"ಮಮ್ಮಿ, ಐ ಲವ್ ಯೂ ಸೋ ಮಚ್" ಪವಿತ್ರಾ ಗೌಡ ಬರ್ತಡೇಗೆ ಖುಷಿ ಗೌಡ ಭಾವನಾತ್ಮಕ ಪೋಸ್ಟ್! Pavitra gowda

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬೆಂಗಳೂರು: ನಟಿ ಪವಿತ್ರಾ ಗೌಡ (Pavitra gowda) ಹುಟ್ಟುಹಬ್ಬದ ಹಿನ್ನಲೆಯಲ್ಲಿ  ಅವರ ಮಗಳು ಖುಷಿ ಗೌಡ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್​ ಹಂಚಿಕೊಂಡಿದ್ದು, ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 
ಪ್ರಸ್ತುತ ಪವಿತ್ರಾ ಗೌಡ ನ್ಯಾಯಾಂಗ ಬಂಧನದಲ್ಲಿರುವ ಹಿನ್ನೆಲೆಯಲ್ಲಿ, ಈ ಬಾರಿಯ ಜನ್ಮದಿನದ ಶುಭಾಶಯಗಳು ಚರ್ಚೆಗೆ ಗ್ರಾಸವಾಗಿದೆ.

ಪೋಸ್ಟ್​​ನಲ್ಲೇನಿದೆ...?

ಪವಿತ್ರಾ ಗೌಡ ಮಗಳು ಖುಷಿ ಗೌಡ ತಾಯಿಯನ್ನು ನೆನದು ಭಾವನಾತ್ಮಕ ಸಾಲುಗಳನ್ನು ಬರೆದಿದ್ದು, ಹುಟ್ಟು ಹಬ್ಬದ ಶುಭಾಯಗಳು ಮೈ ಫಾರೆವರ್ ಕ್ಯೂಟಿ. ಸಮಯ ಎಷ್ಟು ಬೇಗ ಮುಂದೆ ಹೋಗುತ್ತಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ, ನಿನ್ನ ಜೊತೆ ಕಳೆದ ಸಮಯ ತುಂಬ ಕಡಿಮೆಯಾಗಿದೆ ಎಂದು ವಿಡಿಯೋ ಮೂಲಕ ತಾಯಿಯನ್ನು ನೆನೆದಿದ್ದಾರೆ.
ಇನ್ನು ಪವಿತ್ರಾ ಜೈಲಿನಲ್ಲಿರುವ ಕಾರಣ ಈ ಬಾರಿ ಅದ್ದೂರಿ ಆಚರಣೆ ಇಲ್ಲದಿದ್ದರೂ, ಮಗಳು ತಾಯಿಯನ್ನು ನೆನದು ಮಾಡಿದ ಪೊಸ್ಟ್​ ಕುರಿತು,  ಕಷ್ಟದ ಸಮಯದಲ್ಲಿ ತಾಯಿಯ ಪರವಾಗಿ ಮಗಳು ನಿಲ್ಲುತ್ತಾಳೆ ಎಂಬ ಸಂದೇಶವನ್ನು ನೀಡುತ್ತಿದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಪ್ರತಿಕ್ರಿಯೆ

ಖುಷಿ ಗೌಡ ಅವರ ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದು, ಕೆಲವು ಅಭಿಮಾನಿಗಳು ಮಗಳ ಪ್ರೀತಿಯನ್ನು ಬೆಂಬಲಿಸಿದರೆ, ಇನ್ನು ಕೆಲವರು ಪ್ರಕರಣದ ಹಿನ್ನೆಲೆ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಹಿನ್ನಲೆ

ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನೊಬ್ಬ ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳುಹಿಸುತ್ತಿದ್ದ ಆರೋಪದ ಹಿನ್ನಲೆ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಸೂಚನೆಯಂತೆ, ಅಭಿಮಾನಿ ಸಂಘದ ಸದಸ್ಯರು ಆತನನ್ನು ಬೆಂಗಳೂರಿಗೆ ಕರೆಸಿ ಆರ್.ಆರ್. ನಗರದ ಪಟ್ಟಣಗೆರೆ ಶೆಡ್‌ನಲ್ಲಿ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಅವರು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದಾಗ್ಯೂ, ಬೆಂಗಳೂರಿನ 57ನೇ ಸಿಚಿಎಚ್  ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದಾಗ್ಯೂ, ಕಳೆದ 2025ರ ಡಿಸೆಂಬರ್​ನಲ್ಲಿ ಹತ್ಯೆಗೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ಪೋಷಕರನ್ನು ಪೊಲೀಸರು ತನಿಖೆ ನಡೆಸಿದ್ದು, ಸಧ್ಯ ವಿಚಾರಣೆಯು ಕೊನೆಯ ಹಂತದಲ್ಲಿದೆ ಎಂದು ಮಾಹಿತಿ ಬಂದಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net