ಶಿವಣ್ಣ-ಸುಧಾರಾಣಿ ಮದುವೆ ಬಗ್ಗೆ ಅಪಪ್ರಚಾರ; 'ಬೇಸಿಕ್ ಎಥಿಕ್ಸ್ ಇಟ್ಕೊಂಡ್ ಕೆಲಸ ಮಾಡ್ರಪ್ಪ' ಎಂದು ಗುಮ್ಮಿದ ನಟಿ..Sudharani

Sudharani
Sudharani
Published on
Sudharani Post: ಸೋಶಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ಫೇಕ್​ ನ್ಯೂಸ್​ಗಳ ಹಾವಳಿ ಹೆಚ್ಚಾಗಿದೆ. ದಂಪತಿಗಳ ವಿಚ್ಛೇದನ, ನಟಿಯರ ಪ್ರೀತಿ, ಪ್ರೇಮದಂತಹ ಖಾಸಗಿ ವಿಚಾರಗಳ ಬಗ್ಗೆ ಇಲ್ಲಸಲ್ಲದ ಸುದ್ದಿ ಮಾಡಲಾಗುತ್ತಿದೆ. ಅನುಪಮಾ ಗೌಡ ಅವರ ನಿಶ್ಚಿತಾರ್ಥ ಬಗ್ಗೆ ಎದ್ದಿದ್ದ ಊಹಾಪೋಹಕ್ಕೆ ಅವರು ಸರಿಯಾಗಿ ಕೌಂಟರ್​ ಕೊಟ್ಟು ಟ್ರೋಲ್​ ಪೇಜ್​ಗಳ ಚಳಿ ಬಿಡಿಸಿದ್ದರು. ಸದ್ಯ ಈ ಸಾಲಿನಲ್ಲಿ ಈಗ ಹಿರಿಯ ಮತ್ತು ಯಂಗ್​ ಅಂಡ್​​ ಎನರ್ಜಿಟಿಕ್​ ಹೀರೋಯಿನ್​​ ಸುಧಾರಾಣಿಯವರು ಸೇರಿದ್ದಾರೆ.
ಯೂಟ್ಯೂಬ್​, ಇನ್​ಸ್ಟಾಗ್ರಾಮ್​ನ ವ್ಯೂವ್ಸ್​ ಮತ್ತು ಲೈಕ್ಸ್​ ಹಾಗೂ ಫಾಲೋವರ್ಸ್​​ಗಾಗಿ ಹಲವರು ಸುಳ್ಳು ಸುದ್ದಿಗಳನ್ನು ಬರೆದು ಅದನ್ನೇ ಥಂಬ್​ನೇಲ್​ನಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ನಟ-ನಟಿಯರು ಸಂದರ್ಶನದಲ್ಲಿ ಮಾತನಾಡದ ವಿಚಾರವನ್ನು ಉಲ್ಲೇಖಿಸಿ, ಅಪಪ್ರಚಾರ ಮಾಡುವುದು ವಾಡಿಕೆಯಾಗಿದೆ. ಸುಧಾರಾಣಿಯವರಿಗೆ ನಟ ಶಿವರಾಜ್​ ಕುಮಾರ್​ ಮೇಲೆ ಪ್ರೀತಿ ಇತ್ತು ಎನ್ನುವ​ ಬಗ್ಗೆಯೂ ರೂಮರ್ಸ್​ ಎಬ್ಬಿಸಿದ್ದು, ಆ ಬಗ್ಗೆ ಸ್ಕ್ರೀನ್​ಶಾಟ್​ ಹಂಚಿಕೊಂಡು ನಟಿ ಕಿಡಿಕಾರಿದ್ದಾರೆ. ಕೇಸ್​ ದಾಖಲಿಸುವ ಎಚ್ಚರಿಕೆ ಕೊಟ್ಟಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?

1986ರಲ್ಲಿ ತೆರೆಕಂಡ 'ಆನಂದ್' ಸಿನಿಮಾ ಮೂಲಕ ಸುಧಾರಾಣಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ರಣರಂಗ, ಕಿಲಾಡಿ ಕಿಟ್ಟು, ದೇವತಾ ಮನುಷ್ಯ, ಆಸೆಗೊಬ್ಬ ಮೀಸೆಗೊಬ್ಬ, ಮನೆ ದೇವ್ರು ಹೀಗೆ ನಾನಾ ಹಿಟ್ ಸಿನಿಮಾಗಳನ್ನು ಸ್ಯಾಂಡಲ್​ವುಡ್​ಗೆ ಕೊಟ್ಟರು.
ಸದ್ಯ ಅವರ ಮತ್ತು ಶಿವಣ್ಣ ನಡುವಿನ ಸಂಬಂಧದ ಬಗ್ಗೆ ಚಾನೆಲ್​ವೊಂದು ಮಾಡಿರುವ ಅಪಪ್ರಚಾರದ ಸ್ಕ್ರೀನ್​ ಶಾಟ್​ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಹೀಗಿದೆ, "ಆನಂದ್​ ಸಿನಿಮಾದ ನಂತರ ಸುಧಾರಾಣಿಯವರು ಶಿವಣ್ಣನನ್ನು ಮದುವೆಯಾಗಬೇಕೆಂದು ಆಸೆ ಪಟ್ಟಿದ್ದರು. ಶಿವಣ್ಣನ ಮೇಲೆ ಅವರಿಗೆ ಪ್ರೀತಿ ಭಯ ಎರಡು ಇತ್ತು. ಡಾ. ರಾಜ್​ ಕುಮಾರ್​ ಮಗ ಆದ ಕಾರಣ ಇದನ್ನು ತೋರ್ಪಡಿಸಿಕೊಳ್ಳಲು ಆಗದೆ ಸುಮ್ಮನಾದರು ಈ ವಿಚಾರವನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ" ಎಂದು ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದೆ.

ಸುಧಾರಾಣಿ ಕೌಂಟರ್ ಕೊಟ್ಟಿದ್ದು ಹೀಗೆ​

ಅಂಬರೀಶ್​ ಅವರ ಫೇಮಸ್​ ಡೈಲಾಗ್​ "ನನ್ನ ಮೇಲೆ ಆಣೆ ಇಟ್ಟು ಹೇಳು" ಎನ್ನುವ ವಿಡಿಯೋ ಜೊತೆಗೆ ಅವರ ಸಾಕು ನಾಯಿ ಉತ್ತರಿಸುವಂತೆ ವಿಡಿಯೋ ಮಾಡಿದ್ದಾರೆ. ಇದು ಫೇಕ್​ ನ್ಯೂಸ್​ ಎಂದಿದ್ದು, ಸುಳ್ಳು ಸುದ್ದಿ ಪ್ರಚಾರ ಮಾಡಿದರೆ ಕೇಸ್​ ದಾಖಲಿಸೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. "ದಯವಿಟ್ಟು ಸ್ವಲ್ಪನಾದರೂ ನೈತಿಕತೆಯನ್ನು ಬೆಳೆಸಿಕೊಳ್ಳಿ. ನಿಮ್ಮ ವ್ಯೂವ್ಸ್​​ಗಾಗಿ ಸುಳ್ಳು ಸುದ್ದಿ ಹರಡೋದು ನಿಜಕ್ಕೂ ಬೇಸರ ಸಂಗತಿ. ಕಷ್ಟಪಟ್ಟು ಕೆಲಸ ಮಾಡಿ, ಪ್ರಾಮಾಣಿಕತೆಯಿಂದ ನಡೆದುಕೊಂಡು ಯಶಸ್ಸು ಕಂಡುಕೊಳ್ಳಿ" ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net