‘ಪೆದ್ದಿ’ ಪೈಲ್ವಾನ್ : ಗದೆ ಎತ್ತಿ ಭರ್ಜರಿ ಸಾಹಸ ಪ್ರದರ್ಶಿಸಿದ ತೆಲುಗು ನಟ ರಾಮಚರಣ್

ಪೆದ್ದಿ ಪೋಸ್ಟರ್​
ಪೆದ್ದಿ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ರಾಮ್ ನವಮಿ ಸಂಭ್ರಮದ ನಡುವೆ ಹುಟ್ಟುಹಬ್ಬ ಸಂಭ್ರಮದಲ್ಲಿ ಟಾಲಿವುಡ್ ನಟ
  • ಬರ್ತಡೇ ಗೆ ಪೆದ್ದಿ ಚಿತ್ರದ ಟೀಸರ್ ರಿಲೀಸ್ ಮಾಡಿದ ಚಿತ್ರತಂಡ
  • ಪೈಲ್ವಾನ್ ರೂಪದಲ್ಲಿ ಕಾಣಿಸಿಕೊಂಡ ರಾಮಚರಣ್​
‘ಆಚಾರ್ಯ’, ‘ಗೇಮ್‌ಚೇಂಜರ್’ ಅಷ್ಟೇನೂ ಸದ್ದು ಮಾಡದ ಕಾರಣ ತೆಲುಗು ನಟ ರಾಮಚರಣ್ ಮುಂದಿನ ಸಿನಿಮಾ ‘ಪೆದ್ದಿ’ ಮೂಲಕ ದೊಡ್ಡ ಮಟ್ಟದ ಸಕ್ಸಸ್‌ನ ನಿರೀಕ್ಷೆಯಲ್ಲಿದ್ದಾರೆ. ‘ಪೆದ್ದಿ’ಗೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬುಚಿ ಬಾಬು ಸನಾ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣದಲ್ಲಿ ಬಿಜಿಯಾಗಿದೆ. ರಾಮ್​, ರಾಮನವಮಿಯ ಸಂಭ್ರಮದ ನಡುವೆ ಶುಕ್ರವಾರ (ಮಾ.27) 42ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಹಿಂದಿನ ದಿನದಿಂದಲೇ ನೆಚ್ಚಿನ ನಟನ ಬರ್ತ್‌ಡೇ ಆಚರಿಸಿ, ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇದೇ ವೇಳೆ ‘ಪೆದ್ದಿ’ ಚಿತ್ರದ ಟೀಸರ್ ರಿಲೀಸ್ ಮಾಡಿ ಚಿತ್ರತಂಡ ನಟನಿಗೆ ಉಡುಗೊರೆ ನೀಡಿದೆ. ಕೇವಲ 44 ಸೆಕೆಂಡ್‌ನ ಈ ಟೀಸರ್‌ನಲ್ಲಿ ರಾಮ್ ಕಟ್ಟುಮಸ್ತು ದೇಹದ ಪೈಲ್ವಾನ್ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂನಲ್ಲಿ ಟೀಸರ್ ರಿಲೀಸ್ ಆಗಿದೆ. ಕನ್ನಡ ಟೀಸರ್‌ನಲ್ಲಿ ಮೊದಲಿಗೆ ನಟ ಶಿವರಾಜಕುಮಾರ್ ಅವರ ‘ಕುಸ್ತಿ ಅಂದರೆ ಬ್ಯಾಟ್‌ನಿಂದ ಬೌಲ್ ಹೊಡೆಯುವಂತದಲ್ಲ, ಸಾವಿಗೆ ಎದೆ ಒಡ್ಡುವ ಆಟ. ಈಗ್ ಹೇಳು ಇರ್ತಿಯೋ, ಹೋಗ್ತಿಯೊ’ ಎಂಬ ಹಿನ್ನೆಲೆ ಧ್ವನಿ ಕೇಳಿಬರುತ್ತದೆ. ಬಳಿಕ ರಾವಚರಣ್, ಮೂಟೆ ಎತ್ತಿ ಟ್ರ್ಯಾಕ್ಟರ್‌ಗೆ ಹಾಕಿ, ಕುಸ್ತಿ ಅಂಕಣಕ್ಕಿಳಿಯುತ್ತಾರೆ. ಗದೆ ಹಿಡಿದು ಭುಜಬಲ ಪರಾಕ್ರಮ ತೋರಿಸಿ, ‘ಆಟವೇ ನನ್ನ ಪೊಗರು’ ಎಂದು ಆರ್ಭಟಿಸಿದ್ದಾರೆ. ರಾಮ್ ಲುಕ್ ಮತ್ತು ಟೀಸರ್ ಭರ್ಜರಿಯಾಗಿ ಮೂಡಿಬಂದಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ‘ಪೆದ್ದಿ’ಯಲ್ಲಿ ರಾಮಚರಣ್‌ಗೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಜೋಡಿಯಾಗಿದ್ದಾರೆ. ನಟ ಶಿವರಾಕುಮಾರ್, ಜಗಪತಿ ಬಾಬು, ಬೊಮನ್ ಇರಾನಿ ಕಲಾ ಬಳಗದಲ್ಲಿದ್ದಾರೆ. ಇದೇ ಏ. 30ಕ್ಕೆ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. -ಏಜೆನ್ಸೀಸ್

ರಾಮಚರಣ್ ಕಣ್ಣಿಗೆ ಗಾಯ

ಇತ್ತೀಚೆಗೆ ‘ಪೆದ್ದಿ’ ಚಿತ್ರದ ಸಾಹಸ ದೃಶ್ಯದ ಶೂಟಿಂಗ್ ವೇಳೆ ನಟ ರಾಮಚರಣ್ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ಆಕಸ್ಮಿಕವಾಗಿ ಅವರ ಕಣ್ಣಿನ ಮೇಲ್ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯದ ಭಾಗದಲ್ಲಿ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ. ಆತಂಕಪಡುವಂತಹ ವಿಚಾರವೇನಿಲ್ಲ ಎಂದು ಚಿತ್ರತಂಡ ತಿಳಿಸಿದ್ದು, ರಾಮ್ ಚೇತರಿಸಿಕೊಂಡು ಮರುದಿನ ಸೆಟ್‌ಗೆ ಮರಳಿ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net