ಡಬಲ್ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ನಟರು! : ಮುಂದಿನ ವರ್ಷಕ್ಕೆ ಎರಡು ಸಿನಿಮಾಗಳು ತೆರೆ ಮೇಲೆ ಸಿದ್ಧರಾದ ಕಲಾವಿದರು

ಟಾಕ್ಸಿಕ್​, ಉಗ್ರಾಯುಧಮ್​, ಕೆಡಿ ಪೋಸ್ಟರ್​
ಟಾಕ್ಸಿಕ್​, ಉಗ್ರಾಯುಧಮ್​, ಕೆಡಿ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಈ ವರ್ಷ ಒಬ್ಬ ನಟರ ಎರಡು ಸಿನಿಮಾಗಳು ರಿಲೀಸ್ ಗೆ ತಯಾರಿ
  • ಯಶ್, ಶ್ರೀಮುರಳಿ, ಧ್ರುವರಿಂದ ಡಬಲ್ ಕೊಡುಗೆ
  • ಈ ವರ್ಷದಲ್ಲಿ ಸ್ಟಾರ್ ನಟರ ಸಿನಿಮಾಗಳ ಜಾತ್ರೆ

2025ರವರ್ಷ ಕನ್ನಡ ಚಿತ್ರರಂಗಕ್ಕೆಸ್ವಲ್ಪ ಮಟ್ಟಿಗೆ ಆಶಾದಾಯಕವಾಗಿತ್ತು.ಮೊದಲರ್ಧಖ್ಯಾತ ನಟರ ಯಾವುದೇ ಸಿನಿಮಾಗಳುರಿಲೀಸ್ ಆಗಲಿಲ್ಲವಾದರೂ,ದ್ವಿತೀಯಾರ್ಧದಲ್ಲಿಶಿವರಾಜಕುಮಾರ್,ದರ್ಶನ್,ಸುದೀಪ್,ಉಪೇಂದ್ರ,ರಿಷಬ್ಶೆಟ್ಟಿ ಸೇರಿ ಬೆರಳಣಿಕೆಯಷ್ಟುಕಲಾವಿದರು ತೆರೆ ಮೇಲೆ ಮಿಂಚಿದರು.ಆದರೆ,ಇವರುಹೊರತುಪಡಿಸಿ ಇನ್ನು ಹಲವರು ಈಬಾರಿ ತೆರೆ ಮೇಲೆ ಕಾಣಿಸಿಕೊಳ್ಳಲಿಲ್ಲ.ಆಗಂಥ,ಅವರುಸುಮ್ಮನೇ ಕುಳಿತಿಲ್ಲ.2026ಕ್ಕೆಎರಡು ಸಿನಿಮಾಗಳು ರಿಲೀಸ್ ಮಾಡುವತಯಾರಿಯಲ್ಲಿದ್ದು,ಅದಕ್ಕಾಗಿನಿರಂತರ ಶೂಟಿಂಗ್‌ನಲ್ಲಿದ್ದಾರೆ.ಮುಂದಿನವರ್ಷಕ್ಕೆ ಅಭಿಮಾನಿಗಳಿಗೆ ಡಬಲ್ಖುಷಿ ನೀಡಲು ಸಿದ್ಧರಾಗುತ್ತಿದ್ದಾರೆ.

‘ಯಶ’ಸ್ಸಿನದ್ವಿಗುಣ

ನಟಯಶ್ ‘ಕೆಜಿಎಫ್’ಸರಣಿ ಬಳಿಕ ಮತ್ತೇ ತೆರೆ ಮೇಲೆಕಾಣಿಸಿಕೊಂಡಿಲ್ಲ.ಸದ್ಯಅವರು ಪ್ಯಾನ್ ವರ್ಲ್ಡ್ ‘ಟಾಕ್ಸಿಕ್’ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ.ಈಸಿನಿಮಾ ಇದೇ ಮಾ.19ಕ್ಕೆ ರಿಲೀಸ್ ಆಗಲಿದೆ.ಈಚಿತ್ರದ ಮೂಲಕ ತುಂಬಾ ದಿನಗಳ ಬಳಿಕಯಶ್ ತೆರೆ ಮೇಲೆ ಮಿಂಚಲಿದ್ದಾರೆ.‘ಟಾಕ್ಸಿಕ್’ಬಳಿಕ ಮುಂದಿನ ದೀಪಾವಳಿಗೆ ಮತ್ತೊಂದುಪ್ಯಾನ್ ವರ್ಲ್ಡ್ ಸಿನಿಮಾ ‘ರಾಮಾಯಣಭಾಗ 1’ಬಿಡುಗಡೆಯಾಗಲಿದೆ.ಈಹಿನ್ನೆಲೆಯಲ್ಲಿ ಯಶ್ ಅಭಿಮಾನಿಗಳಿಗೆ2026ಡಬಲ್ಧಮಾಕಾದ ವರ್ಷ.

