Mr Lucky - ಅದೃಷ್ಟದ ಹಿಂದೆ ಬಿದ್ದ "ಮಿ. ಲಕ್ಕಿ' ಹರ್ಷಿತ್ ರಂಗಸ್ವಾಮಿ

"ಭಲೇ ಅದೃಷ್ಟವೋ ಅದೃಷ್ಟ (1971), "ಅದೃಷ್ಟ ರೇಖೆ' (1989), "ಅದೃಷ್ಟ' (2009), "ಲಕ್ಕಿ' (2012), "ಲಕ್ಕಿ ಮ್ಯಾನ್​' (2022), "ಲಕ್​'(2024) ಹೀಗೆ ಅದೃಷ್ಟ ಮತ್ತು ಲಕ್​ ಶೀರ್ಷಿಕೆಗಳೊಂದಿಗೆ ಅದೃಷ್ಟ ಪರೀಕ್ಷೆಗಿಳಿದ ಸಿನಿಮಾಗಳ ಸಾಲೇ ಇದೆ. ಇದೀಗ ಈ ಸಾಲಿಗೆ "ಮಿಸ್ಟರ್​ ಲಕ್ಕಿ' ಎಂಬ ಸಿನಿಮಾ ಸೇರಿಕೊಂಡಿದೆ.
ಹರ್ಷಿತ್ ರಂಗಸ್ವಾಮಿ
ಹರ್ಷಿತ್ ರಂಗಸ್ವಾಮಿ
Published on: 

ಬೆಂಗಳೂರು: "ಭಲೇ ಅದೃಷ್ಟವೋ ಅದೃಷ್ಟ (1971), "ಅದೃಷ್ಟ ರೇಖೆ' (1989), "ಅದೃಷ್ಟ' (2009), "ಲಕ್ಕಿ' (2012), "ಲಕ್ಕಿ ಮ್ಯಾನ್​' (2022), "ಲಕ್​'(2024) ಹೀಗೆ ಅದೃಷ್ಟ ಮತ್ತು ಲಕ್​ ಶೀರ್ಷಿಕೆಗಳೊಂದಿಗೆ ಅದೃಷ್ಟ ಪರೀೆಗಳಿದ ಸಿನಿಮಾಗಳ ಸಾಲೇ ಇದೆ. ಇದೀಗ ಈ ಸಾಲಿಗೆ "ಮಿಸ್ಟರ್​ ಲಕ್ಕಿ' ಎಂಬ ಸಿನಿಮಾ ಸೇರಿಕೊಂಡಿದೆ. ಯುವ ನಿರ್ದೇಶಕ ಹರ್ಷಿತ್​ ರಂಗಸ್ವಾಮಿ ಚೊಚ್ಚಲ ಬಾರಿಗೆ ಆ್ಯಕ್ಷನ್​&ಕಟ್​ ಹೇಳಿರುವ ಈ ಚಿತ್ರದ ಶೂಟಿಂಗ್​ ಸದ್ದಿಲ್ಲದೇ ಪೂರ್ಣಗೊಂಡಿದೆ. ಇದೊಂದು ಫ್ಯಾಂಟಸಿ ಥ್ರಿಲ್ಲರ್​ ಜಾನರ್​ ಕಥೆಯಾಗಿದ್ದು, ಹೊಸ ದೃಷ್ಟಿಕೋನವನ್ನು ಪರಿಚಯಿಸವ ವಿಭಿನ್ನ ಪ್ರಯತ್ನವಾಗಿದೆ. ಯುವನಟ ರಾಮ್​ ತೇಜ್​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, "ಬ್ಲಿಂಕ್​', "ವಿಡಿಯೋ' ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಚೊಚ್ಚಲ ಬಾರಿಗೆ ನಟಿಸುತ್ತಿದ್ದಾರೆ. ಹಾಗೇ ರಾಯ, ರಿತಿ ಶೆಟ್ಟಿ, ಐಶ್ವರ್ಯಾ ದೇವರಾಜ್​ ಪ್ರಮುಖ ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ಪೋಸ್ಟ್​&ಪ್ರೊಡಕ್ಷನ್​ ಕಾರ್ಯಗಳಲ್ಲಿ ಬಿಜಿಯಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದೆ. ಅದರಂತೆ ಇದೇ ತಿಂಗಳ 30ರಂದು "ಮಿ. ಲಕ್ಕಿ' ತೆರೆಗೆ ಬರಲಿದೆ. ಉಳಿದಂತೆ ಪ್ರಸನ್ನ ಕುಮಾರ್​ ಎಂ.ಎಸ್​. ಸಂಗೀತ, ಸಾಗರ್​ ಎನ್​. ಛಾಯಾಗ್ರಹಣ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net