುದನ್ನು ಹಬ್ಬ ಸಾರುತ್ತದೆ.

| ಸಾತ್ವಿಕಾ, ನಟಿ