ಮದುವೆಯ ನಂತರ ಮೊದಲ ಜನ್ಮದಿನ: ಪತಿ ವಿಜಯ್ ಜೊತೆ ಕೊಡಗಿನ ಮಡಿಲಲ್ಲಿ ರಶ್ಮಿಕಾ '30'ರ ಸಂಭ್ರಮ! Rashmika Mandanna

30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ನಟಿ(Rashmika Mandanna Instagram ಚಿತ್ರ )
30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ನಟಿ(Rashmika Mandanna Instagram ಚಿತ್ರ )
Published on
Rashmika Mandanna: ನಟಿ ರಶ್ಮಿಕಾ ಮಂದಣ್ಣ ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಅವರ ಹುಟ್ಟೂರಾದ ಕೊಡಗಿನಲ್ಲಿ , ಪತಿ ವಿಜಯ್ ದೇವರಕೊಂಡ ಮತ್ತು ಕುಟುಂಬಸ್ಥರೊಂದಿಗೆ ಅತ್ಯಂತ ಹೃತ್ಪೂರ್ವಕವಾಗಿ ಆಚರಿಸಿಕೊಂಡಿದ್ದಾರೆ. ವಿವಾಹದ ನಂತರ ಬಂದ ಮೊದಲ ಹುಟ್ಟುಹಬ್ಬ ಇದಾಗಿರುವುದರಿಂದ ಪ್ರಕೃತಿಯ ಮಡಿಲಲ್ಲಿ ಅತ್ಯಂತ ಸರಳವಾಗಿ ಆಚರಿಸಿಕೊಂಡಿದ್ದಾರೆ.
ನವ ಜೋಡಿ ಕೊಡಗಿನ ಪ್ರವಾಸದ ಸಮಯದಲ್ಲಿ ರಶ್ಮಿಕಾ ತಾವು ಓದಿದ ಹಳೆಯ ಶಾಲೆಯ ಮುಂಭಾಗಕ್ಕೆ ಭೇಟಿ ನೀಡಿದರು. ಆದಾಗ್ಯೂ, ಅವರ ಮದುವೆಗೆ ಹಾಜರಾಗಲು ಸಾಧ್ಯವಾಗದ ಅವರ ಆಪ್ತ ಕುಟುಂಬ ಸದಸ್ಯರನ್ನು ಸಹ ಭೇಟಿಯಾದರು.

ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ರಶ್ಮಿಕಾ!

ರಶ್ಮಿಕಾ ತಮ್ಮ ಪೋಸ್ಟ್​ನಲ್ಲಿ ದೀರ್ಘ ಶೀರ್ಷಿಕೆಯನ್ನು ಹಂಚಿಕೊಂಡಿದ್ದು, ಈ ಬಾರಿ ನನ್ನ 30 ನೇ ಹುಟ್ಟು ಹಬ್ಬವನ್ನು ಸ್ವಲ್ಪ ವಿಭಿನ್ನವಾಗಿತ್ತು. ಎಷ್ಟೋ ದಿನಗಳ ಬಳಿಕ ನಾನು ಮನೆಗೆ ಹಿಂತುರುಗಿದೆ. ನಾನು ಚಿಕ್ಕಂದಿನಿಂದಲೂ ಹೋಗುತ್ತಿದ್ದ ದೇವಸ್ಥಾನಕ್ಕೆ ಹೋಗಿದ್ದೆ. ನಾನು ಓದಿದ ಶಾಲೆಯನ್ನು ಹೊರಗಿನಿಂದ ನೋಡಿದೆ. ಜೊತೆಗೆ ಸ್ವಲ್ಪ ಸಮಯ ಬಾಲ್ಯವನ್ನು ಮೆಲಕುಹಾಕಿದೆ. ಆದಾಗ್ಯೂ, ನನ್ನ ಇಂದಿನ ಅಸ್ತಿತ್ವಕ್ಕೆ ಕಾರಣರಾದ ಜನರ ನಡುವೆ ಕೇಕ್​ ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡೆ ಎಂದು ಬರೆದಿದ್ದಾರೆ.
ನನ್ನ ಮದುವೆಯಲ್ಲಿ ಭಾಗವಹಿಸಲು ಸಾಧ್ಯವಾಗದ ನನ್ನ ಆತ್ಮೀಯರೊಂದಿಗೆ ನಾನು ಒಂದು ಸಣ್ಣ ಭೋಜನಕೂಟದಲ್ಲಿ ಭೇಟಿಯಾದೆ. ಶಾಲೆಯಿಂದ ಬಂದ ನನ್ನ ಹುಡುಗಿಯರು ಇಂದಿನವರೆಗೂ ನನ್ನ ಎಲ್ಲದರ ಭಾಗವಾಗಿದ್ದಾರೆ. ಅವರು ನನ್ನ ಸ್ನೇಹಿತರಿಗಿಂತ ಕುಟುಂಬದಂತೆಯೇ ಭಾಸವಾಗುತ್ತದೆ. ಜೀವನದಲ್ಲಿ ಎಲ್ಲವೂ ಒಳ್ಳೆಯ ಕಾರಣಕ್ಕಾಗಿ ನಡೆಯುತ್ತದೆ ಎಂದು ಭಾವಿಸುತ್ತೇನೆ ಮತ್ತು ಇದೇ ಕಾರಣ! ಎಲ್ಲವೂ ಯೋಗ್ಯವೆನಿಸುತ್ತದೆ! ಎಂದು ಹೇಳಿದ್ದಾರೆ.

ಉದಯಪುರ ಮದುವೆಯ ನಂತರ ಕೊಡಗಿನಲ್ಲಿ ಭೋಜನಕೂಟ

ಕಳೆದ ಫೆಬ್ರವರಿಯಲ್ಲಿ ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ಕುಟುಂಬದ ಆಪ್ತರ ಸಮ್ಮುಖದಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿತ್ತು. ಆದರೆ, ದೂರದ ಪ್ರಯಾಣ ಮತ್ತು ಇತರ ಕಾರಣಗಳಿಂದಾಗಿ ಕೊಡಗಿನ ಕೆಲವು ಹಿರಿಯರು ಮತ್ತು ಕುಟುಂಬಸ್ಥರಿಗೆ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಹುಟ್ಟುಹಬ್ಬದ ನೆಪದಲ್ಲಿ ಕೊಡಗಿಗೆ ಬಂದ ನಟಿ, ಮದುವೆಗೆ ಬರಲಾಗದ ಕುಟುಂಬ ಸದಸ್ಯರಿಗಾಗಿ ವಿಶೇಷ ಭೋಜನಕೂಟ ಏರ್ಪಡಿಸಿ ಎಲ್ಲರ ಆಶೀರ್ವಾದ ಪಡೆದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net