ಫೋಟೋ ಶೂಟ್ ವೇಳೆ ಮೀನಿಗೆ ಕರೆ ಮಾಡ್ತಿದ್ರಂತೆ ವಿಜಯ್-ರಶ್ಮಿಕಾ! ಆನಂದ್ ಬರ್ತ್‌ಡೇ ವೇಳೆ ಗುಟ್ಟು ರಟ್ಟು ಮಾಡಿದ ನಟಿ.. Rashmika Mandanna

 Rashmika Mandanna (ಚಿತ್ರ Instagram)
Rashmika Mandanna (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ನನ್ನ ಪ್ರೀತಿಯ ಹುಡುಗನಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವನು ಹುಟ್ಟಿದ ದಿನದಿಂದಲೂ ನನ್ನ ಜೊತೆಯಲ್ಲೇ ಇದ್ದಾನೆ
  • ಆನಂದ್ ಅಂತಹ ಸಹೋದರನನ್ನು ಪಡೆದಿರುವುದು ನನ್ನ ಪುಣ್ಯ ಮತ್ತು ನಾನು ನಿಜಕ್ಕೂ ಅದೃಷ್ಟ
  • ನೀನು ಶೂಟಿಂಗ್‌ನಲ್ಲಿ ಬ್ಯುಸಿಯಿದ್ದೀಯಾ, ನಾವು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ
Rashmika Mandanna: ಇತ್ತೀಚಿಗೆ ವಿವಾಹವಾದ ಟಾಲಿವುಡ್​ನ ಸೂಪರ್​ ಜೋಡಿ ವಿಜಯ್​  ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾದಾಗಿನಿಂದನೂ ಒಂದಲ್ಲ ಒಂದು ವಿಷಯಗಳಿಗಾಗಿ ಸುದ್ದಿಯಲ್ಲಿದ್ದಾರೆ. ಆದಾಗ್ಯೂ, ಆನಂದ್​ ದೇವರಕೊಂಡ ಅವರ ಹುಟ್ಟುಹಬ್ಬದಂದು ಈ ಜೋಡಿ ಹಂಚಿಕೊಂಡಿರುವ ಪೋಸ್ಟ್ ಸಧ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​ ಆಗಿವೆ.

ಪೋಸ್ಟ್​​ನಲ್ಲೇನಿದೆ?

ವಿಜಯ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಆನಂದ್​ ಪೋಸ್​ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡು "ನನ್ನ ಪ್ರೀತಿಯ ಹುಡುಗನಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವನು ಹುಟ್ಟಿದ ದಿನದಿಂದಲೂ ನನ್ನ ಜೊತೆಯಲ್ಲೇ ಇದ್ದಾನೆ. ಆನಂದ್  ಅಂತಹ ಸಹೋದರನನ್ನು ಪಡೆದಿರುವುದು ನನ್ನ ಪುಣ್ಯ ಮತ್ತು ನಾನು ನಿಜಕ್ಕೂ ಅದೃಷ್ಟವಂತ ಎಂದು ಭಾವಿಸುತ್ತೇನೆ. ನೀನು ನಮ್ಮೆಲ್ಲರ ನೆಚ್ಚಿನ ಹುಡುಗ; ನೀನು ಸಾಧಿಸುವ ಪ್ರತಿಯೊಂದನ್ನೂ ನಾವು ಹೆಮ್ಮೆ ಮತ್ತು ಸಂತೋಷದಿಂದ ನೋಡುತ್ತೇವೆ. ತಮ್ಮಾ, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಭಾವನಾತ್ಮಕ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ. 
ಕಿತ್ತಳೆ ಬಣ್ಣದ ಟಿ-ಶರ್ಟ್ ಧರಿಸಿರುವ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ರಶ್ಮಿಕಾ ಆನಂದ್.. ನಿನಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!! ನೀನು ಶೂಟಿಂಗ್‌ನಲ್ಲಿ ಬ್ಯುಸಿಯಿದ್ದೀಯಾ, ನಾವು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ನಿನ್ನ ಕೆಲಸ ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದು ನಮಗೆ ತಿಳಿದಿದೆ. ಅಂದಹಾಗೆ, ಈ ಫೋಟೋ ತೆಗೆಯುವಾಗ ನಾವು ಮೀನುಗಳನ್ನು ಕರೆಯುತ್ತಿದ್ದೆವು ಎಂದು ವಿಜ್ಜು ಹೇಳಿದ ನೆನಪು. ಆನಂದ್.. ಮೀನುಗಳನ್ನು ಕರೆಯುವ ಈ ನಮ್ಮ ಹುಚ್ಚಾಟ ಸದಾ ಹೀಗೆಯೇ ಇರಲಿ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ. 
ಇತ್ತೀಚಿಗೆ ರಶ್ಮಿಕಾ ಮಂದಣ್ಣ, ವಿಜಯ್​ ದೇವರಕೊಂಡ ಅವರ ಕುಟುಂಬದೊಂದಿಗೆ  ಸಂಭ್ರಮಿಸುತ್ತಿರುವ ಅಪರೂಪದ ವಿಡಿಯೋವೊಂದನ್ನು ಆನಂದ್​ ದೇವರಕೊಂಡ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಸಧ್ಯ ಎಲ್ಲೆಡೆ ವೈರಲ್​ ಆಗಿತ್ತು. 