ಶ್ರೀಮುರಳಿಯಎರಡು ಸಿನಿಮಾಗಳು

ಕಳೆದವರ್ಷ ‘ಬಘೀರ’ದ ಮೂಲಕ ಕಾಣಿಸಿಕೊಂಡಿದ್ದನಟ ಶ್ರೀಮುರಳಿ ಈ ವರ್ಷ ತೆರೆ ಮೇಲೆಬರಲಿಲ್ಲ.ಸದ್ಯಅವರು ‘ಉಗ್ರಾಯುಧಮ್’ ಹಾಗೂ‘ಪರಾಕ್’ ಎರಡು ಸಿನಿಮಾಗಳಲ್ಲಿಒಟ್ಟಿಗೆ ನಟಿಸುತ್ತಿದ್ದು,ಮುಂದಿನವರ್ಷಕ್ಕೆ ಈ ಎರಡು ಸಿನಿಮಾಗಳುತೆರೆ ಮೇಲೆ ತರಬೇಕು ಎಂಬನಿರೀಕ್ಷೆಯಲ್ಲಿದ್ದಾರೆ.ಅದಕ್ಕಾಗಿಅವರು ನಿರಂತರ ಶೂಟಿಂಗ್‌ನಲ್ಲಿತೊಡಗಿಕೊಂಡಿದ್ದಾರೆ.

ನಟಧ್ರುವ ಸರ್ಜಾ ಮುಂದಿನ ವರ್ಷ ಎರಡುಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈಗಾಗಲೇಶೂಟಿಂಗ್ ಪೂರ್ಣಗೊಳಿಸಿರುವಪ್ರೇಮ್ ನಿರ್ದೇಶನದ ‘ಕೆಡಿ’ಚಿತ್ರವು ಏ.30ಕ್ಕೆರಿಲೀಸ್ ಆಗಲಿದೆ.ಈಮಧ್ಯೆ,ಧುವಸರ್ಜಾ ‘ಕ್ರಿಮಿನಲ್’ ಚಿತ್ರಘೋಷಿಸಿದ್ದಾರೆ.ಎಷ್ಟೇಕಷ್ಟವಾದರೂ ಮುಂದಿನ ವರ್ಷಕ್ಕೆ‘ಕ್ರಿಮಿನಲ್’ ರಿಲೀಸ್ ಮಾಡಲೇಬೇಕೆಂದುಧ್ರುವ ಸರ್ಜಾ ಒಂದೇ ಹಂತದಲ್ಲಿಈ ಚಿತ್ರದ ಶೂಟಿಂಗ್ ಪೂರ್ಣಗೊಳಿಸಲುಮುಂದಾಗಿದ್ದಾರೆ.ಮೊದಲರ್ಧದಲ್ಲಿ‘ಕೆಡಿ’ ಬಂದರೆ,ದ್ವಿತೀಯಾರ್ಧದಲ್ಲಿಧ್ರುವ ಸರ್ಜಾ ಅಭಿಮಾನಿಗಳು‘ಕ್ರಿಮಿನಲ್’ ನಿರೀಕ್ಷಿಸಬಹುದು.

ಗಣೇಶನಡಬಲ್ ಸಂಭ್ರಮ

‘ಕೃಷ್ಣಂಪ್ರಣಯ ಸಖಿ’ ಬಳಿಕ ನಟ ಗಣೇಶ್ನಾಲ್ಕು ಚಿತ್ರಗಳನ್ನು ಘೋಷಿಸಿದ್ದರೂಈ ವರ್ಷ ಯಾವುದು ತೆರೆ ಕಾಣಲಿಲ್ಲ.ಸದ್ಯಅವರು ನಿರಂತರ ಶೂಟಿಂಗ್‌ನಲ್ಲಿದ್ದು,ಮುಂದಿನವರ್ಷಕ್ಕೆ ರಮೇಶ್ ಅರವಿಂದ್ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ‘ಯುವರ್ಸ್ ಸಿನ್ಸಿಯರ್ಲಿ ರಾಮ್’ಹಾಗೂ ಶ್ರೀನಿವಾಸರಾಜು ಕಾಂಬಿನೇಷನ್‌ನಇನ್ನು ಹೆಸರಿಡದ ಚಿತ್ರವನ್ನುತೆರೆ ಮೇಲೆ ತರುವ ಸಾಧ್ಯತೆಹೆಚ್ಚಿದೆ.ಈಹಿನ್ನೆಲೆಯಲ್ಲಿ ಮುಂದಿನ ವರ್ಷಗಣೇಶ್ ಅಭಿಮಾನಿಗಳಿಗೆ ಡಬಲ್ಸಂಭ್ರಮದ ಖುಷಿ.ಇನ್ನು‘ಪಿನಾಕ’ 2026ಕ್ಕೆಶೂಟಿಂಗ್ ಪೂರ್ಣಗೊಳಿಸಿದರೂ,ಪೋಸ್ಟ್-ಪ್ರೊಡಕ್ಷನ್ವಿಳಂಬವಾಗುವ ಕಾರಣ ಮುಂದಿನವರ್ಷಕ್ಕೆ ಬರುವುದು ಕಷ್ಟಎನ್ನಲಾಗುತ್ತಿದೆ.ಇನ್ನುನಟ ರಮೇಶ್ ಅರವಿಂದ್ ‘ಯುವರ್ಸ್ಸಿನ್ಸಿಯರ್ಲಿ ರಾಮ್’ ಜತೆಗೆ‘ದೈಜಿ’ ಮೂಲಕ ತೆರೆ ಮೇಲೆಸಿದ್ಧರಾಗುತ್ತಿದ್ದಾರೆ.

