ವಿಜಯ್ ದೇವರಕೊಂಡ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಶ್ಮಿಕಾ ಅವರೊಂದಿಗಿನ ಸುಂದರ ಕ್ಷಣದ ಫೋಟೋವನ್ನು ಹಂಚಿಕೊಂಡು,ನಮ್ಮೆಲ್ಲರ ಜೀವನದಲ್ಲಿ ಕೆಲವು ಮಹತ್ವದ ಕ್ಷಣಗಳು ಬರುತ್ತವೆ. ನಾವೆಲ್ಲರೂ ಯಾವುದೋ ಒಂದು ಹಂತದಲ್ಲಿ ಆ ಕ್ಷಣಗಳನ್ನು ಎದುರಿಸುತ್ತೇವೆ ಮತ್ತು ಕ್ಷಣಾರ್ಧದಲ್ಲೇ ಕಳೆದುಹೋಗುತ್ತವೆ. ಆದರೆ, ಆ ಕ್ಷಣಗಳನ್ನು ನಾವು ಸರಿಯಾದ ರೀತಿಯಲ್ಲಿ ಆಚರಿಸಿದರೆ, ಅವುಗಳ ನೆನೆಪುಗಳು ಶಾಶ್ವತವಾಗಿ ನಮ್ಮೊಂದಿಗೆ ಇರುತ್ತವೆ. ಅವು ನಮಗೂ ಮತ್ತು ನಮ್ಮವರಿಗೆ ಯಾವಾಗಲೂ ಸಂತೋಷವನ್ನು ನೀಡುತ್ತವೆ. ಇದನ್ನೇ ನಾನು ಯಾವಾಗಲೂ ಖಚಿತಪಡಿಸಿಕೊಳ್ಳಲು ಬಯಸುತ್ತೇನೆ.