ಸ್ಯಾಂಡಲ್​ವುಡ್ ಸ್ಟಾರ್​ ಕಪಲ್ಸ್​ಗಳಿಂದ 'ಲ್ಯಾಂಡ್ ಲಾರ್ಡ್' ಚಿತ್ರದ ಹಾಡು ರಿಲೀಸ್​

ಲ್ಯಾಂಡ್​ ಲಾರ್ಡ್​ ಚಿತ್ರದ ನಿಂಗವ್ವ ನಿಂಗವ್ವ ಹಾಡು ರಿಲೀಸ್​
ಲ್ಯಾಂಡ್​ ಲಾರ್ಡ್​ ಚಿತ್ರದ ನಿಂಗವ್ವ ನಿಂಗವ್ವ ಹಾಡು ರಿಲೀಸ್​
Published on

ಪ್ರಮುಖ ಮುಖ್ಯಾಂಶಗಳು

  • ಜ.23ಕ್ಕೆ ಲ್ಯಾಂಡ್​ ಲಾರ್ಡ್​ ಸಿನಿಮಾ ತೆರೆಗೆ
  • ದುನಿಯಾ ವಿಜಯ್​ ಮತ್ತು ರಚಿತಾ ರಾಮ್​ ಮುಖ್ಯಭೂಮಿಕೆಯಲ್ಲಿ ನಟನೆ
  • ಚಿತ್ರದ ನಿಂಗವ್ವ ನಿಂಗವ್ವ ಹಾಡು ಬಿಡುಗಡೆ
ಬೆಂಗಳೂರು: ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ - ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ, ಜಡೇಶ್ ಕೆ.ಹಂಪಿ ನಿರ್ದೇಶನದ ಹಾಗೂ ನಟ ದುನಿಯಾ ವಿಜಯ್ ಮತ್ತು ನಟಿ ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ಅಭಿನಯದ 'ಲ್ಯಾಂಡ್ ಲಾರ್ಡ್' ಚಿತ್ರ ಶೀಘ್ರವೇ ಬಿಡುಗಡೆಯತ್ತ ಹೆಜ್ಜೆ ಹಾಕಿದೆ. ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ಬರೆದಿರುವ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ "ನಿಂಗವ್ವ ನಿಂಗವ್ವ" ಹಾಡು ಇದೀಗ ಅಧಿಕೃತವಾಗಿ ಬಿಡುಗಡೆಯಾಗಿದೆ.
ಗಾಯಕ ವಿಜಯ್ ಪ್ರಕಾಶ್ - ಅನನ್ಯ ಭಟ್ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಭೂಷಣ್ ಕೋರಿಯೋಗ್ರಫಿ ಮಾಡಿದ್ದಾರೆ‌. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆಗಳು ಲಭಿಸುತ್ತಿವೆ. 
ಸ್ಯಾಂಡಲ್​ವುಡ್​ನ ತಾರಾ ದಂಪತಿಗಳಾದ "ನೆನಪಿರಲಿ" ಪ್ರೇಮ್ - ಜ್ಯೋತಿ, ಡಾರ್ಲಿಂಗ್ ಕೃಷ್ಣ - ಮಿಲನ ನಾಗರಾಜ್ ಹಾಗೂ ತರುಣ್ ಸುಧೀರ್ - ಸೋನಾಲ್ ಅವರಿಂದ "ನಿಂಗವ್ವ ನಿಂಗವ್ವ" ಹಾಡನ್ನು ರಿಲೀಸ್ ಮಾಡಲಾಯಿತು. ಸಾಂಗ್ ಬಿಡುಗಡೆ ಕುರಿತು ಮಾತನಾಡಿದ ಸ್ಟಾರ್​ ಕಪಲ್ಸ್​, ಯೋಗರಾಜ್ ಭಟ್ ಅವರ ಸಾಹಿತ್ಯ, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ವಿಜಯ್ ಪ್ರಕಾಶ್ ಗಾಯ‌ನ ಹಾಗೂ ವಿಶೇಷವಾಗಿ ದುನಿಯಾ ವಿಜಯ್, ರಚಿತಾ ರಾಮ್ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 
ಜನವರಿ 23ರಂದು ತೆರೆ ಕಾಣಲಿರುವ ಲ್ಯಾಂಡ್ ಲಾರ್ಡ್​ ಚಿತ್ರದ  ಬಿಡುಗಡೆಗೆ ಕನ್ನಡ ಚಿತ್ರರಂಗದ ಕಲಾವಿದರಿಂದ ಶುಭಹಾರೈಕೆಗಳು ಬಂದಿವೆ. ಈ ಹಾಡು ಉತ್ತಮವಾಗಿ ಮೂಡಿಬಂದಿದೆ‌. ಸಾಂಗ್​ ಚಿತ್ರೀಕರಣ ಸಮಯದಿಂದಲೂ ಯಾವಾಗ ಬಿಡುಗಡೆಯಾಗಬಹುದೆಂದು ಕಾಯುತ್ತಿದ್ದೆ. ಸ್ವಾಮಿ ಅವರ ಛಾಯಾಗ್ರಹಣ, ಯೋಗರಾಜ್ ಭಟ್ ಅವರ ಸಾಹಿತ್ಯ, ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗು ವಿಜಯ್ ಪ್ರಕಾಶ್ ಅವರ ಗಾಯನ ಎಲ್ಲವೂ ಚೆನ್ನಾಗಿದೆ. ಇನ್ನೂ, ವಿಜಯ್ ಸರ್ ರಾಚಯ್ಯ ಪಾತ್ರದಲ್ಲಿ, ನಾನು ನಿಂಗವ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ. ಈ ಹಾಡಲ್ಲಿ ನಮ್ಮಿಬ್ಬರ ಅಭಿನಯಕ್ಕೆ ಎಲ್ಲರೂ ನೀಡುತ್ತಿರುವ ಮೆಚ್ಚುಗೆಗೆ ಮನ ತುಂಬಿ ಬಂದಿದೆ ಎಂದು ನಟಿ ರಚಿತಾ ರಾಮ್ ಸಂತಸ ವ್ಯಕ್ತಪಡಿಸಿದ್ದಾರೆ.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net