ಈವರ್ಷ ಬಂದವರೂ,ಮುಂದಿನವರ್ಷಕ್ಕೂ ಬರುತ್ತಾರೆ!

ಶಿವರಾಜಕುಮಾರ್,ಉಪೇಂದ್ರ,ಸುದೀಪ್ಹಾಗೂ ರಾಜ್ ಬಿ.ಶೆಟ್ಟಿಸೇರಿ ಹಲವರು ಈ ವರ್ಷ ತೆರೆ ಮೇಲೆಬಂದಿದ್ದರು.ಅವರುಕೂಡ ಮುಂದಿನ ವರ್ಷಕ್ಕೆ ಎರಡುಸಿನಿಮಾಗಳು ನೀಡಬೇಕು ಎನ್ನುವತವಕದಲ್ಲಿದ್ದಾರೆ.ಸದ್ಯಶಿವಣ್ಣ ‘ಡ್ಯಾಡ್’ ಶೂಟಿಂಗ್,ಈಚಿತ್ರವನ್ನು ನಿರೀಕ್ಷಿಸಬಹುದು.ಜತೆಗೆಹೇಮಂತ್ ರಾವ್ ನಿರ್ದೇಶನದ ‘666ಆಪರೇಷನ್ಡ್ರೀಮ್ ಥಿಯೇಟರ್’ ತೆರೆ ಮೇಲೆಬರುವ ಸಾಧ್ಯತೆಯಿದೆ.‘ಮಾರ್ಕ್’ಮೂಲಕ ವೇಗವಾಗಿ ಚಿತ್ರೀಕರಣಮುಗಿಸಿ,ತೆರೆಮೇಲೆ ಬಂದಿದ್ದ ಸುದೀಪ್ ಅದೇವೇಗದಲ್ಲಿ 2026ಕ್ಕೆಎರಡು ಸಿನಿಮಾಗಳು ಮುಗಿಸಬೇಕುಎಂದುಕೊಂಡಿದ್ದಾರೆ.ತೆಲುಗುನಿರ್ದೇಶಕ ಸುಕುಮಾರ್ ತಂಡದ ಹೊಸನಿರ್ದೇಶಕನ ರೊಮ್ಯಾಂಟಿಕ್-ಕಾಮಿಡಿಜಾನರ್‌ನ ಚಿತ್ರ ಸೇರಿ ‘ಬಿಲ್ಲಾರಂಗ ಬಾಷಾ’ ತೆರೆ ಮೇಲೆ ತರಬೇಕುಎಂದು ಪಣತೊಟ್ಟಿದ್ದಾರೆ.ಇನ್ನುಉಪೇಂದ್ರ ಅಭಿನಯದ ‘ಭಾರ್ಗವ’,‘ದನೆಕ್ಸ್ಟ್ ಲೆವೆಲ್’ ಹಾಗೂ ದುನಿಯಾವಿಜಯ್ ಅವರ ‘ಲ್ಯಾಂಡ್‌ಲಾರ್ಡ್’,ನೀನಾಸಂಸತೀಶ್‌ರ ‘ದ ರೈಸ್ ಆಫ್ಅಶೋಕ’ ಹಾಗೂ ‘ಅಯೋಗ್ಯ-2’ಸೇರಿಹಲವರ ಬಹುನಿರೀಕ್ಷಿತ ಸಿನಿಮಾಗಳಮೇಲೆ ನಿರೀಕ್ಷೆಯಿಟ್ಟುಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net