ಹಂದಿಮಾಂಸ, ಗೋಮಾಂಸದ ಫೋಟೋ ಹಂಚಿ ಟಾಂಗ್ ನೀಡಿದ ಪ್ರಕಾಶ್ ರಾಜ್: ಕೇರಳದ ಅಸಲಿ ಕಥೆ ಇದೇ ಅಂದ್ರು ನಟ! Prakash Raj

Prakash Raj (ಚಿತ್ರ X)
Prakash Raj (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • 2019ರಲ್ಲಿ ಬಿಡುಗಡೆಯಾದ ದಿ ಕೇರಳ ಸ್ಟೋರಿ ಮುಂದುವರೆದ ಭಾಗ 'ದಿ ಕೇರಳ ಸ್ಟೋರಿ 2'
  • ಟ್ರೈಲರ್ ಬಿಡುಗಡೆಯಾದ ಕ್ಷಣದಿಂದಲೇ ಚಿತ್ರವು ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ
  • ನಟ ಪ್ರಕಾಶ್​ ರಾಜ್​ ಚಿತ್ರದ ಸುತ್ತಲಿನ ವಿವಾದವನ್ನು ತಮ್ಮದೇ ಆದ ಶೈಲಿಯಲ್ಲಿ ವಿವರಿಸಿದ್ದಾರೆ
  • ಈ ಚಿತ್ರದಲ್ಲಿ ನಾಯಕನಿಗೆ ಮುಸ್ಲಿಂ ಕುಟುಂಬವೊಂದು ಗೋಮಾಂಸ ತಿನ್ನಲು ಒತ್ತಾಯಿಸುವುದರ ಸುತ್ತ ಈ ಚಿತ್ರವು ಸುತ್ತುತ್ತದೆ
Prakash Raj: 2019ರಲ್ಲಿ ಬಿಡುಗಡೆಯಾದ ದಿ ಕೇರಳ ಸ್ಟೋರಿ ಮುಂದುವರೆದ ಭಾಗ 'ದಿ ಕೇರಳ ಸ್ಟೋರಿ 2' ಈಗ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಸಂಚಲನ ಮೂಡಿಸುತ್ತಿದೆ. ಟ್ರೈಲರ್ ಬಿಡುಗಡೆಯಾದ ಕ್ಷಣದಿಂದಲೇ ಚಿತ್ರವು ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ.

'ದಿ ಕೇರಳ ಸ್ಟೋರಿ 2' ಬಗ್ಗೆ ಪ್ರಕಾಶ್ ರಾಜ್ ಟೀಕೆ

ಈ ಚಿತ್ರದ ಟ್ರೇಲರ್​ ವಿವಾದದ ಕಿಡಿ ಹೊತ್ತಿದ ಬೆನ್ನಲ್ಲೇ, ನಟ ಪ್ರಕಾಶ್​ ರಾಜ್​ ಚಿತ್ರದ ಸುತ್ತಲಿನ ವಿವಾದವನ್ನು ತಮ್ಮದೇ ಆದ ಶೈಲಿಯಲ್ಲಿ ವಿವರಿಸಿದ್ದಾರೆ. ಭಾನುವಾರ ತಮ್ಮ ಎಕ್ಸ್​ ಖಾತೆಯಲ್ಲಿ ನಿಜವಾದ ಕೇರಳ ಸ್ಟೋರಿ ಎಂದರೆ ಹಂದಿಮಾಂಸ, ಗೋಮಾಂಸ ಮತ್ತು ಮೀನುಗಳು ಸಸ್ಯಾಹಾರಿ ಆಹಾರದೊಂದಿಗೆ ಹೇಗೆ ಬಾಳ್ವೆ ನಡೆಸುತ್ತವೆಯೋ ಹಾಗೇ ಅವರೆಲ್ಲರೂ ಸಾಮರಸ್ಯದಿಂದ ಬದುಕುತ್ತಾರೆ. ದಯವಿಟ್ಟು ಆನಂದಿಸಿ ಎಲ್ಲರಿಗೂ ಭಾನುವಾರದ ಶುಭಾಶಯಗಳು ಎಂದು ಬರೆದು ಪೋಸ್ಟ್ ಮಾಡಿದ್ದರು.
ವಿವಾದಕ್ಕೆ ಕಾರಣವೇನು?
ಈ ಚಿತ್ರದಲ್ಲಿ ನಾಯಕನಿಗೆ ಮುಸ್ಲಿಂ ಕುಟುಂಬವೊಂದು ಗೋಮಾಂಸ ತಿನ್ನಲು ಒತ್ತಾಯಿಸುವುದರ ಸುತ್ತ ಈ ಚಿತ್ರವು ಸುತ್ತುತ್ತದೆ. ಈ ದೃಶ್ಯ ಹೊರಬಿದ್ದ ನಂತರ, ರಾಜಕಾರಣಿಗಳು ಮತ್ತು ಸಾರ್ವಜನಿಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಸಮಾಜವನ್ನು ಎರಡು ಭಾಗವಾಗಿ ವಿಭಜಿಸುವಂತೆ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಕೇರಳ ಸ್ಟೋರಿ 2 ವಿವಾದ

ಈ ಹಿಂದೆ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್​ ಕೇರಳ ಸ್ಟೋರಿ ಒಂದು ಸಿನಿಮಾ. ಇದು ಬುಲ್​ ...ಪ್ರಚಾರ. ಟೋಟಲ್​ ಬುಲ್​ ಎಂದು ಕಟುವಾಗಿ ಟೀಕೆ ವ್ಯಕ್ತಪಡಿಸಿದ್ದರು. ಅದೇ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಾ ಚಿತ್ರವನ್ನು ಖಂಡಿಸಿ, ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮಾದರಿಯಾಗಿರುವ ಕೇರಳವನ್ನು ಭಯೋತ್ಪಾದನೆಯ ಕೇಂದ್ರವೆಂದು ಬಿಂಬಿಸುವ ಪ್ರಯತ್ನಗಳನ್ನು ಸಾಮೂಹಿಕವಾಗಿ ತಿರಸ್ಕರಿಸಬೇಕು. ಸಹೋದರತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಅದನ್ನು ತಿರಸ್ಕರಿಸಬೇಕು ಎಂದು ಹೇಳಿದ್ದರು.
ಏತನ್ಮಧ್ಯೆ, ದಿ ಕೇರಳ ಸ್ಟೋರಿ 2 ಬಿಡುಗಡೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಕೇರಳ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಚಿತ್ರದ ಟೀಸರ್ ಸಮಾಜದಲ್ಲಿ ಅಶಾಂತಿ ಹರಡುವ ಸಾಧ್ಯತೆ ಇದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಆದಾಗ್ಯೂ, ಈ ಟೀಸರ್‌ನಲ್ಲಿ ಕೇರಳ, ಮಧ್ಯಪ್ರದೇಶ ಮತ್ತು ರಾಜಸ್ಥಾನದ 3 ಮಹಿಳೆಯರು ಅವಿವಾಹಿತ ಹುಡುಗಿಯರನ್ನು ಮತಾಂತರಿಸಲು ಮತ್ತು ದೇಶದ ಜನಸಂಖ್ಯೆಯನ್ನು ಬದಲಾಯಿಸಲು ಪ್ರೀತಿಯನ್ನು ಅಸ್ತ್ರವಾಗಿ ಬಳಸಲಾಗಿದೆ ಎಂದು ಆರೋಪ ಮಾಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net