ವಿಡಿಯೋದಲ್ಲೇನಿದೆ?

ಮನೆಯ ಆವರಣದಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ ಆನಂದ್​, ವಿಜಯ್​, ರಶ್ಮಿಕಾ ಮತ್ತು ಹೆಜ್ಜೆ ಹಾಕುವುದನ್ನು ತೋರಿಸಲಾಗಿದೆ. ಇದು ಹಚ್ಚ ಹಸಿರಿನ ಹುಲ್ಲುಹಾಸಿನ ಮೇಲೆ ಸ್ನೇಹಿತರ ಗುಂಪಿನೊಂದಿಗೆ ನೃತ್ಯ ಮಾಡುತ್ತಿರುವ ದೃಶ್ಯವು ಒಂದು ಸುಂದರವಾದ ಕೌಟುಂಬಿಕ ಸಭೆಯ ಚಿತ್ರಣವನ್ನು ನೀಡಿದೆ. 
ಈ ವಿಡಿಯೋದಲ್ಲಿ ವಿಜಯ್ ಬಿಳಿ ಪ್ಯಾಂಟ್ ಜೊತೆಗೆ ಬಣ್ಣ-ಬಣ್ಣದ ಶರ್ಟ್ ಧರಿಸಿದ್ದರೆ, ರಶ್ಮಿಕಾ ಶಾರ್ಟ್ಸ್ ಮತ್ತು ಕ್ಯಾಶುವಲ್ ಶರ್ಟ್ ಧರಿಸಿದ್ದಾರೆ. ಆನಂದ್​ ದೇವರಕೊಂಡ ಅವರ ಮುಂಬರುವ ಚಿತ್ರ ಎಪಿಕ್ ನ 'ಸಂಚಾರಮೆ' ಹಾಡಿಗೆ ಮುಕ್ತವಾಗಿ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿರುವಂತೆ ಕಾಣುತ್ತದೆ. 
ನೋಡಲು ಇದು ಸ್ವಲ್ಪ ಗೊಂದಲಮಯವಾಗಿ ಕಾಣಿಸಬಹುದು, ಆದರೆ ಆ ಕ್ಷಣದಲ್ಲಿ ನಾವು 'ಸಂಚಾರಮೆ' ಹಾಡನ್ನು ಕೇಳುತ್ತಾ ಅತೀವ ಸಂತೋಷಪಟ್ಟೆವು. ನಾವು ಪ್ರೀತಿಸುವವರ ಜೊತೆಗೂಡಿ ಪ್ರವಾಸ ಮಾಡುವುದು ಮತ್ತು ನೃತ್ಯ ಮಾಡುವುದಕ್ಕಿಂತ ಹೆಚ್ಚಿನ ಆನಂದ ಬೇರೆ ಯಾವುದಿದೆ? ಎಂದು ಆನಂದ್​ ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net