ಜಗನ್ನಾಥ ಈ ಚಿತ್ರದ ಮೂಲಕ ಒಂದೊಳ್ಳೆ ್ಯಾಮಿಲಿ ಡ್ರಾಮಾ ಕಟ್ಟಿಕೊಟ್ಟಿದ್ದಾರೆ. ಕೆಲ ನ್ಯೂನ್ಯತೆಗಳ ನಡುವೆಯೂ ಸಮಾಜದ ಕಟ್ಟುಪಾಡುಗಳನ್ನು ಕದಡುವ, ಪ್ರೇಕ್ಷಕರ ಅಂತರಂಗ ಕೆಣಕುವ ಕಥೆಯಿದು. ನಿಧಾನವಾಗಿ ಆರಂಭವಾದರೂ, ಕಥೆ ಸಾಗಿದಂತೆ ಹೃದಯಕ್ಕಿಳಿಯುವ ಕಾರಣ ನೋಡುಗರಿಗೆ ಆಪ್ತವೆನಿಸುತ್ತದೆ. ಕೇರಳದ ಹಸಿರು, ಮೇಘಾಲಯದ ಗುಡ್ಡಗಳನ್ನು ಛಾಯಾಗ್ರಾಹಕ ದೀಪಕ್ ಸುಂದರವಾಗಿ ಸೆರೆ ಹಿಡಿದಿದ್ದಾರೆ. ಜೋ ಕೋಸ್ಟಾ ಸಂಗೀತ ಚಿತ್ರಕ್ಕೆ ಪ್ಲಸ್. ನಾಯಕ ನಿಹಾರ್ ಮತ್ತಷ್ಟು ಪಳಗಿದರೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ. ನಾಯಕಿ ರಚನಾ ಎಂದಿನಂತೆ ಮುದ್ದಾಗಿ ಮಿಂಚಿದ್ದಾರೆ. ರಾಜೇಶ್ ನಟರಂಗ ಮತ್ತು ಸಿತಾರಾ ಪಾತ್ರಗಳು ಸೆಳೆಯುತ್ತವೆ. ರವೀಂದ್ರ ವಿಜಯ್ ತಮ್ಮ ಪಾತ್ರವನ್ನು ಜೀವಿಸಿದ್ದಾರೆ. "ಹೊಂದಿಸಿ ಬರೆಯಿರಿ'ಯನ್ನು ಒಟಿಟಿಯಲ್ಲಿ ನೋಡಿ, ಥಿಯೇಟರ್ನಲ್ಲಿ ನೋಡಬೇಕಿತ್ತು ಅಂತ ಬೇಸರಿಸಿಕೊಂಡವರಿಗೆ "ತೀರ್ಥರೂಪ ತಂದೆಯವರಿಗೆ' ಒಂದೊಳ್ಳೆ ಅವಕಾಶ ನೀಡಿದೆ!