ಇನ್ನು ಚಿತ್ರದ ಬಗ್ಗೆ ಮಾತು ಮುಂದುವರಿಸಿದ ರಿಷಬ್, 'ಜೈ ಹನುಮಾನ್' ಹನುಮಂತನ ಕುರಿತಾಗಿ ಮೂಡಿಬರಲಿರುವ ಒಂದು ಸಿನಿಮಾ. ಈ ಚಿತ್ರವನ್ನು ಮಾಡ್ತಿದ್ದೀವಿ ಅಂದ್ರೆ, ಖಂಡಿತ ಒಂದು ಲೆಕ್ಕಾಚಾರ ಇರುತ್ತೆ. ಜನರಿಗೆ ಇಷ್ಟವಾಗುವಂತ ಚಿತ್ರ ಇದಾಗುತ್ತೆ ಅಂತ ಹೇಳಬಹುದು ಎಂದರು. ಇದೇ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಮದುವೆ ವಿಚಾರ ಕೇಳುತ್ತಿದ್ದಂತೆ 'ಥ್ಯಾಂಕ್ಯೂ' ಎಂದ ರಿಷಬ್ ಶೆಟ್ಟಿ, ಪ್ರತಿಕ್ರಿಯಿಸಲು ಇಷ್ಟವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದು ಗಮನಾರ್ಹ.