ಪ್ರಜ್ವಲ್ ದೇವರಾಜ್, "2005ರಲ್ಲಿ ನಡೆಯುವ ಕಥೆಯಿದು. ಮಾರ್ಚ್ ಅಂತ್ಯಕ್ಕೆ ಅಥವಾ ಯುಗಾದಿ ಹಬ್ಬದ ಸಮಯದಲ್ಲಿ ಚಿತ್ರ ಮುಹೂರ್ತ ನೆರವೇರಲಿದೆ. ಪ್ರಣಾಮ್ಗೆ ಮಾತ್ರವಲ್ಲ ನಮ್ಮ ಬ್ಯಾನರ್ನಲ್ಲಿ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಿದ್ದೇವೆ' ಎಂದರು. ನಾಯಕ ಪ್ರಣಾಮ್, ""ಎಂಜಿಆರ್'ನಿಂದ ಪ್ರಣಾಮ್ ಹೊಸ ಅಧ್ಯಾಯ ಶುರುವಾಗಲಿದೆ. ಆತ ಅಳಿಸುತ್ತಾನೆ, ನಗಿಸುತ್ತಾನೆ, ಫೈಟ್ ಮಾಡುತ್ತಾನೆ. ನನ್ನ ಲುಕ್, ಬಾಡಿ ಲಾಂಗ್ವೇಜ್ ಎರಡೂ ಬೇರೆ ರೀತಿ ಇರಲಿದೆ. ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸುತ್ತಿದ್ದೇನೆ' ಎಂದು ಹೇಳಿಕೊಂಡರು.