ವಾರದ ಮಧ್ಯದಲ್ಲೂ ಹೌಸ್‌ಫುಲ್: ಸರ್ವಧರ್ಮೀಯರ ಪ್ರಶಂಸೆಗೆ ಪಾತ್ರವಾಗಿರುವ ಜಯಪ್ರಕಾಶ್ ಶೆಟ್ಟಿ ಉಪ್ಪಳ ನಟನೆಯ ‘ಬನ’ ತುಳು ಚಲನಚಿತ್ರ!

ವಾರದ ಮಧ್ಯದಲ್ಲೂ ಹೌಸ್‌ಫುಲ್
ವಾರದ ಮಧ್ಯದಲ್ಲೂ ಹೌಸ್‌ಫುಲ್
Published on: 

ಮಂಗಳೂರು: ತುಳು ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ ಜಯಪ್ರಕಾಶ ಅಭಿನಯದ ‘ಬನ’ ತುಳು ಸಿನಿಮಾ ಅಕ್ಟೋಬರ್ 23ರಂದು ತೆರೆಕಂಡಿದ್ದು, ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಾರದ ಮಧ್ಯದಲ್ಲೂ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ಚಿತ್ರದ ಜನಪ್ರಿಯತೆಗೆ ಸಾಕ್ಷಿಯಾಗಿದೆ.

‘ಬನ’ ಕೇವಲ ಸಿನಿಮಾವಲ್ಲ, ಭಾವನೆಗಳ ಸಂಗಮ. ಆಡಂಬರವಿಲ್ಲದ ಸರಳ ನಿರೂಪಣೆ, ಮನಮುಟ್ಟುವ ಕಥೆ, ಸಹಜ ಅಭಿನಯ, ಸುಂದರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ. ಇಲ್ಲಿ ಕಥೆಯೇ ನಿಜವಾದ ನಾಯಕನಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಸಿನಿಮಾದ ಪ್ರತಿಯೊಂದು ಸನ್ನಿವೇಶವೂ ಪ್ರೇಕ್ಷಕರ ಮನಸ್ಸಿನಲ್ಲಿ ಭಾವನೆಗಳನ್ನು ಮೂಡಿಸುವಂತೆ ರೂಪುಗೊಂಡಿದೆ.

ಬನ ತುಳು ಚಲನಚಿತ್ರದ ಪೋಸ್ಟ್​​ರ್​
ಬನ ತುಳು ಚಲನಚಿತ್ರದ ಪೋಸ್ಟ್​​ರ್​

ಚಿತ್ರದ ಕಥೆ ಮತ್ತು ನಿರೂಪಣೆ ಪ್ರೇಕ್ಷಕರನ್ನು ಆಪ್ತವಾಗಿ ಸೆಳೆಯುತ್ತಿದ್ದು, ಹಾಸ್ಯ, ಕುತೂಹಲ ಹಾಗೂ ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಮೆರುಗನ್ನು ಹೆಚ್ಚಿಸಿವೆ. ವಿಶೇಷವಾಗಿ ಚಿತ್ರದ ಅಂತ್ಯ ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವ ಅನುಭವ ನೀಡುತ್ತದೆ.

Also Read
ತುಳು ಭಾಷೆಯ ಬನ ಚಿತ್ರದಲ್ಲಿ ಖ್ಯಾತ ಪತ್ರಕರ್ತ ಮತ್ತು ನಿರೂಪಕ ಜಯಪ್ರಕಾಶ್ ಶೆಟ್ಟಿ ನಟನೆ: ಗಮನ ಸೆಳೆದ ಪೋಸ್ಟರ್ | Bana Film
ವಾರದ ಮಧ್ಯದಲ್ಲೂ ಹೌಸ್‌ಫುಲ್

‘ಬನ’ ಚಿತ್ರಕ್ಕೆ ಎಲ್ಲ ಧರ್ಮಗಳ ಬಂಧುಗಳಿಂದಲೂ ಪ್ರೀತಿ, ಪ್ರೋತ್ಸಾಹ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತಿರುವುದು ವಿಶೇಷ. ಭಾಷೆ ಮತ್ತು ಧರ್ಮದ ಗಡಿಗಳನ್ನು ಮೀರಿ ಒಂದು ಒಳ್ಳೆಯ ಕಥೆ ಜನರನ್ನು ಹೇಗೆ ಒಗ್ಗೂಡಿಸಬಲ್ಲದು ಎಂಬುದಕ್ಕೆ ಈ ಚಿತ್ರ ಉತ್ತಮ ಉದಾಹರಣೆಯಾಗಿದೆ.

ತುಳು ಸಂಸ್ಕೃತಿ, ಮಾನವೀಯ ಭಾವನೆಗಳು ಮತ್ತು ಕುಟುಂಬದ ಸಂಬಂಧಗಳನ್ನು ಒಳಗೊಂಡಿರುವ ‘ಬನ’ ಚಿತ್ರತಂಡದ ಪ್ರಯತ್ನಕ್ಕೆ ಪ್ರೇಕ್ಷಕರಿಂದ ದೊರೆಯುತ್ತಿರುವ ಬೆಂಬಲ ಹೊಸ ಹುರುಪು ನೀಡಿದೆ. ಚಿತ್ರದಲ್ಲಿ ನಟಿಸಿರುವ ಕಲಾವಿದರ ಸಹಜ ಅಭಿನಯವೂ ಕಥೆಗೆ ಜೀವ ತುಂಬಿದೆ.

ಒಟ್ಟಿನಲ್ಲಿ, ‘ಕಥೆಯೇ ನಾಯಕ’ ಎಂಬ ಮಾತಿಗೆ ತಕ್ಕಂತೆ ಮೂಡಿಬಂದಿರುವ ‘ಬನ’ ತುಳು ಚಿತ್ರರಂಗದಲ್ಲಿ ಪ್ರೇಕ್ಷಕರ ಪ್ರೀತಿಯನ್ನು ಗಳಿಸುತ್ತಿದೆ. ಒಳ್ಳೆಯ ಕಥೆಗಳನ್ನು ಪ್ರೀತಿಸುವ ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಭೇಟಿ ನೀಡಿ ‘ಬನ’ ಚಿತ್ರವನ್ನು ವೀಕ್ಷಿಸಿ, ಚಿತ್ರತಂಡವನ್ನು ಪ್ರೋತ್ಸಾಹಿಸಬೇಕೆಂಬುದು ಅಭಿಮಾನಿಗಳ ಆಶಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net