‘ಛತ್ರಪತಿ ಶಿವಾಜಿ’ಗೆ ಭೂಷಣ್ ಸಾಥ್: 2027ರ ಆರಂಭದಲ್ಲಿ ಸೆಟ್ಟೇರಲಿದೆ ರಿಷಬ್ ಶೆಟ್ಟಿ ನಟನೆಯ ಐತಿಹಾಸಿಕ ಚಿತ್ರ CHATRAPATHI SHIVAJI MAHARAJ

: ‘ಕಾಂತಾರ’ ಸರಣಿ ಬಳಿಕ ನಟ ರಿಷಬ್ ಶೆಟ್ಟಿ ತೆಲುಗಿನ ‘ಜೈ ಹನುಮಾನ್’ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಅದರ ಮಧ್ಯೆಯೇ, ಅವರು ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ ‘ಛತ್ರಪತಿ ಶಿವಾಜಿ ಮಹಾರಾಜ್: ದ ಪ್ರೈಡ್ ಆಫ್​ ಭಾರತ್’ ಸಿನಿಮಾವನ್ನು ಒಪ್ಪಿಕೊಂಡಿದ್ದರು. ‘ಸೇದ್’ ಖ್ಯಾತಿಯ ಸಂದೀಪ್ ಸಿಂಗ್ ಈ ಐತಿಹಾಸಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
rishabh with bhushan
ರಿಷಬ್ ಜತೆ ಭೂಷಣ್​ ಕುಮಾರ್
Published on: 

ಬೆಂಗಳೂರು: ‘ಕಾಂತಾರ’ ಸರಣಿ ಬಳಿಕ ನಟ ರಿಷಬ್ ಶೆಟ್ಟಿ ತೆಲುಗಿನ ‘ಜೈ ಹನುಮಾನ್’ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಅದರ ಮಧ್ಯೆಯೇ, ಅವರು ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ ‘ಛತ್ರಪತಿ ಶಿವಾಜಿ ಮಹಾರಾಜ್: ದ ಪ್ರೈಡ್ ಆಫ್​ ಭಾರತ್’ ಸಿನಿಮಾವನ್ನು ಒಪ್ಪಿಕೊಂಡಿದ್ದರು. ‘ಸೇದ್’ ಖ್ಯಾತಿಯ ಸಂದೀಪ್ ಸಿಂಗ್ ಈ ಐತಿಹಾಸಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಂದುಕೊಂಡಂತಾಗಿದ್ದರೆ, ಇಷ್ಟೊತ್ತಿಗೆ ಚಿತ್ರದ ಶೂಟಿಂಗ್ ಆರಂಭವಾಗಬೇಕಿತ್ತು. ಪ್ರಿ-ಪ್ರೊಡಕ್ಷನ್ ಕೆಲಸಗಳು ಇನ್ನು ಮುಗಿಯದ ಕಾರಣ ಸೆಟ್ಟೇರಲು ತಡವಾಗಿದೆ. ಸದ್ಯ ಸಿನಿಮಾ ಕಾರ್ಯಗಳು ನಡೆಯುತ್ತಿದ್ದು, ಆ ಮಧ್ಯೆಯೇ ಚಿತ್ರದ ಬಗ್ಗೆ ಮತ್ತೊಂದು ಅಪ್‌ಡೇಟ್ ದೊರೆತಿದೆ. ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಟಿ-ಸೀರೀಸ್ ಸಾಥ್ ನೀಡಿದೆ. ಆ ಮೂಲಕ ಎರಡು ಭಾಗಗಳಲ್ಲಿ ಅದ್ದೂರಿಯಾಗಿ ಮೂಡಿಬರಲಿರುವ ಈ ಐತಿಹಾಸಿಕ ಚಿತ್ರಕ್ಕೆ ನಿರ್ಮಾಪಕ ಭೂಷಣ್ ಕುಮಾರ್, ಸಂದೀಪ್ ಸಿಂಗ್ ಮತ್ತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಒಂದಾಗಿದ್ದಾರೆ. ನಿರ್ಮಾಪಕ ಭೂಷಣ್ ಕುಮಾರ್ ಇತ್ತೀಚೆಗೆ ನಟ ರಿಷಬ್ ಶೆಟ್ಟಿಗೆ ಛತ್ರಪತಿ ಶಿವಾಜಿ ಮಹಾರಾಜರ ಅಪರೂಪದ ತೈಲವರ್ಣ ಚಿತ್ರವನ್ನು ಉಡುಗೊರೆಯಾಗಿ ನೀಡಿ ಗೌರವಿಸುವ ಮೂಲಕ ಒಪ್ಪಂದವನ್ನು ಘೋಷಿಸಿದ್ದಾರೆ. ಶಿವಾಜಿ ಮಹಾರಾಜರ ಬದುಕಿನ ಮಹತ್ವದ ಯುದ್ಧಗಳು, ಅಪ್ರತಿಮ ತ್ಯಾಗ, ಕಾರ್ಯತಂತ್ರದ ಚತುರತೆ ಮತ್ತು ಇದುವರೆಗೆ ಬೆಳಕಿಗೆ ಬಾರದ ಐತಿಹಾಸಿಕ ಅಧ್ಯಾಯಗಳನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆ. ಭಾರತೀಯ ಚಿತ್ರರಂಗದ ಕಲಾವಿದರು, ತಂತ್ರಜ್ಞರ ಜತೆಗೆ ಹಾಲಿವುಡ್‌ನವರು ಕೂಡ ಈ ಪ್ರಾಜೆಕ್ಟ್‌ನ ಭಾಗವಾಗಲಿದ್ದಾರೆ. 2027ರ ಆರಂಭದಲ್ಲಿ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರವು ಅಧಿಕೃತವಾಗಿ ಸೆಟ್ಟೇರಲಿದೆ.

ಛತ್ರಪತಿ ಶಿವಾಜಿ ಮಹಾರಾಜರು ನಮಗೆ ಹೆಮ್ಮೆ ತರುವಂತಹ ಭವ್ಯ ಪರಂಪರೆಯನ್ನು ನೀಡಿದ್ದಾರೆ. ಸಿನಿಮಾದ ಮೂಲಕ ಆ ಪರಂಪರೆಯನ್ನು ಇಡೀ ಜಗತ್ತಿಗೆ ತಲುಪಿಸುವುದು ನಮ್ಮ ಕರ್ತವ್ಯ. ರಿಷಬ್ ಶೆಟ್ಟಿಯ ಪ್ರಭಾವಶಾಲಿ ವ್ಯಕ್ತಿತ್ವ ಮತ್ತು ಐತಿಹಾಸಿಕ ಪಾತ್ರಗಳಿಗೆ ಜೀವ ತುಂಬುವ ಅವರ ಅಸಾಧಾರಣ ಪ್ರತಿಭೆಯು ಶಿವಾಜಿ ಮಹಾರಾಜರ ಶೌರ್ಯ ಮತ್ತು ಸ್ವರಾಜ್ಯದ ಸ್ಫೂರ್ತಿಯನ್ನು ಪ್ರೇಕ್ಷಕರಿಗೆ ದಾಟಿಸಲು ಅತ್ಯಂತ ಸೂಕ್ತವಾಗಿದೆ. ಇದು ನಮಗೆ ಕೇವಲ ಸಿನಿಮಾವಲ್ಲ, ಶಿವಾಜಿ ಮಹಾರಾಜರಿಗೆ ಸಲ್ಲಿಸುವ ಗೌರವವಾಗಿದೆ.
ಭೂಷಣ್ ಕುಮಾರ್, ನಿರ್ಮಾಪಕ